Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 04.04.2021 (Kids Special)

ಧೈನಂದಿನ ಧ್ಯಾನ(Kannada) – 04.04.2021 (Kids Special)

ಮರಣವನ್ನು ಜಯಿಸಿ ಎದ್ದವರು

"...ಜಯವು ಮರಣವನ್ನು ನುಂಗಿತು..." - 1ಕೊರಿಂಥ 15:54

ಕೂ...... ಚುಕ್ಕುಬುಕ್ಕು..... ಚುಕ್ಕುಬುಕ್ಕು....ಕೂ..... ಎಂದು ಶಬ್ಧ ಕೇಳಿದ ಕೂಡಲೇ Train-ಐ ನೋಡಬೇಕು ಎಂದು ಆಸೆ ಬರುತ್ತದೆ ತಾನೆ! Train-ನಲ್ಲಿ ಊರಿಗೆ ಹೋಗ್ಬೇಕು ಎಂದರೆ ತುಂಬಾ ಜಾಲಿಯಾಗಿ ಇರುತ್ತದೆ. ಇದೇ ರೀತಿ Train-ನಲ್ಲಿ ಹೋಗುವುದನ್ನು, ಬರುವುದನ್ನು ನೋಡಿ ಆನಂದಿಸುತ್ತಿದ್ದನು ಒಬ್ಬ ಕುರಿಕಾಯುವ ಹುಡುಗ Train ಓಡಿಸುವವರು ಅವನನ್ನು ನೋಡಿ ನಗುತ್ತಿದ್ದರು. ಇವನು ಅದಕ್ಕೆ ಬದಲಾಗಿ ಟಾ....ಟಾ.... Bye ಎಂದು ಹೇಳುತ್ತಿದ್ದನು. ಇದು ಇವನಿಗೆ ಬಹಳ ಸಂತೋಷವನ್ನುಂಟುಮಾಡುತ್ತಿತ್ತು. ಹೀಗೆ ದಿನವೂ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ಕುರಿ ಮೇಯಿಸುತ್ತಲೆ Train ಬರೋಣಕ್ಕಾಗಿ ಕಾಯುತ್ತಾ ಇದ್ದನು. ಒಂದು ದಿನ ಧಿಡೀರೆಂದು ಸಂಭವಿಸಿದ ಪ್ರವಾಹದಿಂದಾಗಿ Train  ನ ಹಳಿಗಳು ಒಡೆದು ಹೋಗಿರುವುದನ್ನು ಕಂಡ ಆ ಚಿಕ್ಕ ಹುಡುಗ ಆ ಕಡೆ ಈ ಕಡೆ ಓಡಿದನು, ಏನು ಮಾಡುವುದೆಂದೇ ಅರ್ಥವಾಗಲಿಲ್ಲ. Train ನನ್ನು ಹೇಗೆ ನಿಲ್ಲಿಸುವುದು ಎಂದು ಯೋಚಿಸುತ್ತಲೇ ಆ ಹಳಿಗಳ ಮುಂದೆ ನಡೆಯಲು ಪ್ರಾರಂಭಿಸಿದನು. Train ಶಬ್ಧವನ್ನು ಕೇಳಿದ ಕೂಡಲೇ ಇನ್ನೂ ಮುಂದಕ್ಕೆ ಓಡಿದನು, ಎರಡು ಕೈಗಳನ್ನೂ ಆಡಿಸಿ ನೋಡಿದನು. ಆ ಡ್ರೈವರ್ ಗೆ ಏನೂ ಅರ್ಥವಾಗಲಿಲ್ಲ. ಯಾವಾಗಲೂ ಹೊರಗಿ ನಿಂತು ತಾನೇ ಟಾಟಾ ಹೇಳುತ್ತಾನೆ ಹಳಿಗಳ ಮೇಲೆ ನಿಂತಿದ್ದಾನೆ! ಎಂದು ನೆನೆಸಿ Train ನನ್ನು ನಿಲ್ಲಿಸಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ ಸ್ವಲ್ಪ ದೂರ ಹೋಗಿ Train ನಿಂತುಹೋಯಿತು. ಆ ಚಿಕ್ಕ ಹುಡುಗನ ಶರೀರರವು ಆ ಹಳಿಗಳ ಮೇಲೆ ಚದುರಿಹೋಗಿ ಬಿದ್ದಿತ್ತು. ಏಕೆ ಈ ಹುಡುಗ ಸತ್ತು ಹೋದನು ಎಂದು ಒಬ್ಬರಿಗೂ ಗೊತ್ತಿಲ್ಲ. ಸ್ವಲ್ಪ ದೂರ ನಡೆದು ಹೋಗಿ ನೋಡಿದರೆ ಹಳಿಗಳು ಒಡೆದು ಹೋಗಿ ಬಿದ್ದಿರುವುದನ್ನು ಕಂಡ ಎಲ್ಲರ ಹೃದಯವೂ ಒಡೆದು ಹೋಯಿತು. Train ನಲ್ಲಿ ಪ್ರಯಾಣಿಸಿದ ಎಲ್ಲರ ಪ್ರಾಣವನ್ನು ಕಾಪಾಡಲು ಈ ಹುಡುಗನು ಮಾಡಿದ ಕಾರ್ಯವನ್ನು ನೆನೆಸುವಾಗ, ಎಲ್ಲರ ಕಣ್ಣುಗಳು ಜಲಧಾರೆಯಾದವು.

