Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 02.04.2021

ಧೈನಂದಿನ ಧ್ಯಾನ(Kannada) – 02.04.2021

ಗೆಲುವಿನ ಚಿಹ್ನೆ

"ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ;..." - ಗಲಾತ್ಯದವರಿಗೆ 6:14

ಕ್ರಿ.ಶ.312 ರಲ್ಲಿ ರೋಮ್ ಸಾಮ್ರಾಜ್ಯದ ಅರಸನು ಕಾನ್ಸ್ಟಾಂಟೆನ್ ಎಂಬವರಿಗೆ ವಿರೋಧವಾಗಿ ಮಾಕ್ಸಿನಿಡಿಯಸ್ ಎಂಬ ಅರಸನು ಯುದ್ಧಕ್ಕೆ ಬಂದನು. ಆ ಸಮಯ ಬಹಳ ಗಲಭೆಯಿಂದ ತುಂಬಿದ್ದ ಕಾನ್ಸ್ಟಾಂಟೆನ್ ತನ್ನ ಕನಸಿನಲ್ಲಿ ಪ್ರಕಾಶವಾದ ಶಿಲುಬೆಯೊಂದನ್ನು ಅದರ ಪಕ್ಕದಲ್ಲಿಯೇ  "ಈ ಗುರುತಿನಿಂದ ನೀನು ಗೆಲುವನ್ನು ಕಾಣುತ್ತೀಯ" ಎಂಬ ಬರಹವನ್ನು ನೋಡಿ, ಉತ್ಸಾಹದೊಂದಿಗೆ ಎಚ್ಚರವಾದನು. ಆ ರಾತ್ರಿಯಲ್ಲಿ ಸೈನಿಕರೆಲ್ಲರು ತಮ್ಮ ಗುರಾಣಿ ಗಳಲ್ಲಿ ಶಿಲುಬೆಯ ಗುರುತನ್ನು ಬರೆದುಕೊಂಡು ಯುದ್ಧಕ್ಕೆ ಸಿದ್ಧರಾಗುವಂತೆ ಆಜ್ಞೆ ಕೊಟ್ಟನು. ಕೊನೆಗೆ ರೋಮಾ ಸೈನ್ಯವು ಮಾಕ್ಸನಿಡಿಯಸಿನ್ ಸೈನ್ಯವನ್ನು ಸೋಲಿಸಿ ಬಹಳ ದೊಡ್ಡ ಗೆಲುವನ್ನು ಹೊಂದಿದರು. ಶಿಲುಬೆಯ ಗುರುತಿನ ಮೂಲಕ ಗೆಲುವನ್ನು ಪಡೆದ ಕಾನ್ಸ್ಟಾಂಟೆನ್ ಆ ದಿನ ಮೊದಲುಗೊಂಡು ಕ್ರಿಸ್ತನನ್ನು ಹಿಂಬಾಲಿಸಿದ ಹಾಗೆ ಚರಿತ್ರೆಯು ಹೇಳುತ್ತಿದೆ. ಅವರನ್ನು ಹಿಂಬಾಲಿಸಿದ ಅನೇಕರು, ಕ್ರಿಸ್ತನನ್ನು ಹಿಂಬಾಲಿಸಲು ಪ್ರಾರಂಭಿಸಿದರು.

