Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 27.03.2021

ಧೈನಂದಿನ ಧ್ಯಾನ(Kannada) – 27.03.2021

ಎತ್ತಿ ನಿಲ್ಲಿಸು

"ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು;..." - ಪ್ರಸಂಗಿ 4:10

ಅಮೆರಿಕಾದಲ್ಲಿ ಒಂದು ಆಟದ ಮೈದಾನದಲ್ಲಿ ಪರ್ಯಾಯ ಪ್ರತಿಭೆ ಇರುವ ಕಿರಿಯರಿಗೆಂದು ನಡೆದ ಓಟ ಪಂದ್ಯದಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಪರಾಕ್ ಒಬಾಮಾ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಎಲ್ಲಾ ಕಿರಿಯರು ಓಡಲು ಪ್ರಾರಂಭಿಸಿದರು. ಆಗ ಎದುರು ನೋಡದ ರೀತಿಯಲ್ಲಿ ಒಬ್ಬ ಹುಡುಗ ಕಾಲುಜಾರಿ ಕೆಳಗೆ ಬಿದ್ದನು.ಇದನ್ನು ನೋಡಿದ ಉಳಿದ ಮಕ್ಕಳು ತಮ್ಮ ಓಟವನ್ನು ನಿಲ್ಲಿಸಿ ಆ ಹುಡುಗನ ಎರಡು ಕೈಗಳನ್ನು ಹಿಡಿದು ಎಬ್ಬಿಸಿದರು. ನಂತರ ಎಲ್ಲರೂ ಒಂದಾಗಿ ಸೇರಿ ಓಡಿದರು. ಇದನ್ನು ನೋಡಿದ ಅಮೆರಿಕದ ಅಧ್ಯಕ್ಷ ಪರಾಕ್ ಒಬಾಮ ತಾನಿದ್ದ ಸ್ಥಳವನ್ನು ಬಿಟ್ಟು ಎದ್ದುನಿಂತು ಕೈ ತಟ್ಟಿದರು. ಅದನ್ನು ಕಂಡ ಕೂಡಲೇ ಮೈದಾನದಲ್ಲಿದ್ದ ಎಲ್ಲರೂ ಕೂಡ ಎದ್ದುನಿಂತು ಚಿಕ್ಕಮಕ್ಕಳ ಕಾರ್ಯವನ್ನು ಹೊಗಳಿದರು.

ಪರಿಶುದ್ಧ ಗ್ರಂಥದಲ್ಲಿ ನಂಬಿಕೆಯಲ್ಲಿ ಬಲಹೀನನಾಗಿರುವವರನ್ನು ಸೇರಿಸಿಕೊಳ್ಳಿರಿ ಎಂದು ಓದುತ್ತೇವೆ. ನಮಗೆ ಬಲ ಇರಬಹುದು. ಆದರೆ ಬಲಹೀನರ ಬಲಹೀನತೆಗಳನ್ನು ಸಹಿಸಿಕೊಳ್ಳಬೇಕು ಎಂದು ಸತ್ಯವೇದವು ಹೇಳುವುದನ್ನು ನಮ್ಮ ನೆನಪಿಗೆ ತಂದುಕೊಳ್ಳಬೇಕು. ಅಪೊಸ್ತಲನಾದ ಪೌಲನು ರೋಮಾಪುರದವರಿಗೆ ಬರೆದ ಪತ್ರಿಕೆಯಲ್ಲಿ 14 ಮತ್ತು 15 ನೇ ಅಧ್ಯಾಯದಲ್ಲಿ ಒತ್ತಾಯಿಸುತ್ತಿದ್ದಾರೆ. ಬಿದ್ದವನನ್ನು ಎತ್ತುವುದು ಎಂಬುದು ಒಂದು ಉನ್ನತವಾದ ಸೇವೆ. ಲೂಕ 10 ನೇ ಅಧ್ಯಾಯದಲ್ಲಿ ಸಮಾರ್ಯದವನು ಇದನ್ನೇ ಮಾಡುತ್ತಾನೆ. ತನ್ನ ಪ್ರಯಾಣವನ್ನು ನಿಲ್ಲಿಸಿ ಗಾಯಗಳಿಂದ ಬಿದ್ದಿದ್ದ ಮನುಷ್ಯನನ್ನು ಪರಾಮರ್ಶಿಸಿದನು. ಅವನನ್ನು ಎತ್ತಿಕೊಂಡು ತನ್ನೊಂದಿಗೆ ಕರೆದುಕೊಂಡು ಹೋಗಿ ಛತ್ರದಲ್ಲಿ ಪರಾಮರ್ಶಿಸಿದನು ಎಂದು ನೋಡುತ್ತೇವೆ.ಹೀಗೆ ಜೀವನದಲ್ಲಿ ಹಲವು ಕಾರಣಗಳಿಂದ ಬಳಲಿ ಬಿದ್ದುಹೋಗಿರುವವರನ್ನು ಎತ್ತಿ ನಿಲ್ಲಿಸುವುದನ್ನು  ಸತ್ಯವೇದವು ನಮಗೆ ಹೇಳಿಕೊಡುತ್ತಿದೆ.

