Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 20.03.2021

ಧೈನಂದಿನ ಧ್ಯಾನ(Kannada) – 20.03.2021

ಆನಂದವನ್ನುಂಟು ಮಾಡುವ ಮಾತು

"ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾಗುತ್ತದೆ;..." - ಜ್ಞಾನೋಕ್ತಿ.15:23

ರಾತ್ರಿ ವೇಳೆಯಲ್ಲಿ ಅಮ್ಮ, ಅಮ್ಮ ಎಂದು ನರಳುವ ಶಬ್ಧ. ತಾಯಿ ಚಿಕ್ಕ ದೀಪದ ಬೆಳಕಿನಲ್ಲಿ ಮಗನನ್ನು ದೃಷ್ಟಿಸಿ ನೋಡುತ್ತಾ ಕುಳಿತಿದ್ದರು. ಆ ಚಿಕ್ಕ ಹುಡುಗ ತನ್ನ ತಾಯಿಯ ಬಳಿ,  "ನನ್ನಿಂದ ಉಸಿರು ಬಿಡಲು ಆಗುತ್ತಿಲ್ಲ ನಾನು ಸತ್ತು ಹೋಗುತ್ತೇನೋ?"  ಎಂದು ಕೇಳಿದನು. ಅವನ ತಾಯಿ ಅವನನ್ನು ತಬ್ಬಿಕೊಂಡು  "ಇಲ್ಲ ಮಗನೇ, ನಿನಗೆ ಏನೂ ಆಗುವುದಿಲ್ಲ. ನೀನು ನನ್ನ ಹೊಟ್ಟೆಯಲ್ಲಿ ಇರುವಾಗಲೇ ನಾನು ನಿನ್ನನ್ನು ದೇವರ ಸೇವೆಗೆಂದು ಅವರ ಕೈಗಳಲ್ಲಿ ಸಮರ್ಪಿಸಿಬಿಟ್ಟೆನು. ನೀನು ಬೆಳೆದು  ದೇವರಿಗೆ ಸೇವೆ ಮಾಡುವವರೆಗೂ ಬದುಕಿರುತ್ತೀಯ. ನಿನಗೆ ಏನೂ ಆಗುವುದಿಲ್ಲ ನೀನು ದೇವರಿಗೆ ಅರ್ಪಿಸಲ್ಪಟ್ಟವನು. ದೇವರು ನಿನ್ನನ್ನು ನೋಡಿಕೊಳ್ಳುತ್ತಾರೆ" ಎಂದರು. ಈ ಸಂತೈಸುವಿಕೆಯ ಮಾತುಗಳು ಆ ಚಿಕ್ಕ ಹುಡುಗನ ಭಯವನ್ನು ನೀಗಿಸಿ, ಧೈರ್ಯವನ್ನು ಕೊಟ್ಟಿತು. ತಾಯಿಯ ಮಡಿಲಿನಲ್ಲಿ ನೆಮ್ಮದಿಯಿಂದ ನಿದ್ರೆಮಾಡಿ ಸುಖವಾಗಿ ಎದ್ದನು.

