Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 16.03.2021

ಧೈನಂದಿನ ಧ್ಯಾನ(Kannada) – 16.03.2021

ಹಳೆಯ ಮೂಟೆ

"...ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ" - ಫಿಲಿಪ್ಪಿಯವರಿಗೆ 3:13

ಒಬ್ಬ ರಾಜ ತನ್ನ ಅರಮನೆಯಲ್ಲಿ ಒಂದು ದೊಡ್ದ ಔತಣವನ್ನು ಕೊಡುವುದಾಗಿ ಪ್ರಕಟಿಸಿದನು. ರಾಜ ವಸ್ತ್ರದಂತೆ ವಿಶೇಷವಾದ ವಸ್ತ್ರಗಳನ್ನು ಮಾತ್ರವೇ ಹಾಕಿಕೊಂಡು ಬರಬೇಕೆಂದು ಕಡ್ಡಾಯವಾಗಿ ಸೂಚಿಸಿದ್ದರು. ಇದನ್ನು ಗಮನಿಸಿದ ಭಿಕ್ಷಕನೊಬ್ಬ ಔತಣದಲ್ಲಿ ಭಾಗವಹಿಸಲು ಆಸೆಪಟ್ಟು, ರಾಜ ವಸ್ತ್ರಗಳ ಬಗ್ಗೆ ಯೋಚಿಸಿದನು. ರಾಜನ ಒಂದು ಹಳೆಯ ವಸ್ತ್ರವನ್ನು ಕೇಳಲು ತೀರ್ಮಾನಿಸಿದನು. ಅದರಂತೆ, ಬಹಳ ಕಷ್ಟಪಟ್ಟು ರಾಜನನ್ನು ಭೇಟಿಯಾಗಿ, ಹಳೆಯ ರಾಜ ವಸ್ತ್ರವೊಂದನ್ನು ತನಗೆ ಕೊಡುವಂತೆ ಕೇಳಿಕೊಂಡನು. ರಾಜನು ಕೊಟ್ಟುಬಿಟ್ಟನು. ಔತಣದ ದಿನವೂ ಬಂತು,ಈ ರಾಜ ವಸ್ತ್ರವನ್ನು ಧರಿಸಿ ಗಂಭೀರವಾಗಿ ಮಾರ್ಪಟ್ಟ ಭಿಕ್ಷುಕನು ತನ್ನ ಹಳೆಯ ವಸ್ತ್ರಗಳನ್ನು ಒಂದು ಮೂಟೆಯಲ್ಲಿ ತೆಗೆದುಕೊಂಡನು. ಹೋದ ಸ್ಥಳದಲ್ಲೆಲ್ಲಾ ಮೂಟೆಯನ್ನು ಹೊತ್ತು ತಿರುಗಿದನು. ಔತಣದಲ್ಲಿಯು ಅನುಮತಿ ಸಿಗಲಿಲ್ಲ ಅವನು ಮರಣದವರೆಗೂ ರಾಜನ ವಸ್ತ್ರಗಳನ್ನು ಧರಿಸಿಕೊಂಡೇ ಇದ್ದನು. ಆದರೆ ಕೊಳೆಯ ಬಟ್ಟೆ ಮೂಟೆಯು ಅವನ ತಲೆ ಕೆಳಗೇ ಇತ್ತು.

ಪರಿಶುದ್ಧ ಗ್ರಂಥದ ಪ್ರಕಾರ, ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುತ್ತಾರೆ. ನಮಗೆ ಹೊಸಜೀವನವನ್ನು ಕೊಟ್ಟುಬಿಡುತ್ತಾರೆ. ಆದರೆ ನಾವು ಆ ಜೀವನದ ವಿಶೇಷತೆಯನ್ನು ಗ್ರಹಿಸದೆ ಕಳೆದುಹೋದ ಜೀವನದ ಕೆಲವು ಪಾಪಗಳನ್ನು ಹೊತ್ತುಕೊಂಡೇ ತಿರುಗುತ್ತೇವೆ. ಸೈತಾನನು ಆ ಅವಕಾಶವನ್ನು ಉಪಯೋಗಿಸಿಕೊಂಡು ನಮ್ಮನ್ನು ಸೋತು ಹೋಗುವಂತೆ ಮಾಡುತ್ತಾನೆ. ಅಯ್ಯೋ ಸೇವೆ ಮಾಡಲು ನನಗೆ ಅರ್ಹತೆ ಇಲ್ಲ. ನಾನೊಂದು ಪಾಪಿ ಎಂದೆಲ್ಲ ನಮ್ಮನ್ನು ಮುಂದುವರೆಯಲು ಸಾಧ್ಯವಿಲ್ಲದಂತೆ ಮಾಡಿಬಿಡುತ್ತಾನೆ. ಇದೊಂದು ಅಗತ್ಯವಿಲ್ಲದ ಭಾರ ನಾವು ಎಚ್ಚರವಾಗಿರಬೇಕು.

ಪ್ರಿಯರೇ! ಇನ್ನೂ ನಮ್ಮಲ್ಲಿ ಅನೇಕರು ತಮ್ಮ ಜೀವನದಲ್ಲಿನ ಹಳೆಯ ಪಾಪದ ಮೂಟೆಗಳನ್ನು ಹೊತ್ತು ಕೊಂಡೇ ತಿರುಗುತ್ತಿದ್ದೇವೆ. ಕೆಲವರ ಬಳಿ ಹಣದಾಸೆ ಎಂಬ ಮೂಟೆ, ಕೆಲವರ ಬಳಿ ವಸ್ತುಗಳ ಆಸೆ ಎಂಬ ಮೂಟೆ, ಕೆಲವರ ಬಳಿ ಹೆಮ್ಮೆ ಎಂಬ ಮೂಟೆ, ಕೆಲವರ ಬಳಿ ಇಚ್ಚೆಗಳೆಂಬ ಮೂಟೆ..... ಹೀಗೆ ಅನೇಕ ಕಾರ್ಯಗಳುಂಟು. ದೇವರಿಂದ ಬಿಡಿಸಲ್ಪಟ್ಟ ನಾವು, ರಾಜನ ವಿವಾಹ ಔತಣವಾದ ಪರಲೋಕ ಭಾಗ್ಯಕ್ಕೆ ಪಾಲುದಾರರು. ಆ ಉನ್ನತ ಜೀವನದ ಶ್ರೇಷ್ಠತೆಯನ್ನು ಗ್ರಹಿಸೋಣ, ಹಳೆಯ ಪಾಪಗಳಿಂದ ಉಂಟಾಗಿರುವ ಭಾರಗಳನ್ನು ತೊಲಗಿಸೋಣ. ಹಿಂದಿನವುಗಳನ್ನು ಮರೆತು ಮುಂದಿನವುಗಳನ್ನು ಹಿಡಿಯೋಣ.
-    Mrs. ಜ್ಯೋತಿ ಆನಂದ್

ಪ್ರಾರ್ಥನಾ ಅಂಶ:-
ರಾಕ್ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)