Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 17.09.2024

ಧೈನಂದಿನ ಧ್ಯಾನ(Kannada) – 17.09.2024

 

ಉಚಿತ

 

"ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ" - ಪ್ರಕಟಣೆ. 22:17

 

19 ನೇ ಶತಮಾನದಲ್ಲಿ, ಇರಾನ್‌ನ ಯುವಕ ಮನ್ಸೂರ್ ಸಿಂಗ್, ಯೇಸು ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ದಂತವೈದ್ಯರಾಗಿದ್ದ ಮನ್ಸೂರ್ ಸಿಂಗ್ ರವರು ಉಚಿತವಾಗಿ ವೈದ್ಯಕೀಯ ಸೇವೆ ಮಾಡುತ್ತಿದ್ದು, ಸುವಾರ್ತೆ ಸಾರುತ್ತಿದ್ದರು. ಒಂದು ಸನ್ನಿವೇಶದಲ್ಲಿ, ಅವರು ಶಿರಾಯಿ ಜೈಲಿನಲ್ಲಿದ್ದಾಗ, ಅಲ್ಲಿನ ಅಧಿಕಾರಿ ಮನ್ಸೂರ್ ಸಿಂಗ್ ಅವರ ಬಳಿಯಿದ್ದ ಹೊಸ ಒಡಂಬಡಿಕೆಯನ್ನು ತೋರಿಸಿ ಇದರ ಬೆಲೆ ಎಷ್ಟು? ಎಂದರು. “ಪುಸ್ತಕ ಉಚಿತ” ಎಂದು ತಾಳ್ಮೆಯಿಂದ ಹೇಳಿದರು. ಅಯೋಗ್ಯ ಪುಸ್ತಕಕ್ಕೆ ಇದೇ ಸರಿಯಾದ ಬೆಲೆ ಎಂದು ಅಧಿಕಾರಿ ನಗುತ್ತಾ ಗೇಲಿ ಮಾಡಿದರು. ನಂತರ ಈ ಬೆಳಕಿನ ದೀಪವನ್ನು ಹೆಚ್ಚಿನ ಬೆಲೆಗೆ ಖರೀದಿಸಿರುವುದಾಗಿ ಅಧಿಕಾರಿಯೊಬ್ಬರು ಪಕ್ಕದಲ್ಲಿದ್ದವರಿಗೆ ತಿಳಿಸಿದರು. ಮನ್ಸೂರಸಿಂಗ್ ಕಿಟಕಿಯ ಮೂಲಕ ಸೂರ್ಯನನ್ನು ತೋರಿಸಿ ದಿನವಿಡೀ ಬೆಳಕನ್ನು ನೀಡುವ ಇದಕ್ಕಾಗಿ ನೀವು ಎಷ್ಟು ಪಾವತಿಸುತ್ತೀರಿ? ಎಂದು ಕೇಳಿದರು. ಉತ್ತರಿಸಲು ಸಾಧ್ಯವಾಗದ ಅಧಿಕಾರಿಯ ಬಳಿ ಮನ್ಸೂರ್ ಮಾನವ ನಿರ್ಮಿತ ಕೃತಿಗಳಿಗೆ ಹೆಚ್ಚಿನ ಬೆಲೆ ಬೇಕಾಗುತ್ತದೆ . ಆದರೆ ಬೆಲೆಕಟ್ಟಲಾಗದ ನೀರು, ಗಾಳಿ, ಸೂರ್ಯ, ಚಂದ್ರ ಇತ್ಯಾದಿಗಳನ್ನು ಉಚಿತವಾಗಿಯೇ ಕೊಡುತ್ತಾರೆ. ಸತ್ಯವೇದವೂ ಹಾಗೆಯೇ! ಯೇಸು ಕ್ರಿಸ್ತನು ಶಿಲುಬೆಯ ಮೇಲೆ ತನ್ನ ರಕ್ತವನ್ನು ಸುರಿಸಿ ಕ್ಷಮಾಪಣೆ ಮತ್ತು ವಿಮೋಚನೆಯನ್ನು ಉಚಿತವಾಗಿ ನೀಡಿದ್ದಾರೆ ಎಂದು ಹೇಳಿದರು. ತನ್ನ ತಪ್ಪಿನ ಅರಿವಾದ ಅಧಿಕಾರಿ ಮನ್ಸೂರ್ ಬಳಿ ಕ್ಷಮೆ ಯಾಚಿಸಿದರು. 

