Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 04.02.2025

ಧೈನಂದಿನ ಧ್ಯಾನ(Kannada) – 04.02.2025

 

ಲಾವಕ್ಕಿ 

 

"ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು;…" - ಕೀರ್ತನೆ 105:40

 

ಲಾವಕ್ಕಿಗಳನ್ನು ಕುರಿತು ಸತ್ಯವೇದದಲ್ಲಿ ವಿಮೋ.16:12,13, ಅರಣ್ಯ.11:31 ರಂತಹ ಅನೇಕ ಸ್ಥಳಗಳಲ್ಲಿ ಓದಬಹುದು. ಕರ್ತನು ಇಸ್ರಾಯೇಲ್ಯರಿಗೆ ಲಾವಕ್ಕಿಗಳನ್ನು ಮಾಂಸವಾಗಿ ಕೊಡುತ್ತಾರೆ. ಮನ್ನಾ ಕೊಡಲ್ಪಡುವುದಕ್ಕಿಂತ ಮೊದಲು, ಲಾವಕ್ಕಿಗಳನ್ನು ಇಸ್ರಾಯೇಲ್ಯರಿಗೆ ಆಹಾರವಾಗಿ ಕೊಡಲ್ಪಟ್ಟಿತು. ಇದನ್ನು ವಿಮೋ. 16:12,13 ರಲ್ಲಿ ನೋಡುತ್ತೇವೆ. ಲಾವಕ್ಕಿಗಳು ಚಿಕ್ಕ ಪಕ್ಷಿಗಳಾಗಿದ್ದರೂ, ಅವುಗಳನ್ನು ಸಂಪೂರ್ಣವಾಗಿ ತಿನ್ನುವಂತಹ ರೀತಿಯಲ್ಲಿ ಸಮೃದ್ಧವಾದ ಪ್ರೋಟೀನ್‌ಗಳನ್ನು ಒಳಗೊಂಡಿದೆ. ಕರ್ತನು ತನ್ನ ಜನರ ಆಹಾರದ ಅಗತ್ಯಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಪೂರೈಸುತ್ತಾರೆ. 

         

ಆದರೆ ಅರಣ್ಯ. 11:31 ರಲ್ಲಿ ನಾವು ನೋಡುವಾಗ ಲಾವಕ್ಕಿಗಳು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂವಿುಗಿಂತ ಎರಡು ಮೊಳ ಎತ್ತರದಲ್ಲಿ ಬಿದ್ದಿದ್ದವು. ಅವುಗಳನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀಡಲು ಕಾರಣ ಅವರ ಇಚ್ಛೆಯೇ! ಜನರು ಆಹಾರಕ್ಕಾಗಿ, ಮಾಂಸಕ್ಕಾಗಿ ಅಳುತ್ತಿದ್ದಾರೆ. ಅರಣ್ಯ. 11:4,5 ರಲ್ಲಿ ನಮಗೆ ತಿನ್ನಲು ಮಾಂಸವನ್ನು ಕೊಡುವವರು ಯಾರು?

ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿಯನ್ನು ನೆನಪಿಸಿಕೊಳ್ಳುತ್ತೇವೆ.

 

ಕರ್ತನು ಅವರಿಗೆ ಈಗಾಗಲೇ ಲಾವಕ್ಕಿಗಳನ್ನು ಕೊಟ್ಟಿದ್ದಾರೆ. ಮನ್ನಾ ನೀಡಲಾಗಿದೆ. ಮಾನವನ ಅಗತ್ಯಗಳು ದಿನೇ ದಿನೇ ಬದಲಾಗುತ್ತವೆ. ನಮಗೆ ಬೇಕಾದ್ದು ಸಿಗಬೇಕು. ಅದು ಸಿಗದಿದ್ದಾಗ ಅಳುವುದು ಮತ್ತು ಗೊಣಗುವುದು ಇಸ್ರಾಯೇಲ್ಯರ ಪದ್ಧತಿಯಾಗಿತ್ತು. ಇಂದು, ನಾವು ಬಯಸಿದ್ದು ಸಿಗದಿದ್ದಾಗ ನಾವು ಕೂಡ ಗೊಣಗುತ್ತೇವೆ. ವಿಮೋ. 16:1-13 ರಲ್ಲಿ, ಮಾಂಸಕ್ಕಾಗಿ ಲಾವಕ್ಕಿಗಳನ್ನು ಅರ್ಪಿಸಲಾಯಿತು. ಆಗಲೂ ಅವರು ಗೊಣಗುತ್ತಿದ್ದರು. ಆದರೆ ಇಲ್ಲಿ ಅರಣ್ಯಕಾಂಡ 11 ನೇ ಅಧ್ಯಾಯದಲ್ಲಿ, ಅವರು ಅಳುತ್ತಿದ್ದಾರೆ. ನಾವು ಕೂಡ ಆಗಾಗ್ಗೆ ಹೀಗೆಯೇ ಕರ್ತನ ಬಳಿ ಎತ್ತಿದ್ದಕ್ಕೆಲ್ಲಾ ಅಳಲು ಪ್ರಾರಂಭಿಸುತ್ತೇವೆ. 

 

ಇಂತಹ ಕೂಗುಗಳು ನಮ್ಮ ಆಸೆಗಳನ್ನು ಬೇಕಾದರೆ ಪೂರೈಸಬಹುದು. ಆದರೆ ಅವು ದೇವರ ಕೋಪಕ್ಕೆ ಗುರಿಯಾಗುತ್ತವೆ ಎಂಬುದನ್ನು ಮರೆಯಬೇಡಿ. ಆತನ ಚಿತ್ತದ ಪ್ರಕಾರ ಮತ್ತು ಕರ್ತನ ಯೋಜನೆಯ ಪ್ರಕಾರ ನಮ್ಮ ಜೀವನದಲ್ಲಿ ಬರುವ ಆಶೀರ್ವಾದಗಳು ನಮ್ಮನ್ನು ಮೇಲಕ್ಕೆತ್ತುತ್ತವೆ. "ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದರೊಂದಿಗೆ ಆತನು ವ್ಯಸನವನ್ನು ಸೇರಿಸುವುದಿಲ್ಲ" ಎಂಬ ವಾಕ್ಯದ ಪ್ರಕಾರ, ಕರ್ತನು ನಮಗೆ ನೀಡುವ ಆಶೀರ್ವಾದಗಳು ನಮಗೆ ಸಂತೋಷವನ್ನು ತರುತ್ತವೆ. ಇಲ್ಲದಿದ್ದರೆ, ಲಾವಕ್ಕಿಗಳನ್ನು ತಿನ್ನುವಾಗ, ಇಸ್ರಾಯೇಲ್ಯರು ಅನುಭವಿಸಿದ ಅದೇ ಶಿಕ್ಷೆ ಮತ್ತು ಸಂಕಟವನ್ನು ನಾವು ಸಹ ಎದುರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡೋಣ. ಇಲ್ಲಿ, ಲಾವಕ್ಕಿಗಳು ನಮಗೆ ಒಂದು ಎಚ್ಚರಿಕೆಯ ಶಬ್ದವಾಗಿ ಕಾಣಲ್ಪಡುತ್ತಿದೆ.

- D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಆಲಯವಿಲ್ಲದ 1000 ಹಳ್ಳಿಗಳಲ್ಲಿ ಸಭೆಗಳ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)