Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 09.03.2021

ಧೈನಂದಿನ ಧ್ಯಾನ(Kannada) – 09.03.2021

ಜ್ಞಾನವಿಲ್ಲದ ಹೃದಯ

"... ನಿನ್ನ ವಾಕ್ಯಾನುಸಾರವಾಗಿ ನನಗೆ ಜ್ಞಾನವನ್ನು ದಯಪಾಲಿಸು." - ಕೀರ್ತನೆಗಳು 119:169

ಒಂದು ಸರ್ಕಸ್ ನಲ್ಲಿ ಕೋಡಂಗಿಗಳು ನಿಂತು ಎಲ್ಲರನ್ನೂ ನಗಿಸುತ್ತಿದ್ದರು. ಜನರು ತಮ್ಮನ್ನೇ ಮರೆತು ಅವರು ಮಾಡುತ್ತಿದ್ದ ಕೋಡಂಗಿ ತನವನ್ನು ಸಂತೋಷದಿಂದ ನೋಡುತ್ತಿದ್ದರು. ಧಿಡೀರ್ ಎಂದು ಆ ಸರ್ಕಸ್ ಓನರ್ ಮುಂದೆ ಬಂದು ಆ ಸರ್ಕಸ್ ಗುಡಾರವು ಬೆಂಕಿ ಬಿದ್ದಿರುವುದಾಗಿ, ಕೂಡಲೇ ಎಲ್ಲರೂ ಹೊರಗೆ ಹೋಗುವಂತೆ ಕೇಳಿಕೊಂಡರು. ಆದರೆ ಜನರು ಇದು ಕೂಡ ನಗುವುದಕ್ಕಾಗಿ ಹೇಳುತ್ತಿರುವ ಕಾರ್ಯ ಎಂದು ನೆನೆಸಿ ಇನ್ನೂ ನಗಲು ಪ್ರಾರಂಭಿಸಿದರು.  ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿತು, ನಂತರವೇ ಜನರಿಗೆ ಅರ್ಥವಾಯಿತು. ಅದು ನಗುವಿಗಾಗಿ ಅಲ್ಲ, ನಿಜವೇ ಎಂದು. ಆದರೆ ಅಷ್ಟರೊಳಗೆ,ಆ ಗುಡಾರ ಪೂರ್ತಿಯಾಗಿ ಬೆಂಕಿ ಹೊತ್ತಿಕೊಂಡದರಿಂದ ಜೀವ ಉಳಿಸಿಕೊಂಡವರು ಕೆಲವರು ಮಾತ್ರವೇ.

ಸುಖಭೋಗಗಳಿಂದ ಜೀವಿಸುತ್ತಿದ್ದ ಒಬ್ಬ ಹಣವಂತನ ಬಗ್ಗೆ ಸತ್ಯವೇದದಲ್ಲಿ ಬರೆಯಲ್ಪಟ್ಟಿದೆ. ಅವನ, ಮನೆಯ ಬಾಗಿಲಲ್ಲಿ ಘೋರವಾದ ಹುಣ್ಣುಗಳಿಂದ ಭಿಕ್ಷೆ ಬೇಡುತ್ತಿದ್ದ ಲಾಜರನ ಮೇಲೆ ಮನ ಮರುಗಲಿಲ್ಲ. ಅವನಿಗೆ ಸಹಾಯ ಮಾಡಬೇಕೆಂಬ ಜ್ಞಾನ ಹೃದಯವಿಲ್ಲ. ಮರಣದವರೆಗೂ ಅವನ ಹೃದಯವು ಗ್ರಹಿಸಿದ್ದನ್ನು ಕಾಣಲೇ ಇಲ್ಲ. ಇಬ್ಬರು ಮರಣ ಹೊಂದಿದರು. ಲಾಜರನು ಪರಲೋಕದಲ್ಲಿ! ಧನವಂತನೋ ನರಕದಲ್ಲಿ! ಈಗಲೇ ಧನವಂತನಿಗೆ ಗ್ರಹಿಸುವ ಹೃದಯವು ಬರುತ್ತಿದೆ. ತನ್ನಂತೆ ಭೂಮಿಯಲ್ಲಿ ಜೀವಿಸುತ್ತಿರುವ ತನ್ನ ಸಹೋದರರಿಗಾಗಿ ದುಃಖ ಪಡುತ್ತಿದ್ದಾನೆ. ಅವರ ಬಳಿ ಲಾಜರನನ್ನು ಕಳುಹಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಸಾಧ್ಯವಾಗಲಿಲ್ಲ.

ಮೇಲ್ಕಂಡ ಎರಡು ಸಂಭವಗಳನ್ನು ನಾವು ನೋಡುವಾಗ, ಅಲ್ಪವಾದ ಸಂತೋಷಕ್ಕಾಗಿ ಜನರು ಹೃದಯದಲ್ಲಿ ಗ್ರಹಿಕೆ ಇಲ್ಲದೆ ಇದ್ದರು. ಧನವಂತನು ತನಗೆ ಐಶ್ವರ್ಯವನ್ನು ಕೊಟ್ಟ ದೇವರನ್ನು ನೆನೆಸದೆ ಹೃದಯದಲ್ಲಿ ಗ್ರಹಿಕೆಯಿಲ್ಲದವನಾಗಿಯೇ ಜೀವಿಸಿ ಸಮಾಧಿ ಮಾಡಲ್ಪಟ್ಟನು.

ಹೌದು ಪ್ರಿಯರೇ! ನಮಗೆ ಗ್ರಹಿಸುವ ಹೃದಯವು ಬೇಕು. ನಮಗೆ ಭೂಮಿಯಲ್ಲಿ ಜೀವಿಸುವುದಕ್ಕೆ ಕೊಡಲ್ಪಟ್ಟ ದಿನಗಳು ಬಹಳ ಕಡಿಮೆಯೇ. ಆ ದಿನಗಳಲ್ಲಿ ಗ್ರಹಿಸುವ ಮನಸ್ಸಾಕ್ಷಿಯೊಂದಿಗೆ ಜೀವಿಸೋಣ. ನಮ್ಮ ಬಳಿ ಇರುವವರಿಗೆ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಹಾಯಗಳನ್ನು ಮಾಡೋಣ. ಸಹಾಯವಿಲ್ಲದೆ, ಬೆಂಬಲವಿಲ್ಲದ ಅನೇಕರಿಗೆ ಯೇಸುವಿನ ಪ್ರೀತಿಯನ್ನು ಪ್ರಕಟಿಸೋಣ. ನಾಶನವು ಬರುವವರೆಗೂ ಗ್ರಹಿಕೆಯಿಲ್ಲದೆ ಇರುವುದಾದರೆ ಬರುವ ಕೋಪಕ್ಕೆ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ.
-    Mrs. ಶಶಿಕಲಾ ಶಿವ

ಪ್ರಾರ್ಥನಾ ಅಂಶ:-
ಇಂದು ನಡೆಯುವ ಸಹ ಸೇವಕರ ಕೂಡಿಕೆಯಲ್ಲಿ ಭಾಗವಹಿಸುವ ಸೇವಕರಿಗಾಗಿ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)