Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 18.09.2024

ಧೈನಂದಿನ ಧ್ಯಾನ(Kannada) – 18.09.2024

 

ಕರುಣೆಯುಳ್ಳ ದೇವರು

 

"ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು" - ಮತ್ತಾಯ 5:7

  

ಅಮೆರಿಕದ ಬಡ ಕುಟುಂಬದಲ್ಲಿ ಜನಿಸಿದ ಹದಿಹರೆಯದ ಯುವಕ ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ಅರೆಕಾಲಿಕವಾಗಿ ಡೋರ್ ಟು ಡೋರ್ ಡೆಲಿವರಿ ವ್ಯಾಪಾರ ಮಾಡುತ್ತಿದ್ದನು. ಒಂದು ದಿನ ಅವನು ತನ್ನ ಅನೇಕ ಅಲೆದಾಡುವಿಕೆಯಿಂದ ತುಂಬಾ ದಣಿದನು ಮತ್ತು ಹಸಿದನು, ಅವನ ಸರಕುಗಳು ಮಾರಾಟವಾಗಲಿಲ್ಲ; ಅವನು ಒಂದು ಮನೆಯ ಬಾಗಿಲು ತಟ್ಟಿದಾಗ ಒಬ್ಬ ಮಹಿಳೆ ಹೊರ ಬಂದಳು. ಅವನು ಆಕೆಯ ಬಳಿ ನೀರು ಕೇಳಿದನು, ಅವನ ದಣಿದ ಮುಖವನ್ನು ನೋಡಿದ ಮಹಿಳೆ ಅವನಿಗೆ ನೀರಿನ ಬದಲಿಗೆ ಒಂದು ಲೋಟ ಹಾಲು ಕೊಟ್ಟಳು. ಹಸಿದ ಹುಡುಗ ಉತ್ಸಾಹದಿಂದ ಅದನ್ನು ತೆಗೆದುಕೊಂಡು ಕುಡಿದನು. ಅವನು ಆ ಮಹಿಳೆಗೆ ನಾನು ನಿಮಗೆ ಋಣಿಯಾಗಿರುತ್ತೇನೆ ಎಂದನು. ಆಕೆ ಮುಗುಳ್ನಕ್ಕು, ಪರವಾಗಿಲ್ಲ ನಿನ್ನ ಆರೋಗ್ಯವನ್ನು ನೋಡಿಕೋ ಎಂದಳು. ಹಿಂದೆ ಮುಂದೆ ಗೊತ್ತಿಲ್ಲದವರು, ಸೌಜನ್ಯವಾಗಿ ಪ್ರೀತಿಯಿಂದ ಮಾತನಾಡಿ, ಆತಿಥ್ಯವನ್ನು ನೀಡಿದ್ದನ್ನು ನೆನಪಿಸಿಕೊಂಡನು ಆ ಯುವಕ. ತನಗೆ ಸಹಾಯ ಮಾಡಿದ ಮಹಿಳೆಯನ್ನು ಅವನು ಮರೆಯಲೇ ಇಲ್ಲ.   

  

