Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 15.03.2021

ಧೈನಂದಿನ ಧ್ಯಾನ(Kannada) – 15.03.2021

ತಂದೆಯ ಮನಸ್ಸು

"...ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು." - ಲೂಕ 15:20

ಹೊಸ ಕಾರನ್ನು ತಂದು ನಿಲ್ಲಿಸಿ ಬಿಟ್ಟು ಅಪ್ಪ ಕೋಣೆಯೊಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಹಿರಿಯ ಮಗ ಕಾರನ್ನು ಸುತ್ತಿ ಸುತ್ತಿ ನೋಡುತ್ತಿರುವಾಗ ಅವನ 4-ವರ್ಷದ ತಮ್ಮ ಚಿಕ್ಕ ಕಲ್ಲನ್ನು ತೆಗೆದುಕೊಂಡು ಕಾರಿನ ಡೋರ್ ಪಕ್ಕದಲ್ಲಿ ಗೀಚಿ ಬಿಟ್ಟನು. ಇದನ್ನು ನೋಡಿ ಹಿರಿಯ ಮಗ ಕೋಪದಲ್ಲಿ ಪಕ್ಕದಲ್ಲಿದ್ದ ಒಂದು ಕಂಬಿಯನ್ನು ತೆಗೆದುಕೊಂಡು ತನ್ನ ತಮ್ಮನ ಕೈ ಬೆರಳುಗಳಿಗೆ ಬಲವಾಗಿ ಹೊಡೆದನು.ಅಳುವಿನ ಶಬ್ಧವನ್ನು ಕೇಳಿ ಅಪ್ಪ ಹೊರಗೆ ಬಂದು ವೇಗವಾಗಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೂ ಬೆರಳುಗಳು ಸರಿಹೋಗಲು ಇನ್ನು ಬಹಳ ತಿಂಗಳುಗಳು ಬೇಕಾಗುತ್ತದೆ ಎಂದು ವೈದ್ಯರು ಹೇಳಿಬಿಟ್ಟರು. ಅಪ್ಪ ಹಿರಿಯ ಮಗನನ್ನು ನೋಡಿ ಕಾರಿಗೆ ಬಿದ್ದ ಗೆರೆಗಳಿಗಾಗಿ ನಿನ್ನ ತಮ್ಮನ ಕೈಬೆರಳುಗಳನ್ನು ಗಾಯ ಮಾಡಿಬಿಟ್ಟೆಯಲ್ಲಾ. ಕನ್ನಡಿ ಗಿಂತ ನಿನ್ನ ತಮ್ಮನ ಕೈಬೆರಳುಗಳು ಕಾರಿಗಿಂತ ಮುಖ್ಯವಲ್ಲವೇ ಎಂದು ಹೇಳಿದರು. ಹಿರಿಯ ಮಗನು ಮಾತನಾಡಲಾಗದೇ ನಿಂತುಬಿಟ್ಟನು.

ಸತ್ಯವೇದದಲ್ಲಿ, ಲೂಕ 15ನೇ ಅಧ್ಯಾಯದಲ್ಲಿ ಒಬ್ಬ ತಂದೆಗೆ ಇಬ್ಬರು ಮಕ್ಕಳು ಇದ್ದಾರೆ. ಅವರಲ್ಲಿ ಕಿರಿಯ ಮಗನು ಆಸ್ತಿಯಲ್ಲಿ ತನ್ನ ಭಾಗವನ್ನು ಬೇರ್ಪಡಿಸಿಕೊಂಡು ಹೋಗಿ ತನ್ನ ಇಷ್ಟದಂತೆ ಜೀವಿಸಿದನು. ಒಂದು ನಿರ್ದಿಷ್ಟವಾದ ದಿನದಲ್ಲಿ ಎಲ್ಲವನ್ನು ಖರ್ಚು ಮಾಡಿಬಿಟ್ಟು ತಿನ್ನಲು ಕೂಡ ಮಾರ್ಗವಿಲ್ಲದೆ ಹಂದಿಗಳು ತಿನ್ನುವ ಆಹಾರವು ಕೂಡ ಸಿಗದೇ ಇರುವ ಪರಿಸ್ಥಿತಿಯಲ್ಲಿ, ಮನಸಾಂತರ ಹೊಂದಿ, ಬುದ್ಧಿ ಬಂದು ತಂದೆಯ ಬಳಿಗೆ ಬರುತ್ತಾನೆ. ತಂದೆಯೋ ಅವನನ್ನು ತಬ್ಬಿಕೊಂಡು ಅವನಿಗಾಗಿ ಸಂತೋಷ ಪಡುತ್ತಿದ್ದಾರೆ. ಆದರೆ ಹಿರಿಯ ಮಗನಿಂದ, ತನ್ನ ಸಹೋದರನನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.

ಇದನ್ನು ಓದುತ್ತಿರುವ ಸ್ನೇಹಿತರೇ! ಇಂದಿನ ಪ್ರಪಂಚವು ಒಬ್ಬರ ತಪ್ಪುಗಳಿಗಾಗಿ ದಂಡನೆ ಕೊಡಲು ಮುಂದಿದೆ. ಆದರೆ ತಂದೆಯ ಮನಸ್ಸುಳ್ಳವರು ಅನೇಕರಿಲ್ಲ. ಪಾಪ ಮಾಡಿ  ಮನಸಾಂತರ ಹೊಂದಿ ಅದರಿಂದ ಹೊರಗೆ ಬಂದು ಜೀವಿಸಬೇಕು ಎಂದು ನೆನೆಸುವ ಕಿರಿಯ ಮಗನಂತಹ ಯೌವನಸ್ಥರು, ಹಿರಿಯರು ಹೇರಳವಾಗಿ ಇದ್ದಾರೆ. ಆದರೆ ಅವರನ್ನು ಅಂಗೀಕರಿಸಲು ಕೆಲವರು ಹಿರಿಯ ಮಗನಂತೆ ಹಿಂಜರಿಯುತ್ತಿದ್ದಾರೆ. ಆದರೆ ನಾವು ತಂದೆಯಂತೆ ಒಬ್ಬೊಬ್ಬರನ್ನು ಅಂಗೀಕರಿಸಬೇಕು, ಆದರಿಸಬೇಕು, ಉತ್ಸಾಹ ಪಡಿಸಬೇಕು. ಹೌದು ಒಂದೊಂದು ಕ್ರೈಸ್ತರಿಗೂ ಇರಬೇಕಾದದ್ದು ತಂದೆಯ ಮನಸ್ಸೇ!
-    Bro.ಎಜ್ರಾ

ಪ್ರಾರ್ಥನಾ ಅಂಶ:-
Peace centre ಕಟ್ಟಡ ಕೆಲಸಗಳು ಬೇಗನೆ ಪ್ರಾರಂಭಿಸಲ್ಪಡಲು ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)