Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 11.03.2021

ಧೈನಂದಿನ ಧ್ಯಾನ(Kannada) – 11.03.2021

ಯೋಜನೆ ಪ್ರಾರಂಭವಾಗುತ್ತದೆ

" ...ಆಶ್ಚರ್ಯ ವನ್ನು ನೋಡುವೆನು ಅಂದನು..." - ವಿಮೋಚನ ಕಾಂಡ 3:3

ಹಣ್ಣಿನ ಮರಗಳಿಂದ ತುಂಬಿದ ಒಂದು ಸುಂದರವಾದ ತೋಟವದು! ಅಲ್ಲಿರುವ ಹಣ್ಣಿನ ಮರಗಳೆಲ್ಲ ತನ್ನ ಹಣ್ಣಿನ ಹೆಮ್ಮೆಯನ್ನು ಕುರಿತು ಮಾತನಾಡಿಕೊಳ್ಳುತ್ತಿದ್ದವು. ಮೊದಲು ಆಪಲ್ ಮರ ಮಾತನಾಡಲು ಪ್ರಾರಂಭಿಸಿತು, "ನಾನು ತುಂಬಾ ದುಬಾರಿ, ನನ್ನ ಹಣ್ಣನ್ನೇ ಎಲ್ಲರೂ ಇಷ್ಟಪಡುವುದು, ಪೋಷಕಾಂಶಗಳು ತುಂಬಿರುವುದು ನನ್ನಲ್ಲಿಯೇ"ಎಂದಿತು. ಹೀಗೆ ಮಾತನಾಡುತ್ತಿರುವಾಗಲೇ ಆರೆಂಜ್ ಮರ, "ನಾನು ಮಾತ್ರ ಕಡಿಮೇನಾ? ವಿಟಮಿನ್ ಸಿ ಪೋಷಕಾಂಶ ತುಂಬಿದ, ಕಲರ್ಫುಲ್ ಆಗಿರುವ  ಹಣ್ಣು ನಾನೇ" ಎಂದು ಕೊಚ್ಚಿಕೊಳ್ಳುತ್ತಿತ್ತು. ಹೀಗೆ ಎಲ್ಲಾ ಹಣ್ಣಿನ ಮರಗಳು ತಮ್ಮ ಹಣ್ಣಿನ ಹೆಮ್ಮೆಯನ್ನು ಮಾತನಾಡಿಕೊಳ್ಳುತ್ತಿದ್ದವು. ಇದೆಲ್ಲವನ್ನು ಆ ತೋಟದ ಹೊರಗೆ ದಾರಿ ಪಕ್ಕದಲ್ಲಿ ಗಮನಿಸುತ್ತಿದ್ದ ಮುಳ್ಳಿನ ಗಿಡ "ಛೇ ನನಗೆ ಯಾವ ಒಂದು ಗುಣವೂ ಇಲ್ಲ, ನನ್ನ ಬಳಿ ಇರುವುದೆಲ್ಲಾ ಮುಳ್ಳುಗಳೇ. ಆದ್ದರಿಂದ ಯಾರು ನನ್ನನ್ನು ಸಮೀಪಿಸುವುದಿಲ್ಲ"ಎಂದು ದುಃಖ ಪಟ್ಟಿತು. ಆದರೆ ನಮ್ಮ ದೇವರು ಮೋಶೆಯ ಬಳಿ ಮುಳ್ಳಿನ ಗಿಡದ ಮಧ್ಯದಿಂದಲೇ ಮಾತನಾಡಿದರು ಎಂದು ಅದಕ್ಕೆ ಗೊತ್ತಾ, ಏನು?

ಐಗುಪ್ತದಲ್ಲಿ ದಾಸತ್ವದಲ್ಲಿದ್ದ ಲಕ್ಷಾಂತರ ಜನರನ್ನು ಬಿಡಿಸಲು ಮೋಶೆ ಎಂಬ ಒಬ್ಬ ಮನುಷ್ಯನಿಗೆ ದೇವರು ಒಂದು ಮುಳ್ಳಿನ ಗಿಡದ ಮಧ್ಯದಲ್ಲಿಯೇ ಉಜ್ಜೀವನದ ಯೋಜನೆಯನ್ನು ಕೊಟ್ಟರು. ಇದನ್ನು ಮೋಶೆ ಒಂದು ಅದ್ಭುತವಾದ ದೃಶ್ಯವಾಗಿ ನೋಡಿದನು. ಉಜ್ಜೀವನದ ಯೋಜನೆಗೆ ಪ್ರಾರಂಭವೇ ಮುಳ್ಳಿನ ಗಿಡ.

ಪ್ರಿಯರೇ! ಇಂದು ನೀವು ಮತ್ತೊಬ್ಬರಿಗೆ ಮುಳ್ಳು ಗಿಡದ ಹಾಗೆ ಇರಬಹುದು. ಯಾರು ಕೂಡ ಸಮೀಪಿಸಲು ಬಯಸದ, ಗೌರವಿಸದ ಪರಿಸ್ಥಿತಿಯಲ್ಲಿ ಇರಬಹುದು. ನಿಮ್ಮ ಶರೀರದ ಬಲಹೀನತೆ, ತಿಳುವಳಿಕೆ ಇಲ್ಲದಿರುವುದು, ಜ್ಞಾನದ ಕೊರತೆ ಇವುಗಳಿಂದ ನೀವು ತಳ್ಳಲ್ಪಡಬಹುದು. ನಿರುತ್ಸಾಹ ಗೊಳ್ಳಬೇಡಿರಿ ಪರಿಸ್ಥಿತಿಗಳನ್ನೆಲ್ಲ ಒಂದು ಕ್ಷಣ ಮಾತ್ರದಲ್ಲಿ ಅವರು ಮಾರ್ಪಡಿಸಲು ಸರ್ವಶಕ್ತನಾಗಿದ್ದಾರೆ. ಏಕೆಂದರೆ ಪರಿಸ್ಥಿತಿಗಳಿಗಿಂತ ಅವರು ದೊಡ್ಡವರು. ಮುಳ್ಳು ಗಿಡವನ್ನು ಅದ್ಭುತವಾದ ದೃಶ್ಯವಾಗಿ ಮಾರ್ಪಡಿಸಿ, ಆ ಗಿಡದಲ್ಲಿ ಒಂದು ಉಜ್ಜೀವನದ ಯೋಜನೆಯನ್ನು ಪ್ರಾರಂಭಿಸಿದ ದೇವರು ನಿಮ್ಮನ್ನು ಕೂಡ ಎಲ್ಲರೂ ಆಶ್ಚರ್ಯ ಪಡುವ ವಿಧವಾಗಿ ಮಾರ್ಪಡಿಸಿ ನಿಮ್ಮ ಬಳಿ ತಮ್ಮ ಯೋಜನೆಯನ್ನು ಪ್ರಾರಂಭಿಸುತ್ತಾರೆ. ಅವರ ಬಳಿ ನಿಮ್ಮನ್ನು ಒಪ್ಪಿಸಿಕೊಟ್ಟು ಒಂದು ಚಿಕ್ಕ ಪ್ರಾರ್ಥನೆಯನ್ನು ಮಾಡುತ್ತೀರಾ?
-    Mrs. ಎಬಿನೇಜರ್

ಪ್ರಾರ್ಥನಾ ಅಂಶ:-
7000 ಸೇವಕರ ಮುಖಾಂತರ 1ಲಕ್ಷ ಗ್ರಾಮಗಳು ಸಂಧಿಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)