  

ಅಪೊಸ್ತಲರ ಕೃತ್ಯಗಳು ಮೂರನೇ ಅಧ್ಯಾಯದಲ್ಲಿ, ಪೇತ್ರ ಮತ್ತು ಯೋಹಾನರು ದೇವಾಲಯಕ್ಕೆ ಹೋಗುವಾಗ ಹುಟ್ಟು ಕುಂಟನೊಬ್ಬ ಇವರನ್ನು ನೋಡಿ ಭಿಕ್ಷೆ ಕೇಳಿದನು. ಅದಕ್ಕವರು ಬೆಳ್ಳಿ ಬಂಗಾರ ನಮ್ಮ ಬಳಿ ಇಲ್ಲ. ನನ್ನಲ್ಲಿರುವದನ್ನು ನಿನಗೆ ಕೊಡುತ್ತೇನೆ ಎಂದು ಹೇಳಿ ಯೇಸುವಿನ ಹೆಸರಿನಲ್ಲಿ ಎದ್ದು ನಡೆಯಲು ಹೇಳಿದರು. ಹುಟ್ಟುಕುಂಟನು ಎದ್ದು, ನಿಂತು, ನಡೆದು, ಜಿಗಿದು ದೇವರನ್ನು ಮಹಿಮೆಪಡಿಸಿದನು. ಅವನು ಅದ್ಭುತವಾದ ಸ್ವಸ್ಥತೆಯನ್ನು ಉಚಿತವಾಗಿ ಪಡೆದನು.

 

ಹೌದು, ನನಗೆ ಪ್ರಿಯವಾದವರೇ! ಮನುಷ್ಯರ ಪಾಪವು ಕ್ಷಮಿಸಲ್ಪಡಲು ಎಷ್ಟು ಪಾವತಿಸಿದರೂ ಕ್ಷಮೆಯಿಲ್ಲ. ಆದರೆ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ಒಂದೇ ಯಜ್ಞವಾಗಿ ಕೊಟ್ಟರು. ನಾವು ನಮ್ಮ ಪಾಪವನ್ನು ಯೇಸುವಿನ ಬಳಿ ಒಪ್ಪಿಕೊಂಡು ಆತನ ಕಡೆಗೆ ನೋಡಿದರೆ ರಕ್ಷಣೆಯು ಉಚಿತವೇ! ಅಂತ್ಯವಿಲ್ಲದ ಪಾಪ, ಅನಾರೋಗ್ಯ ಮತ್ತು ಸಂಕೋಲೆಗಳಿಂದ ವಿಮೋಚನೆಗಾಗಿ ಯೇಸುವನ್ನು ನೋಡಿ ಕರೆಯಿರಿ! ಬೆಲೆಯುಳ್ಳ ರಕ್ಷಣೆ, ವಿಮೋಚನೆ, ಸ್ವಸ್ಥತೆ ಸಿಗುತ್ತದೆ ಮತ್ತು ಕೊರತೆಗಳು ದೂರವಾಗುತ್ತವೆ. ದೇವರು ಎಲ್ಲಾ ಆಶೀರ್ವಾದಗಳನ್ನು ಉಚಿತವಾಗಿ ನೀಡಲು ಕಾಯುತ್ತಿದ್ದಾರೆ. ಇಷ್ಟವಿರುವವರು ಯಾವುದೇ ಹಣವಿಲ್ಲದೆ ತೆಗೆದುಕೊಳ್ಳಬಹುದು.

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ದೆಬೋರಾಳ್ ಸೇವೆಗಳ ಪ್ರಾರ್ಥನೆಗಳು ಕೇಳಲ್ಪಡಲು ಮತ್ತು ಅವರ ಸೇವೆಗಳು ಆಶೀರ್ವದಿಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)