ಇದನ್ನು ಓದುತ್ತಿರುವ ಸ್ನೇಹಿತರೇ! ದೇವರನ್ನು ಅಂಗೀಕರಿಸಿ ಜೀವಿಸುತ್ತಿರುವ ಈ ಜೀವನದ, ಮೂಲ ಕಾರ್ಯಗಳಲ್ಲಿ ಒಂದು ಮತ್ತೊಬ್ಬರನ್ನು ಎತ್ತಿ ನಿಲ್ಲಿಸುವುದು. ನಾವಿರುವ ಸ್ಥಳ ಗಳಲ್ಲಿ, ಓದುತ್ತಿರುವ ಶಾಲೆಯಲ್ಲಿ, ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ, ಸೇವೆ ಮಾಡುತ್ತಿರುವ ಕಾರ್ಯಾಲಯದಲ್ಲಿ ನಮ್ಮ ಸುತ್ತಲೂ ಕೆಲವು ನಷ್ಟಗಳು ಬಲಹೀನತೆಗಳ ನಿಮಿತ್ತವಾಗಿ ಜೀವನದಲ್ಲಿ ಬಿದ್ದು ಹೋಗಬಹುದು. ನಾವು ಅವರನ್ನು ಎತ್ತಿ ನಿಲ್ಲಿಸಬೇಕಾದ ಸ್ಥಳದಲ್ಲಿ ಇದ್ದೇವೆ ಎಂಬುದನ್ನು ಮರೆತು ಬಿಡಬಾರದು. ಹೀಗೆ ನಾವು ಮಾಡುವಾಗ ಪರಲೋಕದ ದೇವರು ನಮ್ಮನ್ನು ನೋಡಿ ಸಂತೋಷ ಪಡುತ್ತಾರೆ. ಜೀವನವೆಂಬ ಓಟದಲ್ಲಿ ಅನೇಕ ಕಾರಣಗಳಿಂದಾಗಿ ಬಳಲಿ, ನೊಂದವರು ಅನೇಕರು. ಅವರಿಗಾಗಿ ನಾವು ನಮ್ಮ ಓಟವನ್ನು ಸ್ವಲ್ಪ ನಿಲ್ಲಿಸಿ, ಅವರ ಮೇಲೆ ಗಮನ ಹರಿಸಿ, ಅವರನ್ನು ಎತ್ತಿ ನಿಲ್ಲಿಸೋಣ.
-    T. ಶಂಕರ್ ರಾಜನ್

ಪ್ರಾರ್ಥನಾ ಅಂಶ:-
ಕತ್ತೆಗಳ ಮಾರ್ಗದರ್ಶಿ ಎಂದು ಸೇವಕರಿಗಾಗಿ ಹೊರಬಿಡುತ್ತಿರುವ ಮಾಸಪತ್ರಿಕೆಯನ್ನು ಪ್ರತಿ ತಿಂಗಳು ತಪ್ಪದೆ ಮುದ್ರಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)