Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.03.2021

ಧೈನಂದಿನ ಧ್ಯಾನ(Kannada) – 12.03.2021

ದೇವರ ಚಿತ್ತವಾ, ಮನುಷ್ಯರ ಚಿತ್ತವಾ!

"ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು ಎಂಬದಾಗ ಿ ಅವನ ವಿಷಯ ದಲ್ಲಿ ಸಾಕ್ಷಿಹೇಳಿದನು." - ಅಪೊಸ್ತಲ 13:22

ಒಬ್ಬ ಯೌವನಸ್ಥನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಕುಟುಂಬದ ಕಷ್ಟಗಳ ನಿಮಿತ್ತವಾಗಿ ಕೆಲಸಕ್ಕೆ ಹೋದನು. ಹೆಚ್ಚುಕಡಿಮೆ ಒಂದೂವರೆ ವರ್ಷ ಆತನು ಕೆಲಸ ಮಾಡಿರುತ್ತಾನೆ. ಅಷ್ಟರೊಳಗೆ ಶರೀರದಲ್ಲಿ ಬಲಹೀನತೆ ಉಂಟಾಗಿ ವ್ಯಾಧಿಯಿಂದ ಕೆಲಸ ಮಾಡಲಾಗದೆ ಮನೆಗೆ ಬಂದುಬಿಟ್ಟನು. ದುಡಿದು ತನ್ನ ಕುಟುಂಬದ ಬಡತನವನ್ನು ಮಾರ್ಪಡಿಸಿ ಒಂದು ಒಳ್ಳೆ ಸ್ಥಿತಿಗೆ ತರಬೇಕೆಂಬ ಆಸೆಯೆಲ್ಲಾ ಪ್ರಶ್ನೆಯಾಗಿಯೇ ಉಳಿದುಬಿಟ್ಟಿತು. ಅವನು ಹುಟ್ಟುವುದಕ್ಕಿಂತ ಮುಂಚೆಯೇ ಆತನ ತಾಯಿ ನೀವು ನನಗೆ ಒಂದು ಗಂಡು ಮಗನನ್ನು ಕೊಟ್ಟರೆ ಆ ಮಗುವನ್ನು ನಿಮ್ಮ ಸೇವೆಗೆ ಸಮರ್ಪಿಸುತ್ತೇನೆ ಎಂದು ಪ್ರಾರ್ಥಿಸಿದ್ದರು. ದೇವರು ಪ್ರಾರ್ಥನೆಯನ್ನು ಕೇಳಿ ಒಂದು ಗಂಡು ಮಗನನ್ನು ಕೊಟ್ಟರು. ಈ ಪರಿಸ್ಥಿತಿಯಲ್ಲಿ ದೇವರು ಅವರು ಮಾಡಿದ ಸಮರ್ಪಣೆಯನ್ನು ನೆನಪು ಮಾಡಿದರು. ದೇವರ ಬಳಿ ತನ್ನ ತಪ್ಪನ್ನು ಗ್ರಹಿಸಿ ಕ್ಷಮಾಪಣೆ ಕೇಳಿ ಇನ್ನು ಇವನಿಂದ 1 ಲಕ್ಷ ಸಂಬಳ ಬಂದರು ಅದು ನನಗೆ ಬೇಡ ಎಂದು ಹೇಳಿ ತನ್ನ ಮಗನನ್ನು ದೇವರ ಚಿತ್ತದಂತೆ ಸೇವೆಗೆ ಒಪ್ಪಿಸಿಕೊಟ್ಟರು. ಶಾರೀರಿಕ ಇಷ್ಟವನ್ನು ಬಿಟ್ಟು ದೇವರ ಚಿತ್ತವನ್ನು ಮಾಡಿದರು. ದೇವರು ಆ ಸಮರ್ಪಣೆಯನ್ನು ನೋಡಿ ಅವನನ್ನು ಗುಣಪಡಿಸಿ, ಸಂಪೂರ್ಣ ಆರೋಗ್ಯವನ್ನು ಕೊಟ್ಟು ಇಂದಿಗೂ ಅವನನ್ನು ಸೇವೆಯಲ್ಲಿ ಉಪಯೋಗಿಸುತ್ತಾ ಬರುತ್ತಿದ್ದಾರೆ.

ದೇವರಿಂದ ಆರಿಸಲ್ಪಟ್ಟ ತನ್ನ ಜನರನ್ನು ಆಳುವಂತೆ ದೇವರು ಸೌಲನನ್ನು ರಾಜನಾಗಿ ಅಭಿಷೇಕ ಮಾಡಿದರು. ಆದರೆ ಇವನು ದೇವರಿಗೆ ವಿಧೇಯನಾಗದೆ ತನ್ನ ಇಷ್ಟದಂತೆ ಮಾಡಿದನು ಇದರಿಂದಾಗಿ ದೇವರು ಅವನನ್ನು ರಾಜನಾಗಿ ಮಾಡಿದ್ದಕ್ಕಾಗಿ ಮನನೊಂದು ಅವನನ್ನು ತಳ್ಳಿ ತನ್ನ ಹೃದಯಕ್ಕೆ ತಕ್ಕವನೆಂದು ದಾವೀದನನ್ನು ಕಂಡು ಅವನನ್ನು ರಾಜನಾಗಿ ಅಭಿಷೇಕ ಮಾಡಿದರು. ಅವನು ದೇವರಿಗೆ ಚಿತ್ತವಾದದ್ದೆಲ್ಲವನ್ನು ಮಾಡಿದನು. ಆದ್ದರಿಂದ ದೇವರು ದಾವೀದನ ಬಗ್ಗೆ ಸಾಕ್ಷಿ ಕೊಟ್ಟರು.

ನನ್ನ ಪ್ರಿಯರೇ! ಇದನ್ನು ಓದುತ್ತಿರುವ ನಿಮ್ಮ ಬಗ್ಗೆ ಏನು? ದೇವರು ಈ ಲೋಕದಲ್ಲಿ ಉಂಟುಮಾಡಿರುವ ಒಂದೊಂದು ಮನುಷ್ಯನ ಕುರಿತು ಒಂದು ಉದ್ದೇಶವಿಲ್ಲದೆ ಉಂಟುಮಾಡಲಿಲ್ಲ. ಸೌಲನು ತನ್ನ ಮನಸ್ಸಿಗೆ ಇಷ್ಟವಾದಂತೆ ಜೀವಿಸಿ ದೇವರಿಂದ ತಿರಸ್ಕರಿಸಲ್ಪಟ್ಟನು. ಆದರೆ ದಾವೀದನೋ ದೇವರ ಚಿತ್ತವನ್ನು ನೆರವೇರಿಸಿ ನನ್ನ ಹೃದಯಕ್ಕೆ ತಕ್ಕವನು ಎಂದು ಒಳ್ಳೆ ಸಾಕ್ಷಿಯನ್ನು ಹೊಂದಿಕೊಂಡನು. ನಾವು ಕೂಡ ದೇವರ ಚಿತ್ತದಂತೆ ಮಾಡಿ ಜೀವಿಸೋಣ. ದೇವರಿಂದ ಒಳ್ಳೆ ಸಾಕ್ಷಿಯನ್ನು ಪಡೆದುಕೊಳ್ಳೋಣ.
-    A. ಇಮ್ಮಾನುವೇಲ್

ಪ್ರಾರ್ಥನಾ ಅಂಶ:-
7000 ಸೇವಕರನ್ನು ಪೋಷಿಸುವ 7000 ಮನೆ ಪ್ರಾರ್ಥನಾ ಗುಂಪುಗಳು ರೂಪಿಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)