Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 10.03.2021

ಧೈನಂದಿನ ಧ್ಯಾನ(Kannada) – 10.03.2021

ಕರ್ತನು ಕೊಡುವ ಆಶೀರ್ವಾದ

"ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು." - ಜ್ಞಾನೋಕ್ತಿಗಳು 10:22

ಒಬ್ಬ ರಾಜನು ತನ್ನ ಅರಮನೆಯಲ್ಲಿರುವ ಒಬ್ಬ ಸೇವಕನು ಯಾವಾಗಲೂ ಸಂತೋಷದಿಂದ ಇರುವುದನ್ನು ನೋಡಿ ಮಂತ್ರಿಯ ಬಳಿ,  "ಇವನು ಯಾವಾಗಲೂ ಹೇಗೆ ಇಷ್ಟೊಂದು ಸಂತೋಷವಾಗಿದ್ದಾನೆ"ಎಂದು ಕೇಳಿದರು. ಮಂತ್ರಿ ಸ್ವಲ್ಪ ಸಮಯ ಆಲೋಚಿಸಿ, ರಾಜನ ಬಳಿ 99 ಚಿನ್ನದ ನಾಣ್ಯಗಳನ್ನು ಕೇಳಿ ತೆಗೆದುಕೊಂಡು ಒಂದು ಚೀಲದಲ್ಲಿ ಹಾಕಿ, ಆ ಚೀಲದಲ್ಲಿ "ರಾಜನ ಪ್ರೀತಿಯ ಕಾಣಿಕೆ-100 ಚಿನ್ನದ ನಾಣ್ಯಗಳು" ಎಂದು ಬರೆದು ಆ ಸೇವಕನ ಬಳಿ ಕೊಟ್ಟರು. ಆ ಸೇವಕನು ಎಣಿಸಿ ನೋಡಿ 99 ಮಾತ್ರ ಇದ್ದದರಿಂದ ತನ್ನ ಹೆಂಡತಿ, ಮಕ್ಕಳನ್ನು ಕರೆದು ತಪ್ಪು ನಡೆದುಹೋಯಿತು ಎಂದು ಹೇಳಿ ಮನೆ ಪೂರ್ತಿಯಾಗಿ ಹುಡುಕಿ ನೋಡಿ ಉರಿಗೊಂಡು, ಕೋಪ ಮಾಡಿಕೊಂಡನು. ಮರುದಿನ ಬಹಳ ವ್ಯಸನದೊಂದಿಗಿದ್ದ ಅವನನ್ನು ನೋಡಿ ಬಿಟ್ಟು, ಮಂತ್ರಿಯ ಮೂಲಕ ನಡೆದದ್ದನ್ನು ತಿಳಿದುಕೊಂಡ ರಾಜ ತನ್ನದಲ್ಲದ  ಒಂದು ಚಿನ್ನದ ನಾಣ್ಯಕ್ಕಾಗಿ ಸಂತೋಷವನ್ನೇ ಕಳೆದುಕೊಂಡನೇ ಎಂದು ನೆನೆಸಿದನು.

ಸತ್ಯವೇದದಲ್ಲಿ ಸಿರಿಯಾ ದೇಶದ ಸೇನಾಪತಿಯಾಗಿದ್ದ ನಾಮಾನನು ತನ್ನ ಕುಷ್ಠರೋಗ ನೀಗಿ ಹೋಗಲು ದೇವರ ಮನುಷ್ಯನಾದ ಎಲೀಷನನ್ನು ಹುಡುಕಿ ಬಂದನು. ಎಲೀಷನ ಮಾತಿನಂತೆಯೇ ಯೊರ್ದನ್ ನಲ್ಲಿ ಏಳು ಬಾರಿ ಸ್ನಾನ ಮಾಡಿದಾಗ ಅವನ ಕುಷ್ಠವು ನೀಗಿ ಹೋಯಿತು. ಅದಕ್ಕಾಗಿ ಕಾಣಿಕೆಯನ್ನು ಎಲೀಷನ ಬಳಿ ಕೊಡಲು, ಅವನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದನು. ಆದರೆ ಎಲೀಷನ ಕೆಲಸಗಾರನಾದ ಗೇಹಜಿಯು ಅದರ ಮೇಲೆ ಆಸೆ ಪಟ್ಟು ನಾಮಾನನ್ನು ಹಿಂಬಾಲಿಸುತ್ತಾ ಹೋಗಿ, ಎಲೀಷ ಕೇಳಿದರು ಎಂದು ಹೇಳಿ ವಸ್ತುಗಳನ್ನು ತೆಗೆದುಕೊಂಡಿದ್ದರಿಂದ ನಾಮಾನನ ಕುಷ್ಠವು ಅವನಿಗೂ ಅವನ ಸಂತತಿಗೂ ಅಂಟಿಕೊಂಡಿತು.

ಅದರಂತೆಯೇ ನಮ್ಮ ಜೀವನದಲ್ಲಿ ಕರ್ತನು ಅನೇಕ ಆಶೀರ್ವಾದಗಳನ್ನು ಕೊಟ್ಟಿರಲು, ಇಲ್ಲದೆ ಇರುವ ಯಾವುದೋ ಒಂದರ ಬಗ್ಗೆ ಚಿಂತಿಸಿ, ಅದನ್ನು ಹುಡುಕಿ ಜೀವನವನ್ನೇ ನಷ್ಟ ಪಡಿಸಿಕೊಳ್ಳುವವರುಂಟು. ಕರ್ತನು ಕೊಟ್ಟ ಕೆಲಸ, ಕುಟುಂಬ, ಅಂತಸ್ತು, ಪ್ರತಿಭೆಗಳು ಇವುಗಳಲ್ಲಿ ತೃಪ್ತಿ ಹೊಂದಿ ನಾವು ತೃಪ್ತಿಯನ್ನು ಕಾಣುತ್ತಿದ್ದೇವಾ? ಹಣದಾಸೆ ಎಲ್ಲಾ ಕೆಟ್ಟತನಕ್ಕೆ ಬೇರಾಗಿದೆ ಎಂದು ತಿಳಿಯದೆ ಗೇಹಜಿಯ ಹಾಗೆ ಶಾಪವನ್ನು ಹೊಂದಿದವರೂ ಉಂಟು. ಕರ್ತನು ನಮಗೆ ಕೊಟ್ಟಿರುವ ಬೆಲೆಯುಳ್ಳ ರಕ್ಷಣೆಯನ್ನು ನೆನಪಿನಲ್ಲಿಟ್ಟುಕೊಂಡು, ಇದಕ್ಕಾಗಿ ಚಿಂತಿಸಿ ಮನಸ್ಸು ಹೋದಂತೆಲ್ಲಾ ಜೀವನವನ್ನು ನಡೆಸದೆ ಕರ್ತನು ಕೊಟ್ಟಿರುವ ಆಶೀರ್ವಾದಕ್ಕಾಗಿ ಅವರನ್ನು ಸ್ತುತಿಸಿ ಅವರ ಕೃಪೆಯನ್ನು ನಾವು ಹೊಂದಿಕೊಳ್ಳೋಣ.
-    Mrs. ವಸಂತಿ ರಾಜಮೋಹನ್

ಪ್ರಾರ್ಥನಾ ಅಂಶ:-
7000 ಸೇವಕರನ್ನು ಪೋಷಿಸುವ 7000 ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ  ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)