Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 24.03.2021

ಧೈನಂದಿನ ಧ್ಯಾನ(Kannada) – 24.03.2021

ಎಲ್ಲವೂ ಒಳ್ಳೆಯದಕ್ಕಾಗಿಯೇ

"ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ" - ರೋಮಾ 8:28

ಚೀನಾ ದೇಶದ ಒಂದು ಗ್ರಾಮದಲ್ಲಿ ಕರ್ತನನ್ನು ಹಿಂಬಾಲಿಸುತ್ತಿದ್ದ ಒಂದು ಕುಟುಂಬದವರು ಜೀವಿಸುತ್ತಿದ್ದರು. ಅವರ ಮನೆಯಲ್ಲಿ ಏನು ನಡೆದರೂ "ಎಲ್ಲಾ ಒಳ್ಳೆಯದಕ್ಕಾಗಿಯೇ" ಎಂದು ಹೇಳುತ್ತಿದ್ದರು. ಒಂದು ದಿನ ಅವರ ಮನೆಯಲ್ಲಿದ್ದ ಒಂದೇ ಒಂದು ಕುದುರೆಯು ಕಾಣದೆ ಹೋಯಿತು. ಇದಕ್ಕೂ  ಇದೇ ಉತ್ತರವನ್ನು ಹೇಳಿದಾಗ ನೆರೆಹೊರೆಯವರು ಗೇಲಿ ಮಾಡಿದರು. ಕೆಲವು ದಿನಗಳು ಕಳೆದ ಮೇಲೆ ಆ ಕುದುರೆ 4 ಕುದುರೆಗಳನ್ನು ಕರೆದುಕೊಂಡು ಬಂತು. ಅಕ್ಕಪಕ್ಕದವರು ಆಶ್ಚರ್ಯಪಟ್ಟರು. ಒಂದು ದಿನ ಒಂದು ಕಾಡು ಕುದುರೆ ಆ ಮನೆಯಲ್ಲಿರುವ ಯೌವನಸ್ಥನನ್ನು ಒಂದು "ಏಟು" ಹಾಕಿದಾಗ ಅವನ ಕಾಲು ಮುರಿದು ಹೋಯಿತು. ಇದುವು ಒಳ್ಳೆಯದೆಂದು ಹೇಳುತ್ತಾರೆಂದು ನೆನೆಸಿ ಯಾರು ಕೂಡ ವಿಚಾರಿಸಲು ಹೋಗಲಿಲ್ಲ. ಈ ಪರಿಸ್ಥಿತಿಯಲ್ಲಿ ಚೀನಾ ಒಳ ದೇಶದ ಯುದ್ಧದಲ್ಲಿ ಸೇರಿಕೊಳ್ಳುವಂತೆ ಎಲ್ಲಾ ಯೌವನಸ್ಥರನ್ನು ಬಲವಂತ ಮಾಡಿದರು. ಕಾಲುಗಳು ಮುರಿದು ಹೋಗಿದ್ದದರಿಂದ ಹಾಸಿಗೆಯಲ್ಲೇ ಇದ್ದ ಅವನನ್ನು ಮಾತ್ರ ಬಿಟ್ಟು ಹೋದರು. ಕೆಲವು ದಿನಗಳನಂತರ ಯುದ್ಧ ಮುಗಿದ ಮೇಲೆ ಆ ಗ್ರಾಮದಿಂದ ಹೋದ ಎಲ್ಲಾ ಯುವಕರು ಸತ್ತು ಹೋದರೆಂಬ ಸುದ್ದಿ ಬಂತು. ಪೂರ್ತಿ ಗ್ರಾಮದಲ್ಲಿ ಉಳಿದದ್ದು ಈ ಯೌವನಸ್ಥನೊಬ್ಬನು ಮಾತ್ರವೇ.

ಸತ್ಯವೇದವು ಹೀಗೆ ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ಹೇಳುತ್ತದೆ. ಯಾರು ದೇವರನ್ನು ಪ್ರೀತಿಸುವವರು? ದೇವರನ್ನೇ ನಂಬಿ ಅವರನ್ನೇ ಎಲ್ಲದರಲ್ಲಿಯೂ ಮುಂದಿಟ್ಟು ಅವರಿಗಾಗಿ ಏನು ಬೇಕಾದರೂ ಕೊಡಲು, ಕಳೆದುಕೊಳ್ಳಲು, ಸಿದ್ಧವಾಗಿರುವವರೇ! ದೇವರ ಆಜ್ಞೆ ಮತ್ತು ದೇವರ ಮಾತಿಗೆ ವಿಧೇಯರಾಗುವವರಾಗಿ , ಎಲ್ಲರಿಗೂ ಎಲ್ಲಾ ಸ್ಥಿತಿಯಲ್ಲಿ ಒಳ್ಳೆಯದನ್ನು ಮಾಡುತ್ತಿರುವವರೇ! ದೇವರು ತನ್ನ ಮೇಲೆ ತೋರಿಸಿದ ಪ್ರೀತಿಯನ್ನು ಮತ್ತೊಬ್ಬರು ಗ್ರಹಿಸುವ ಹಾಗೆ ನಿಜವಾದ ಪ್ರೀತಿಯನ್ನು ಬಹಿರಂಗ ಪಡಿಸುವವರೇ ದೇವರನ್ನು ಪ್ರೀತಿಸುವವರೆಂದು ನೋಡುತ್ತೇವೆ.

ನನ್ನ ಪ್ರೀತಿಯ ಸ್ನೇಹಿತರೆ! ದೇವರನ್ನು ಪ್ರೀತಿಸುವವರಿಗೆ ಎಲ್ಲವೂ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ. ಅದನ್ನು ನಾವು ಪ್ರಾರಂಭದಲ್ಲಿ ಮಾನವ ಜ್ಞಾನದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕರ್ತನನ್ನೇ ನಂಬಿ ಅವರನ್ನೇ ಒರಗಿಕೊಂಡಿರುವಾಗ ಅದರ ಮುಕ್ತಾಯವು ಅರ್ಥವಾಗುತ್ತದೆ! ನಿಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳು ತಡೆಯಾದ ಹಾಗೆ ತೋಚಬಹುದು, ಏಕೆ ಇದು ನಡೆಯಲಿಲ್ಲ ಎಂದು ಕೊರಗ ಬಹುದು. ಒಂದು ಮಾತ್ರ ಖಂಡಿತ. ದೇವರನ್ನು ನಂಬಿ ಅವರನ್ನೇ ಒರಗಿಕೊಂಡು ಅವರ ಬಳಿ ಮಾತ್ರ ತನ್ನ ಕಾರ್ಯಗಳನ್ನು ಎದುರು ನೋಡುತ್ತಿರುವವರ ಜೀವನದಲ್ಲಿ ಎಲ್ಲವನ್ನೂ ದೇವರು ಒಳ್ಳೆಯದಕ್ಕಾಗಿಯೇ ಮಾಡಿ ಮುಗಿಸುತ್ತಿದ್ದಾರೆ. ಆಮೆನ್!
-    C. ಪಾಲ್ ಜೆಬಸ್ಟಿನ್ ರಾಜ್

ಪ್ರಾರ್ಥನಾ ಅಂಶ:-
ಪಂಜಾಬ್ ರಾಜ್ಯದಲ್ಲಿ ತಡೆಯಾಗಿರುವ ಸೇವೆಗಳು ಮುಂದುವರಿಯುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)