Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 06.04.2021

ಧೈನಂದಿನ ಧ್ಯಾನ(Kannada) – 06.04.2021

ಎಚ್ಚರಗೊಳ್ಳು, ಪ್ರಾರ್ಥಿಸು

"ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು." – 1 ತಿಮೊಥೆ 2:2

ಗ್ರಾಮದಲ್ಲಿರುವ ಒಂದು ಮನೆಯಲ್ಲಿ ಹೋರಾಡುವ ಕೋಳಿಗಳನ್ನು ಸಾಕುತ್ತಿದ್ದರು. ದಿಢೀರೆಂದು ಒಂದು ದಿನ ರಾತ್ರಿ ಅವುಗಳು ವ್ಯತ್ಯಾಸವಾಗಿ ಶಬ್ಧ ಮಾಡುತ್ತಿದ್ದಾಗ, ಮನೆ ಯಜಮಾನನು ಏಕೆ ಹೇಗೆ ಕಿರುಚುತ್ತಿವೆ ಎಂದು ತಿಳಿಯಲು, ಬಂದು ಅವುಗಳ ಗೂಡನ್ನು ತೆರೆದಾಗ ಅವು ಓಡಿಹೋಗಿ ಬಹಳ ಅಧಿಕವಾಗಿ ಕಿರುಚಿತು. ಏನೆಂದು ಅಲ್ಲಿ ನೋಡಿದರೆ ಮನೆಯ ನೀರಿನ ಕೊಳಾಯಿಯ ಮಾರ್ಗದಲ್ಲಿ ಹಾವು ಒಳಗೆ ನುಗ್ಗಿತ್ತು. ಆ ಸಂದೇಶವನ್ನು ತಿಳಿಸಲು, ಮನೆಯಲ್ಲಿ ಇರುವವರನ್ನು ಕಾಪಾಡಲು ಐದು ಅರಿವುಳ್ಳ ಕೋಳಿ ತನ್ನಿಂದ ಸಾಧ್ಯವಾದಷ್ಟು ಶಬ್ಧ ಎಬ್ಬಿಸಿ ಎದುರಾಳಿಯಿಂದ ಯಾವ ಹಾನಿಯೂ ಆಗದಂತೆ ಕಾಪಾಡಿತು.

ಆ ಕಾಲದಲ್ಲಿ ಇಸ್ರಾಯೇಲ್ ಜನರನ್ನು ಆಳಲು ಅರಸರು ಇರಲಿಲ್ಲ. ಕರ್ತನೇ ಅವರನ್ನು ನಡೆಸಿದರು. ನಂತರ ನ್ಯಾಯಾಧಿಪತಿಗಳು, ನಂತರ ಪ್ರವಾದಿಗಳ ಮೂಲಕ ಆಳ್ವಿಕೆ ಮಾಡಿದರು. ಆದರೆ ಇಸ್ರಾಯೇಲ್ ಜನರು ಬೇರೆ ಜನರ ಹಾಗೆ ತಮ್ಮನ್ನೂ ಆಳಲು ಅರಸನು ಬೇಕೆಂದು ಕೇಳಿದಾಗ ಅವರ ಇಷ್ಟಕ್ಕೆ ಒಪ್ಪಿಸಿಕೊಟ್ಟು ಸೌಲನನ್ನು ಅರಸನಾಗಿ ಏರ್ಪಡಿಸಿ ಕೊಟ್ಟರು. ಅದು ಅವರ ದೃಷ್ಟಿಗೆ ವ್ಯಸನವಾಗಿತ್ತು. ನಂತರ ಸೌಲನನ್ನು ತಳ್ಳಿಬಿಟ್ಟು ದಾವೀದನನ್ನು ಅರಸನಾಗಿ ಏರ್ಪಡಿಸಿದರು. ದಾವೀದನು ದೇವರ ಹೃದಯಕ್ಕೆ ಒಪ್ಪುವವನಾಗಿದ್ದು ಜನರನ್ನು ದೇವರ ಆಲೋಚನೆಯಂತೆ ಆಳ್ವಿಕೆ ಮಾಡಿದನು. ಅದರ ನಂತರ ಬಂದವರು ದೇವರನ್ನು ಬಿಟ್ಟು ದಾರಿ ತಪ್ಪಿಹೋಗಿ ನಡೆದದ್ದರಿಂದ ದೇಶವು ದಾಸತ್ವಕ್ಕೆ ಹೋಯಿತು.

