Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 08.03.2021

ಧೈನಂದಿನ ಧ್ಯಾನ(Kannada) – 08.03.2021

ಅತ್ಯುತ್ತಮ ಮಹಿಳೆಯಾದ ಫೊಯಿಬೆ

"ಆಕೆಯ ಕೈಗೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ; ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ." - ಜ್ಞಾನೋಕ್ತಿಗಳು 31:31

1839 ನೇವರ್ಷ ಮಾರ್ಚ್ 8 ನೇ ತಾರೀಕು ನ್ಯೂಯಾರ್ಕ್ ನಲ್ಲಿ ಜೀವಿಸುತ್ತಿದ್ದ ಡಾಕ್ಟರ್ ವಾಲ್ಟರ್ ದಂಪತಿಗಳಿಗೆ ಫೊಯಿಬೆ ಎಂಬ ಹೆಣ್ಣು ಮಗು ಜನಿಸಿತು.ಅತ್ಯುತ್ತಮವಾದ  ಭಕ್ತಿ ಜೀವನವನ್ನು ಜೀವಿಸುತ್ತಿದ್ದರು ಈ ಕುಟುಂಬದವರು. ಚಿಕ್ಕ ವಯಸ್ಸಿನಿಂದಲೇ ದೈವ ಭಕ್ತಿಯಲ್ಲಿ, ದೇವರ ಪ್ರೀತಿಯಲ್ಲಿ ಬೆಳೆದು ಬರುತ್ತಿದ್ದ ಫೊಯಿಬೆ ಗೆ ಜೋಸೆಫ್ ನಾಟ್ ಎಂಬ ವ್ಯಕ್ತಿಯೊಂದಿಗೆ ವಿವಾಹ ನಡೆಯಿತು, ಇವರು ಬಹಳ ದೊಡ್ಡ ಹಣವಂತರು.

ಬಹಳ ಹಣವಂತರಾಗಿಯು, ಪ್ರಖ್ಯಾತಿ ಪಡೆದಿದ್ದ ಫೊಯಿಬೆ ಸಭೆಯಲ್ಲಿ, ಸಮಾಜದಲ್ಲಿ ಸಂಸ್ಕರಣೆ ಉಂಟಾಗಬೇಕೆಂದು, ಕುತೂಹಲದಿಂದ ಬಡವರು, ತಳ್ಳಲ್ಪಟ್ಟವರು, ದುರ್ಬಲರು ಎಂಬ ಎಲ್ಲಾ ವಿಧ ಜನರಿಗೆ ಸೇವೆ ಮಾಡುತ್ತಾ ಬಂದರು. ನಂತರ ಇಂಟರ್ನ್ಯಾಷನಲ್ ಸನ್ ಶೈನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಬಡವರನ್ನು, ತಿರಸ್ಕರಿಸಲ್ಪಟ್ಟವರನ್ನು, ವಿಧವೆಯರ ಜೀವನವನ್ನು ಬೆಳಗಿಸಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಯು ಕೆಲಸ ಮಾಡುತ್ತಾ ಬಂತು. ಈ ಸಂಸ್ಥೆಗೆ ನಾಯಕಿಯಾಗಿದ್ದ ಫೊಯಿಬೆ ಅನೇಕ ಬಡ ಸ್ತ್ರೀಯರಿಗೆ, ಮಕ್ಕಳಿಗೆ, ಹಿರಿಯರಿಗೆ ಹೀಗೆ ತನ್ನ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದ ಎಲ್ಲರಿಗೂ ಸಂಪೂರ್ಣ ಹೃದಯದಿಂದ ಸಹಾಯ ಮಾಡಿ ಅವರ ಜೀವನಗಳನ್ನು ಬೆಳಗಿಸಿದರು.