ಇಂದು, ಯೇಸುಕ್ರಿಸ್ತನ ಶಿಲುಬೆಯ ಮರಣವನ್ನು ಲೋಕದಲ್ಲಿರುವ ಎಲ್ಲಾ ಸಭೆಗಳು ನೆನೆಸಲಿದೆ. ಶಾಪದ ಚಿಹ್ನೆಯಾಗಿ ಕಾಣಲ್ಪಟ್ಟ ಶಿಲುಬೆ ಯೇಸುಕ್ರಿಸ್ತನು ಸತ್ತು, ಹೂಣಲ್ಪಟ್ಟು ಜೀವಂತವಾಗಿ ಎದ್ದದ್ದರ ನಿಮಿತ್ತವಾಗಿ ಅದು ಗೆಲುವಿನ ಚಿಹ್ನೆಯಾಗಿ ಮಾರ್ಪಟ್ಟಿತು. ಅಪೊಸ್ತಲನಾದ ಪೌಲನು ಗಲಾತ್ಯ ಸಭೆಯವರೆಗೆ ಬರೆಯುವಾಗ  "ನಾನೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಹೊರತು ಬೇರೆ ಯಾವುದರ ಬಗ್ಗೆಯೂ ಹೆಚ್ಚಳ ಪಡುವುದಿಲ್ಲ"  ಎಂದು ಹೇಳಿದರು. ಹೌದು, ಹೆಚ್ಚಳ ಪಡಬೇಕಾದ ಚಿಹ್ನೆ ಶಿಲುಬೆಯೆ, ನಮ್ಮ ಜೀವನದ ಗೆಲುವಿನ ಚಿಹ್ನೆ ಶಿಲುಬೆಯೆ. ಶಿಲುಬೆಯ ನೆರಳು ನಾವು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳ. ಆದರೆ ಒಂದು ಮ್ಯಾಜಿಕ್ ಚಿಹ್ನೆಯಲ್ಲ ಶಿಲುಬೆ. ಅದರ ಹೆಚ್ಚಳವನ್ನು, ಮಹಿಮೆಯನ್ನು, ಶಿಲುಬೆ ಮರಣದ ಮೂಲಕ ದೊರೆತ ಬಿಡುಗಡೆಯನ್ನು ಗ್ರಹಿಸಿದವರಿಗೆ ಅದು ಗೆಲುವಿನ ಚಿಹ್ನೆಯೇ!

ಇದನ್ನು ಓದುತ್ತಿರುವ ನೀವು, ಅನುದಿನವು ನಿಮ್ಮ ಶಿಲುಬೆಯನ್ನು ಹೊತ್ತು ಕೊಂಡು ದೇವರನ್ನು ಹಿಂಬಾಲಿಸುತ್ತಿದ್ದೀರ? ಶಿಲುಬೆ ಉಪದೇಶಕ್ಕೆ ಕಿವಿಗೊಟ್ಟು, ದೇವರ ಬಲವನ್ನು ಹೊಂದಿಕೊಳ್ಳುತ್ತಿದ್ದೀರ? ಹಾಗಾದರೆ ನಿಮ್ಮ ಜೀವನ ಪರಲೋಕದಲ್ಲಿ ಮಾತ್ರವಲ್ಲ ಭೂಲೋಕದಲ್ಲಿಯೂ ಜಯಕರವಾಗಿರುತ್ತದೆ. ಆಗಾಗ ಕೆಲವು  ನಿರುತ್ಸಾಹ, ಬಳಲಿಕೆ, ಭಯಗಳು ಬರಬಹುದು. ಆದರೆ ನಮ್ಮ ರಕ್ಷಕನು ಶಿಲುಬೆಯಲ್ಲಿ ನಮ್ಮ ಪಾಪಗಳಿಗಾಗಿ, ರೋಗಗಳಿಗಾಗಿ, ಶಾಪಗಳಿಗಾಗಿ ಗೆಲುವು ಪಡೆದದ್ದನ್ನು ನೆನೆಸಿ ನಾವು ಧೈರ್ಯಗೊಳ್ಳಲು ಸಾಧ್ಯ. ಶಿಲುಬೆಯಲ್ಲಿ ಸೈತಾನನ ತಲೆಯನ್ನು ಜಜ್ಜಿ ನಮಗೆ ಸಂಪಾದಿಸಿಕೊಟ್ಟ ಗೆಲುವನ್ನು ಸ್ವತಂತ್ರಿಸಿಕೊಳ್ಳೋಣ. ಜಯಕರವಾಗಿ ಜೀವಿಸೋಣ.
-    Mrs.ಡೇವಿಡ್ ಗಣೇಶನ್

ಪ್ರಾರ್ಥನಾ ಅಂಶ:-
ಹೊಸದಾಗಿ ನಮ್ಮೊಂದಿಗೆ ಸೇರಿರುವ ಮಿಷನರಿಗಳನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)