ಹುಡುಗ ಕಷ್ಟಪಟ್ಟು ಓದಿ ವೈದ್ಯನಾದನು. ಒಂದು ದಿನ ಅವನು ತನ್ನ ಕ್ಲಿನಿಕ್‌ಗೆ ಬಂದ ಮಹಿಳೆಯನ್ನು ಗುರುತಿಸಿದನು. ಮಹಿಳೆಯ ದೀರ್ಘಕಾಲದ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ನಿರ್ಧರಿಸಿದನು. ಸುದೀರ್ಘ ಚಿಕಿತ್ಸೆ ಬಳಿಕ ಆಕೆ ಗುಣವಾದಳು. ವೈದ್ಯರು ದೊಡ್ಡ ಮೊತ್ತವನ್ನು ಕೇಳುತ್ತಾರೆ ಎಂದು ಮಹಿಳೆ ಭಾವಿಸಿದ್ದರು. ಆದರೆ ಆ ವೈದ್ಯರು ಚಿಕಿತ್ಸೆಯ ಹಣವನ್ನು ಕವರ್ ನಲ್ಲಿ ಹಾಕಿ ಡಾ. ಹೊವಾರ್ಡ್ ಕೆಲ್ಲಿ (ಒಂದು ಲೋಟ ಹಾಲು) ಇದನ್ನು ಪಾವತಿಸಿಬಿಟ್ಟರು ಎಂಬ ಸಹಿ ಇತ್ತು. ಆಗ ಆ ಮಹಿಳೆ ಆಶ್ಚರ್ಯದಿಂದ ಅವನತ್ತ ನೋಡಿದಾಗ ಹಳೆಯ ಕಾರ್ಯವನ್ನು ನೆನಪಿಸಿದರು ಡಾಕ್ಟರ್. ಆ ಮಹಿಳೆಯ ಕಣ್ಣಲ್ಲಿ ನೀರು ಸುರಿಯಿತು. ನಾವು ಮಾಡುವ ಒಳ್ಳೆಯದಕ್ಕೆ ಇಹದಲ್ಲಿ ಮತ್ತು ಪರಲೋಕದಲ್ಲಿ ಪ್ರತಿಫಲವಿದೆ ಎಂದು ಸತ್ಯವೇದವು ಹೇಳುತ್ತಿದೆ.

 

1. ದೊರ್ಕಳು:- ಅಪೊಸ್ತಲ 9:36-42 ದೊರ್ಕಳು ಮಾಡಿದ ಒಳ್ಳೆಯದಕ್ಕಾಗಿ, ದೊರ್ಕಳಿಗೆ ಹೊಸ ಜೀವನವನ್ನು ನೀಡಲಾಯಿತು. ಕರುಣೆ ತೋರಿದ ದೊರ್ಕಳು ಕರುಣೆಯನ್ನು ಪಡೆದಳು.   

 

2. 2. ಚಾರೆಪ್ತಾ ಊರಿನ ವಿಧವೆ:- ಪ್ರವಾದಿಯಾದ ಎಲೀಯನಿಗೆ ಮಾಡಿದ ಒಳ್ಳೆಯದಕ್ಕಾಗಿ, ಇಡೀ ಕುಟುಂಬ ದೀರ್ಘ ದಿನಗಳವರೆಗೆ ಒಳ್ಳೆಯದನ್ನು ನೋಡಲು ದೇವರು ಸಹಾಯ ಮಾಡಿದರು. ಕರುಣೆ ತೋರಿದ ಚಾರೆಪ್ತಾ ಊರಿನ ವಿಧವೆ ಕುಟುಂಬ ಸಮೇತರಾಗಿ ಕರುಣೆ ಪಡೆದರು. ಈ ಚಿಕ್ಕವರಲ್ಲಿ ಒಬ್ಬನಿಗೆ ನೀವು ಏನು ಮಾಡಿದಿರೋ, ಅದನ್ನು ನನಗೇ ಮಾಡಿದ್ದೀರಿ ಎಂದು ಯೇಸು ಹೇಳಿದರು. ಒಳ್ಳೆಯ ಸಮಾರ್ಯನಂತೆ ನಾವು ಇತರರಿಗೆ ಒಳ್ಳೆಯದನ್ನು ಮಾಡೋಣ. ಪರಲೋಕದ ಜ್ಞಾಪಕ ಪುಸ್ತಕದಲ್ಲಿ ನಮ್ಮ ಕ್ರಿಯೆಗಳನ್ನು ದಾಖಲಿಸೋಣ. ದೇವರಿಗೇ ಮಹಿಮೆ ಉಂಟಾಗಲಿ. ಆಮೆನ್!  

 

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಸಹ ಸೇವಕರ ಸೌಖ್ಯಕ್ಕಾಗಿ, ಅವರು ಭೇಟಿ ನೀಡುವ ಹಳ್ಳಿಗಳಲ್ಲಿ ಉಜ್ಜೀವನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)