ಸತ್ಯವೇದದಲ್ಲಿ ಬಹಳ ಧನವಂತನಾಗಿದ್ದ ನಾಬಾಲನು ತನ್ನ ಕುರಿಗಳಿಗೆ ಉಣ್ಣೆ ಕತ್ತರಿಸುವ ಕೆಲಸವು ನಡೆಯುತ್ತಿದ್ದದರಿಂದ ತನ್ನ ಸೇವಕರೊಂದಿಗೆ ಔತಣವನ್ನು ಕೊಂಡಾಡುತ್ತಿದ್ದನು.ಈ ಸಮಯದಲ್ಲಿ ದಾವೀದನು ತನ್ನ ಸ್ನೇಹಿತರಿಗೆ ಆಹಾರವನ್ನು ಕೊಡುವಂತೆ ಕೇಳಲು ಜನರನ್ನು ಕಳುಹಿಸಿದನು. ಆದರೆ ನಾಬಾಲನು ಉಣ್ಣೆ  ಕತ್ತರಿಸುವವರಿಗಾಗಿ ಮಾಡಿಸಿದ್ದನ್ನು,ಊರೇ ಗೊತ್ತಿಲ್ಲದ ಮನುಷ್ಯರಿಗೆ ಕೊಡುತ್ತೇನೋ ಎಂದು ಹೇಳಿ ಬರಿಗೈಯಲ್ಲಿ ಕಳುಹಿಸಿಬಿಟ್ಟನು. ಆದರೆ ದಾವೀದನು, ಅವನ ಸ್ನೇಹಿತರು, ನಾಬಾಲನ ಕುರುಬರು ಕುರಿ ಮೇಯಿಸುತ್ತಿದ್ದಾಗ ಅರಣ್ಯದಲ್ಲಿ ಕಾವಲುಗಾರರಾಗಿ ಇದ್ದರು. ಆದರೂ ನಾಬಾಲನು ಮಾತನಾಡಿದ ಮಾತುಗಳು ಕಠಿಣವಾಗಿದ್ದದ್ದನ್ನು ಕೇಳಿದ ದಾವೀದನು ಕೋಪಗೊಂಡನು. ನಾಬಾಲನಿಗಿರುವ ಎಲ್ಲವನ್ನೂ ನಾಶಮಾಡಬೇಕಂದು ಬಿರುಸಿನಿಂದ ಹೊರಟರು. ವಿಷಯವನ್ನು ತಿಳಿದ ನಾಬಾಲನ ಹೆಂಡತಿ ಅಬೀಗೈಲಳು ವೇದನೆಕರವಾದ ದೋಷವನ್ನು ಹೊತ್ತುಕೊಂಡು,  "ನೀವು ರಾಜನಾಗಲಿರುವವರು, ನಿಮ್ಮ ಕೈಗಳಲ್ಲಿ ರಕ್ತಪರಾಧವು ಅಂಟಬೇಕೋ?"ಎಂದು ಕೇಳಿದಳು. ದಾವೀದನ ಬಳಿ ಕ್ಷಮಾಪಣೆ ಕೇಳಿದಳು. ದಾವೀದನು ಅಬೀಗೈಲಳ ತಾಳ್ಮೆಯ ದಯೆಯುಳ್ಳ ಮಾತುಗಳಿಂದ ಕರಗಿ ನೀರಾಗಿ ತಿರುಗಿ ಹೋದರು.

ಪ್ರಿಯರೇ! ನಿಮ್ಮ ಮಾತು ಹೇಗಿದೆ ಎಂದು ಯೋಚಿಸಿರಿ. ಬರಲಿರುವ ದೊಡ್ಡ ಅಪಾಯವನ್ನು ತಡೆದು ಸಂತೋಷವನ್ನುಂಟು ಮಾಡುವ ಅಬೀಗೈಲಳ ಮಾತುಗಳಾಗಿದೆಯಾ? ಯೋಚಿಸಿರಿ ನಾವು ಮಾತನಾಡುವ ಮಾತುಗಳು ಕೃಪೆಯುಳ್ಳ ಮಾತುಗಳಾಗಿಯೂ, ಗಾಯ ಕಟ್ಟುವುದಾಗಿಯೂ, ಸಂತೈಸುವಂತದ್ದಾಗಿಯೂ ಇರಲಿ. ಅಂತಹ ಮಾತುಗಳನ್ನು ಮಾತನಾಡಲು ಇಂದು ತೀರ್ಮಾನಿಸೋಣವಾ! ದೇವರು ತಾನೇ ಅಂತಹ ಮಾತುಗಳನ್ನು ಇಂದು ನಮ್ಮ ಬಾಯಲ್ಲಿ ಇರಿಸಲಿ ಆಮೆನ್!
- Mrs. ಅನ್ಬು ಜ್ಯೋತಿ ಸ್ಟಾಲಿನ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಬೇಕಾದ ಅವಶ್ಯಕತೆಗಳು ಸಂಧಿಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)