Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 18.03.2021

ಧೈನಂದಿನ ಧ್ಯಾನ(Kannada) – 18.03.2021

ಮೊದಲ ರಕ್ತಸಾಕ್ಷಿ
 
"ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು." - ಅಪೊಸ್ತಲ 7:60

ಆಂಧ್ರ ಪ್ರದೇಶದ ವಿಕಾರಾಬಾದ್ ಭಾಗದಲ್ಲಿ ಇರುವಂತಹ ಯೆಹೋವ ಶಮ್ಮಾ ಸಭೆಗೆ ಸೇರಿದ ಸುವಾರ್ತಿಕರು ಸಂಜೀವುಲು. ಇವರು ಕ್ರಿಸ್ತನ ನಿಮಿತ್ತವಾಗಿ ಇವರನ್ನು ಕೊಲ್ಲಬೇಕೆಂಬ ಆತುರದಿಂದ ಒಂದು ದೊಡ್ಡ ಗುಂಪು  ಕಾಯುತ್ತಿದ್ದಾಗ ಅಂಥ ಸಮಯದಲ್ಲಿ  ಕಳೆದ ಕೆಲವು ವರ್ಷಗಳ ಮುಂಚೆ ರಕ್ತಸಾಕ್ಷಿಯಾಗಿ ಮರಣಹೊಂದಿದರು. ಕ್ರೈಸ್ತ ಚರಿತ್ರೆಯನ್ನು ಹಿಂತಿರುಗಿ ನೋಡುವುದಾದರೆ ಇಂತಹ ಲಕ್ಷಾಂತರ ಜನರು ದೇವರಿಗಾಗಿ ರಕ್ತ ಸಾಕ್ಷಿಗಳಾಗಿ ಮರಣ ಹೊಂದಿದ್ದಾರೆ. ಇವರುಗಳ ಅಸ್ತಿವಾರಗಳ ಮೇಲೆಯೇ ಇಂದಿನ ಸಭೆಗಳು ಕಟ್ಟಲ್ಪಟ್ಟಿವೆ.

ಸತ್ಯವೇದದಲ್ಲಿ ಕ್ರಿಸ್ತನಿಗಾಗಿ ಮೊದಲು ರಕ್ತ ಸಾಕ್ಷಿಯಾಗಿ ಮರಣಹೊಂದಿದವರು ಸ್ತೆಫನು. ಯೇಸುಕ್ರಿಸ್ತನು ಜೀವಂತವಾಗಿ ಎದ್ದನಂತರ ಶಿಷ್ಯರ ಸಂಖ್ಯೆಯು ಹೆಚ್ಚಾಯಿತು. ಆದ್ದರಿಂದ ಆರಿಸಿಕೊಳ್ಳಲ್ಪಟ್ಟ ಏಳು ಜನರಿಗೂ ಸಭೆಯ ಜವಾಬ್ದಾರಿಯನ್ನು ಹಂಚಿಕೊಡಲಾಯಿತು. ಅದರಲ್ಲಿ ಪಂಕ್ತಿಯನ್ನು ವಿಚಾರಿಸುವವರಲ್ಲಿ ಒಬ್ಬರಾಗಿದ್ದ ಸ್ತೆಫನು ನೇಮಿಸಲ್ಪಟ್ಟರು. ಇವರು ಪರಿಶುದ್ದಾತ್ಮದಿಂದ ತುಂಬಿದ ವರಾಗಿ, ಒಳ್ಳೆ ಸಾಕ್ಷಿ ಹೊಂದಿದವರಾಗಿ, ಜನರೊಳಗೆ, ದೊಡ್ಡ ಗುರುತುಗಳನ್ನು, ಅದ್ಭುತಗಳನ್ನು ಮಾಡಿದರು. ಯೆಹೂದ್ಯರ ಮಧ್ಯದಲ್ಲಿ ವೈರಾಗ್ಯದಿಂದ ಯೇಸುಕ್ರಿಸ್ತನನ್ನು ಕುರಿತು ಪ್ರಸಂಗಿಸಿದಾಗ ಜನರು ಅವರಿಗೆ ವಿರೋಧವಾಗಿ ಎದ್ದು ಸುಳ್ಳು ಸಾಕ್ಷಿಗಳನ್ನು ಏರ್ಪಡಿಸಿ ಕಲ್ಲೆಸೆದು ಕೊಲ್ಲಲು ಕೂಡಿದರು. ಕಠಿಣವಾದ ಗಾಯಗಳೊಂದಿಗೆ ಭಯಂಕರವಾದ ರಕ್ತಧಾರೆಯ ಮಧ್ಯದಲ್ಲಿ ಸ್ತೆಫನು ಅವರನ್ನು ಕ್ಷಮಿಸುವಂತೆ ಬೇಡಿಕೊಂಡರು ಆಗ, ಯೇಸುಕ್ರಿಸ್ತನು ತಂದೆಯ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ಕಂಡರು. ಕೊನೆಯಲ್ಲಿ ರಕ್ತ ಸಾಕ್ಷಿಯಾಗಿ ಮರಣಹೊಂದಿದರು. ಸಭೆಯ ಮೊದಲ ರಕ್ತಸಾಕ್ಷಿ ಇವರೇ!