ಈ ಲೋಕದಲ್ಲಿ ಪ್ರಯಾಣ ಮಾಡುತ್ತಿರುವ ನಮ್ಮ ಪ್ರಯಾಣವು ಸುರಕ್ಷಿತವಾಗಿ ಇರಬೇಕೆಂಬುದಕ್ಕಾಗಿ, ಯೇಸು ಶಿಲುಬೆಯಲ್ಲಿ ಜಡಿಯಲ್ಪಟ್ಟರು. ನಮ್ಮ ಪಾಪಗಳಿಗಾಗಿ ರಕ್ತವನ್ನು ಸುರಿಸಿ ಮರಣ ಹೊಂದಿದರು. ಆದರೂ ಒಂದು ಸಂತೋಷಕರವಾದ ಸುದ್ದಿ ಯೇಸು ಜೀವಂತವಾಗಿ ಎದ್ದರು. ಅವರ ಸಮಾಧಿಯನ್ನು ಇಂದಿನವರೆಗೂ ತೆರೆದೇ ಇಡಲ್ಪಟ್ಟಿದೆ. ಒಬ್ಬ ಸ್ನೇಹಿತನು ತನ್ನ ಸ್ನೇಹಿತನಿಗಾಗಿ ಪ್ರಾಣವನ್ನು ಕೊಡಬಹುದು. ಆದರೆ ಜೀವಂತವಾಗಿ ಎದ್ದೇಳಲು ಸಾಧ್ಯವಿಲ್ಲ. ಯೇಸುಕ್ರಿಸ್ತನೊಬ್ಬರು ಮಾತ್ರವೇ ಜೀವಂತವಾಗಿ ಎದ್ದರು ಮರಣವನ್ನು ಜಯವಾಗಿ ಮಾರ್ಪಡಿಸಿದವರು.

ಪ್ರೀತಿಯ ಪುಟ್ಟ ತಮ್ಮ, ತಂಗಿ, ಯೇಸು ಕ್ರಿಸ್ತನು ಜೀವಂತವಾಗಿ ಎದ್ದ ಈ ದಿನವೇ ಈಸ್ಟರ್ ಹಬ್ಬವಾಗಿ ಆಚರಿಸುತ್ತಿದ್ದೇವೆ. ಮರಣ, ಪಾತಾಳ, ಸೈತಾನ ಎಲ್ಲವನ್ನು ಯೇಸುಕ್ರಿಸ್ತನು ಜಯಿಸಿಬಿಟ್ಟರು. ನೀನು ಕೂಡ ಮರಣವನ್ನು ಗೆದ್ದ ಯೇಸುಕ್ರಿಸ್ತನನ್ನು ಹಿಡಿದುಕೋ. ಜಯಕರವಾದ ಜೀವನವನ್ನು ಜೀವಿಸಲು ನಿನಗೆ ಸಹಾಯ ಮಾಡುತ್ತಾರೆ. ಹಲ್ಲೇಲೂಯ.
-    Mrs. ಜೀವಾ ವಿಜಯ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)