Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.03.2021

ಧೈನಂದಿನ ಧ್ಯಾನ(Kannada) – 25.03.2021

ಹತ್ತಿರ ಇರುವವರು

"ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ." - ಕೀರ್ತನೆಗಳು 145:18

ಜೇಮ್ಸ್ ಎಂಬ ಒಬ್ಬ ಯೌವನಸ್ಥನಿದ್ದನು. ಅವನಿಗೆ ಯಾರು ಕೂಡ ಇಲ್ಲ ದೇವರ ಬಗ್ಗೆಯೂ ಅಧಿಕವಾಗಿ ಗೊತ್ತಿಲ್ಲ. ದಿನವೂ ಮಧ್ಯಾಹ್ನ ಊಟ ಮಾಡುವ ಸಮಯದಲ್ಲಿ ಹತ್ತಿರದಲ್ಲಿರುವ ದೇವಾಲಯಕ್ಕೆ ಹೋಗಿ "ಯೇಸಪ್ಪ ನಾನು ಜೇಮ್ಸ್ ಬಂದಿದ್ದೇನೆ"ಎಂದು ಹೇಳಿ ಬಿಟ್ಟು ಹೋಗಿ ಬಿಡುತ್ತಾನೆ. ಇದರಂತೆ ದಿನವೂ ಇದೇ ರೀತಿ ಮನಃಸ್ಪೂರ್ತಿಯಾಗಿ ನಂಬಿಗಸ್ಥಿಕೆಯಿಂದ ಮಾಡಿ ಬರುತ್ತಿದ್ದನು, ಒಂದು ದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಆಕ್ಸಿಡೆಂಟ್ ನಲ್ಲಿ ಅವನ ಕಾಲಿಗೆ ಬಲವಾದ ಪೆಟ್ಟು ಬಿತ್ತು. ಹತ್ತಿರದಲ್ಲಿ ಇದ್ದವರು ಅವನನ್ನು ಎತ್ತುಕೊಂಡು ಹೋಗಿ ಆಸ್ಪತ್ರೆಯಲ್ಲಿ ಸೇರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನದ ಊಟವನ್ನು ಹತ್ತಿರವಿರುವ ಚಿಕ್ಕ ಮೇಜಿನ ಮೇಲೆ ಇಡಲ್ಪಟ್ಟಿತು, ಅವನ ಹೃದಯ ಆ ದೇವಾಲಯದ ಮೇಲೆ ಹೋಯಿತು. ಈ ಸಮಯದಲ್ಲಿ ನಾನು ಯೇಸುವನ್ನು ನೋಡಲು ಹೋಗುತ್ತಿದ್ದೆನೆ ಇಂದು ಹೋಗಲು ಆಗಲಿಲ್ಲವೇ ಎಂದು ಯೋಚಿಸುತ್ತಲೇ ಕಣ್ಣು ಮುಚ್ಚಿಕೊಂಡನು. ಅವನು ಇದ್ದ ಕೋಣೆಯಲ್ಲಿ ಒಂದು ಬೆಳಕು ಪ್ರಕಾಶಿಸಿತು. ಅದರೊಳಗಿಂದ ಒಂದು ಶಬ್ಧ, "ಜೇಮ್ಸ್ ನಾನು ಯೇಸುಕ್ರಿಸ್ತನು ಬಂದಿದ್ದೇನೆ"ಎಂಬದಾಗಿ, ಕೂಡಲೇ ಅವನೊಳಗೆ ಸಂತೋಷ ಉಂಟಾಯಿತು, ಅದೇ ಸಮಯದಲ್ಲಿ ಪೂರ್ಣ ಸ್ವಸ್ಥತೆಯನ್ನು ಹೊಂದಿಕೊಂಡನು. ಅವನ ದರ್ಶನದ ಕಣ್ಣುಗಳು ತೆರೆಯಲ್ಪಟ್ಟಿತು.

ಸತ್ಯವೇದದಲ್ಲಿ ಸಮುವೇಲನ ಬಗ್ಗೆ ನೋಡುತ್ತೇವೆ. ಅವರು ಚಿಕ್ಕ ಮಗುವಾಗಿರುವಾಗಲೇ, ಆಲಯದಲ್ಲಿ ಬಿಡಲ್ಪಟ್ಟರು, ಅಲ್ಲೇ ಬೆಳೆಸಲ್ಪಟ್ಟರು. ಅವರು ಕರ್ತನಿಗೆ ಮನುಷ್ಯರಿಗೆ ಇಷ್ಟವಾಗಿ ನಡೆದುಕೊಂಡರು. ಕರ್ತನ ಕೆಲಸವನ್ನು ನಂಬಿಗಸ್ಥಿಕೆಯಿಂದ ಮಾಡುತ್ತಾ ಬಂದರು. ಕರ್ತನು ಅವರನ್ನು ಹುಡುಕಿ ಬಂದು "ಸಮುವೇಲನೆ, ಸಮುವೇಲನೆ' ಎಂದು ಹೆಸರಿಡಿದು ಕರೆದರು. ಹೌದು, ಅವರು ತಮ್ಮನ್ನು ನಂಬಿಕೆಯಿಂದ ಹುಡುಕುವವರನ್ನು ಹುಡುಕಿ ಬರುವ ದೇವರು.

ಹೌದು, ಯೇಸುಕ್ರಿಸ್ತನನ್ನು ಹುಡುಕಿ ನಾವು ಹೋಗಬೇಕಾಗಿಲ್ಲ ಅವರೇ ನಮ್ಮನ್ನು ಹುಡುಕಿ ಬರುವರು. ನಮ್ಮ ಹತ್ತಿರವೇ ಇರುವವರು. ನಮ್ಮನ್ನು ಹೆಸರಿಡಿದು ಕರೆಯುವವರು. ನಿಜವಾಗಿಯೂ ಅವರನ್ನು ಪ್ರೀತಿಸುವವರ ಹತ್ತಿರದಲ್ಲೇ ಇರುತ್ತಾರೆ. ನೀವು ಏಕಾಂತದಲ್ಲಿ ಇರುವಾಗ, ಆದರಣೆ ಇಲ್ಲದೆ ಇರುವಾಗ, ಅವರನ್ನು ನಂಬಿಕೆಯಿಂದ ಕರೆದರೆ ನಿಮ್ಮ ಶಬ್ದವನ್ನು ಕೇಳಿ ಎಲ್ಲಿ ಯಾವ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ನಿಮಗೆ ಸಹಾಯ ಮಾಡಲು ನಿಮ್ಮನ್ನು ಬಿಡಿಸಲು ಅವರು ಬರುತ್ತಾರೆ. ಇಂದೇ ಅವರನ್ನು ನೋಡಿ ಕರೆಯುತ್ತೀರ? ಉತ್ತರ ಕೊಡುತ್ತಾರೆ. ಖಂಡಿತ.
-    Mrs. ಅಕ್ಸಾಳ್ ಸುಖದೇವ್

ಪ್ರಾರ್ಥನಾ ಅಂಶ:-
ರಾಕ್ಲ್ಯಾಂಡ್ ಬೈಬಲ್ ಕಾಲೇಜಿಗೆ ಉತ್ತರ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದು ಸೇರಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)