ಇದನ್ನು ಓದುತ್ತಿರುವ ನಾವು ಕರ್ತನಿಗಾಗಿ ಏನು ಕೆಲಸ ಮಾಡುತ್ತಿದ್ದೇವೆ? ಅವರನ್ನು ಹೇಗೆ ಘನ ಪಡಿಸುತ್ತಿದ್ದೇವೆ? ಅವರಿಗಾಗಿ ಯಾರನ್ನೆಲ್ಲಾ ಕಳೆದುಕೊಂಡಿದ್ದೇವೆ? ಸ್ತೆಫನು ಪಂಕ್ತಿಯನ್ನು ವಿಚಾರಿಸುವುದಕ್ಕಾಗಿ ನೇಮಿಸಲ್ಪಟ್ಟವರೇ, ಆದರೂ ಅದ್ಭುತ ಗುರುತುಗಳೊಂದಿಗೆ ಪ್ರಸಂಗಿಸಿದರು. ಪರಿಶುದ್ಧಾತ್ಮನು ಕಾರ್ಯ ಮಾಡಿದರು. ನಾವು ಇದು ನನ್ನ ಕೆಲಸವಲ್ಲ ನಾನು ಸೇವಕನಲ್ಲ ಎಂದು ಆತ್ಮ ಆದಾಯ ಮಾಡುವುದನ್ನು ತ್ಯಜಿಸುತ್ತಿದ್ದೇವಾ? ತಮ್ಮ ಜೀವವನ್ನು ಕೊಟ್ಟು, ನಮ್ಮ ಜೀವವನ್ನು ವಿಮೋಚಿಸಿದ ಯೇಸುಕ್ರಿಸ್ತನಿಗಾಗಿ ಏನಾದರೂ ಮಾಡದೇ ಇರಬಹುದಾ? ಯಾರ ಬಳಿಯಾದರೂ  ಯಾವಾಗಲೂ ಧೈರ್ಯವಾಗಿ ಶುಭ ಸಂದೇಶವನ್ನು ಹೇಳಿ ನಮ್ಮ ಜೀವವನ್ನು ಕೊಟ್ಟು ಆತ್ಮ ಆದಾಯ ಮಾಡಲು ಸಿದ್ಧರಾಗಿರೋಣ. ಪರಿಶುದ್ಧಾತ್ಮನು ನಮಗೆ ಸಹಾಯಕನಾಗಿ ನಿಲ್ಲುತ್ತಾರೆ. ಆಮೆನ್.
-    Mrs. ಭುವನ ಧನಪಾಲ್

ಪ್ರಾರ್ಥನಾ ಅಂಶ:-
ಆಂಧ್ರದಲ್ಲಿ ವೆದುರುವಾಡ ಗ್ರಾಮದಲ್ಲಿ ಭೇಟಿಮಾಡುತ್ತಿರುವ ಆತ್ಮಾಮಕ್ಕಳು ಆತ್ಮೀಕ ಜೀವನದಲ್ಲಿ ಬಲಗೊಳ್ಳುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)