ನಾವು ದೇಶದಲ್ಲಿ ಸಮಾಧಾನವಾಗಿ ಜೀವಿಸಲು ಆಳ್ವಿಕೆ ಮಾಡುವವರಿಗಾಗಿ ಪ್ರಾರ್ಥಿಸಬೇಕಾದದ್ದು ನಮ್ಮ ಕರ್ತವ್ಯ. ಇಂದಿನ ಕಾಲಘಟ್ಟದಲ್ಲಿ ದೇವರ ಆಳ್ವಿಕೆ ನಮ್ಮ ದೇಶದಲ್ಲಿ ಕಾಣಲ್ಪಡಲು, ಅವರ ಚಿತ್ತವಾದವರು ಮಾತ್ರವೇ ಅಧಿಕಾರಕ್ಕೆ ಬರುವಂತೆ ನಾವು ಪ್ರಾರ್ಥಿಸಬೇಕಾದದ್ದು ಬಹಳ ಅಗತ್ಯವಾಗಿದೆ. ನೀತಿಯೊಂದಿಗೆ, ನಂಬಿಕೆಯೊಂದಿಗೆ, ಮನುಷ್ಯ ನ್ಯಾಯದೊಂದಿಗೆ, ಕರ್ತನಿಗೆ ಭಯಪಡುವ ಭಯದೊಂದಿಗೆ ಆಳ್ವಿಕೆ ಮಾಡುವ ನಾಯಕರು ಎದ್ದೇಳಬೇಕು. ಹಣ, ಪದವಿ, ಹೊಗಳಿಕೆಯ ಆಸೆ ಇಲ್ಲದವರಾಗಿ ಜನರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಜ್ಞಾನವಾಗಿ ಉತ್ತಮ ಆಳ್ವಿಕೆಯನ್ನು ಮಾಡುವಂತಹ ನಾಯಕರು ಎದ್ದೇಳಲು ನಾವು ಪ್ರಾರ್ಥಿಸಬೇಕು. ಹೇಗೆ ಒಂದು ಕೋಳಿ, ವಿರೋಧಿ ತನ್ನ ಮನೆಯೊಳಗೆ ನುಗ್ಗದಂತೆ ಶಬ್ಧ ಮಾಡಿ ತನ್ನ ಯಜಮಾನನ ಕುಟುಂಬವನ್ನು ಕಾಪಾಡಿತೋ ಅದರಂತೆ ಕ್ರೈಸ್ತರಾದ ನಾವು ನಮ್ಮ ದೇಶದ ಮೇಲೆ ಅಕ್ಕರೆಯುಳ್ಳವರಾಗಿ ದೇವರ ಚಿತ್ತ ಇರುವವರು ಮಾತ್ರವೇ ಅಧಿಕಾರಕ್ಕೆ ಬರುವಂತೆ ಆಸಕ್ತಿಯಿಂದ ಪ್ರಾರ್ಥಿಸೋಣ. ಎಲ್ಲಾದಕ್ಕಿಂತ ಮೇಲಾಗಿ ದೇವರು ಪ್ರಭುತ್ವ ಮಾಡುತ್ತಾರೆ. ಯಾವುದೂ ಅವರ ಕೈಮೀರಿ ನಡೆಯುವುದಿಲ್ಲ. ಆದ್ದರಿಂದ ಗಲಿಬಿಲಿ ಇಲ್ಲದಂತೆ ಪ್ರಾರ್ಥನೆಯೊಂದಿಗೆ ಇಂದು ನಮ್ಮ ವೋಟುಗಳನ್ನು ಹಾಕೋಣ.
-    Bro.ಹ್ಯಾನಿಸ್ ಸಾಮುವೇಲ್

ಪ್ರಾರ್ಥನಾ ಅಂಶ:-
ದೇಶವನ್ನು ಸ್ವತಂತ್ರಿಸಿಕೊಳ್ಳುವವರ ತರಬೇತಿ ಕೂಟದಲ್ಲಿ ಭಾಗವಹಿಸಿರುವ ದೇವರ ಮಕ್ಕಳು ಕರ್ತನಿಗಾಗಿ ಎದ್ದು ಪ್ರಕಾಶಿಸುವಂತೆ ಪ್ರಾರ್ಥಿಸೋಣ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)