ಫೊಯಿಬೆ ನಾಟ್ ಮ್ಯೂಸಿಕಲ್ ನಲ್ಲಿಯೂ ಶ್ರೇಷ್ಟವಾದ ವ್ಯಕ್ತಿಯಾಗಿದ್ದು ಸಂಜೆ ವೇಳೆಯಲ್ಲಿ ಮ್ಯೂಸಿಕ್ ಪ್ರೋಗ್ರಾಂಗಳನ್ನು ನಡೆಸುತ್ತಾ ಬಂದರು. ಆ ದಿನಗಳಲ್ಲಿ ಪ್ರಖ್ಯಾತಿಗೊಂಡ ಹಾಡುಗಳ  ರಚನೆಗಾರರಿಗೆ ಆಕೆ ಸಂಗೀತವನ್ನು ಒದಗಿಸಿದರು. ಅದೇ ಸಮಯದಲ್ಲಿ ಒಳ್ಳೆಯ ಸಂದೇಶಕರು ಕೂಡ ಅದರಿಂದ ಅನೇಕ ಕ್ರೈಸ್ತ ಪುಸ್ತಕಗಳನ್ನು ಕೂಡ ಬರೆದರು. ಒಂದು ದಿನ ತನ್ನ ಸಭೆಯ ಸದಸ್ಯೆಯಾದ ಕಣ್ಣಿಲ್ಲದ ಬೆನ್ನಿ ಕ್ರಾಸ್ಬೇ ಯನ್ನು ನೋಡಲು ಅವರ ಮನೆಗೆ ಹೋದರು. ನನ್ನ ಮನಸ್ಸಿನಲ್ಲಿ ಇಂಪಾದ ರಾಗವು ಬರುತ್ತಿದೆ ಅದರಿಂದ ನಾನು ವಾದ್ಯವನ್ನು ನುಡಿಸುತ್ತೇನೆ ನೀವು ಅದನ್ನು ಬರೆಯಿರಿ ಎಂದು ಹೇಳಿದರು. ಮೊಣಕಾಲೂರಿ ಪ್ರಾರ್ಥಿಸಿದ ಫೆನ್ನಿ ಖಂಡಿತವಾಗಿ ನೀವು ನನ್ನ ಸ್ವಂತವೇ ಯೇಸು ನೀವು ನನ್ನ ಸ್ವಂತವೇ ಇದು ದೈವೀಕ ಮಹಿಮೆ ಎಂಬ ಹಾಡನ್ನು ಬರೆದು ಮುಗಿಸಿದರು. ಇದು (blessed assurance Jesus is mine) ಪ್ರಖ್ಯಾತಿಗೊಂಡ ಹಾಡಾಗಿ ಹೆಸರುಗೊಂಡಿತು.

ಪ್ರಿಯರೇ! ನಮ್ಮ ಸುತ್ತಲೂ ನಿರುತ್ಸಾಹಗೊಂಡು ಬಡತನದಲ್ಲಿ, ಅನೇಕ ವಿಧವಾದ ಸಮಸ್ಯೆಗಳಲ್ಲಿ ಜಜ್ಜಿ ಹೋಗುತ್ತಿರುವ ಅನೇಕ ಮಂದಿ ಇದ್ದಾರೆ. ದೇವರು ನಮಗೆ ಕೊಟ್ಟಿರುವ ಪ್ರತಿಭೆಗಳು, ಹಣ ಮತ್ತೊಬ್ಬರಿಗಾಗಿ ಖರ್ಚು ಮಾಡೋಣ. ಅವಶ್ಯಕತೆಗಳೊಂದಿಗೆ ಇರುವವರ ಹೃದಯವನ್ನು ಸಂತೈಸಿ ಅವರನ್ನು ಪ್ರಕಾಶಗೊಳಿಸುವುದಕ್ಕೆ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳೋಣ. ದೇವರು ನಮ್ಮನ್ನು ಶ್ರೇಷ್ಠವಾದ ಸ್ತ್ರೀಯರಾಗಿ ಜೀವಿಸಲು ಕೃಪೆಯನ್ನು ಅನುಗ್ರಹಿಸಲಿ! ಆಮೆನ್. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
-    Mrs. ಸರೋಜಾ ಮೋಹನ್ ದಾಸ್

ಪ್ರಾರ್ಥನಾ ಅಂಶ:-
ಪ್ರಾರ್ಥನಾ ಗುಡಾರದ ಕಟ್ಟಡ ಕೆಲಸಗಳ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)