Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.03.2021 (Kids Special)

ಧೈನಂದಿನ ಧ್ಯಾನ(Kannada) – 07.03.2021 (Kids Special)

ನಿನ್ನ ಜೊತೆಯಲ್ಲಿ ಬರುವವರು

"...ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು” - ಯೆಹೋಶುವ 1:9

Hello ಪುಟಾಣಿಗಳೇ! How are you? ಇಂದು ನಿಮ್ಮೊಬ್ಬೊಬ್ಬರನ್ನು ಯೇಸಪ್ಪ ಹೇಗೆ ಕಾಪಾಡುತ್ತಾರೆ ಎಂದು ಒಂದು ಕಥೆ ಕೇಳೋಣವಾ?

ಜುಳು ಜುಳು ಎಂದು ಹರಿಯುತ್ತಿರುವ ನದಿ ಪಕ್ಕದಲ್ಲಿಯೇ ಒಂದು ಸುಂದರವಾದ ಹಳ್ಳಿ. ಆ ಹಳ್ಳಿ ಯಾವಾಗಲೂ ಹಚ್ಚ ಹಸಿರಾಗಿತ್ತು. ಅಲ್ಲಿಯೇ ಝಾನ್ಸಿ ಎಂಬ ಒಂದು ಚಿಕ್ಕ ಹುಡುಗಿ ಇದ್ದಳು. ಅವಳು ಚೆನ್ನಾಗಿ ಪ್ರಾರ್ಥಿಸಿ, ಸತ್ಯವೇದವನ್ನು ಓದುವ ಮಗುವಾಗಿಯು, ಸಂಡೇ ಸ್ಕೂಲ್ ಗೆ ತಪ್ಪದೇ ಹೋಗುವವಳಾಗಿಯು ಇದ್ದಳು. ಅವಳಿಗೆ ಅಪ್ಪ, ಅಮ್ಮ ಇಲ್ಲದಿರುವುದರಿಂದ ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದಳು. ಶಾಲೆಗೆ ಹೋಗುವಾಗ ನಡೆದುಕೊಂಡೆ ಹೋಗುತ್ತಾಳೆ. ಅವಳ ಸ್ನೇಹಿತರೆಲ್ಲ ಸೈಕಲ್ ಮತ್ತು ಗಾಡಿಯಲ್ಲಿ ತಂದೆ-ತಾಯಿಯೊಂದಿಗೆ ಹೋಗುತ್ತಾರೆ, ಝಾನ್ಸಿ ಮಾತ್ರ ಒಂಟಿಯಾಗಿ ನಡೆದುಕೊಂಡು ಹೋಗುತ್ತಾಳೆ. ಹಾಗೆ ನಡೆದುಕೊಂಡು ಹೋಗುವಾಗೆಲ್ಲ Sunday class- ನಲ್ಲಿ ಹೇಳಿಕೊಟ್ಟ ಹಾಡನ್ನು ಹಾಡಿಕೊಂಡು ವಾಕ್ಯವನ್ನು ಹೇಳಿಕೊಂಡು ಹೋಗುತ್ತಾಳೆ.

ಒಂದು ದಿನ ಅವಳು ಶಾಲೆಗೆ ಹೋಗುವಾಗ ಯಾರೋ ಹಿಂಬಾಲಿಸುತ್ತಿರುವ ಹಾಗೆ ಅನಿಸಿತು. ವಾಕ್ಯವನ್ನು ಹೇಳಿಕೊಳ್ಳುತ್ತಲೇ ವೇಗವಾಗಿ ನಡೆದು ಹೋದಳು. School ಮುಗಿಸಿ ಬರುವಾಗ, ಯಾರೋ ಹಿಂಬಾಲಿಸುತ್ತಿರುವ ಹಾಗೆ ಅನಿಸಿತು, ತಿರುಗಿ ನೋಡುವುದಕ್ಕೂ ಕೂಡ ಝಾನ್ಸಿಗೆ ಭಯವಾಗಿತ್ತು. ಹಾಡು ಹಾಡಿಕೊಂಡೆ ಓಡಿಬಂದು ಮನೆಗೆ ಸೇರಿಕೊಂಡಳು. ನಡೆದದ್ದನ್ನು ಅಜ್ಜಿಯ ಬಳಿ ಹೇಳಿದಳು. "ಭಯಪಡಬೇಡ! ನೀನು ಹೋಗುವ ಸ್ಥಳದಲ್ಲೆಲ್ಲ ನಿನ್ನ ದೇವರಾದ ಕರ್ತನು ನಿನ್ನೊಂದಿಗಿದ್ದಾರೆ"ಎಂದು ಅಜ್ಜಿ ಧೈರ್ಯ ಹೇಳಿಬಿಟ್ಟು, ನೀನು ಜ್ಞಾನವಾಗಿಯು, ಎಚ್ಚರಿಕೆಯಾಗಿಯು ನಡೆದುಕೊಳ್ಳಬೇಕೆಂದು ಆಲೋಚನೆ ಹೇಳಿದರು. ಮರುದಿನ ಭಾನುವಾರ ಆಲಯಕ್ಕೆ ಹೋಗಿಬಿಟ್ಟು ಅಜ್ಜಿ, ಝಾನ್ಸಿ ನಡೆದು ಬಂದರು. ದೊಡ್ಡ ಮೀಸೆಯೊಂದಿಗೆ, ಎತ್ತರವಾಗಿದ್ದ ಒಬ್ಬರು ಬಂದು ಮುಂದೆ ನಿಂತರು.  "ನಾನು ನಾಲ್ಕುದಿನಗಳಿಂದ ನಿನ್ನನ್ನು ಹಿಂಬಾಲಿಸುತ್ತಾ, ನಿನ್ನನ್ನು ಅಪಹರಿಸಬೇಕೆಂದು ನೆನೆಸಿದೆನು ಆದರೆ ನಿನ್ನೊಂದಿಗೆ ಬಿಳಿ ವಸ್ತ್ರಗಳನ್ನು ಹಾಕಿದವರೊಬ್ಬರು ಬರುತ್ತಿದ್ದಾರೆ ಅವರು ಯಾರು?"ಎಂದು ಕೇಳಿದನು. ಅಜ್ಜಿ ಹೇಳಿದರು "ಅವರೇ ಯೇಸುಕ್ರಿಸ್ತನು" ಎಂದು. ಕ್ರಿಸ್ತನು ಅವರ ಮಕ್ಕಳನ್ನು ಹೇಗೆ ಕಾಪಾಡುತ್ತಾರೆ ಎಂದು ವಿವರವಾಗಿ ಹೇಳಿದರು. ಝಾನ್ಸಿ ಹಾಡು ಹಾಡಿಕೊಂಡೆ, ಅಜ್ಜಿ ಕೈಯನ್ನು ಹಿಡಿದುಕೊಂಡು ಸಂತೋಷದೊಂದಿಗೆ ಮನೆಗೆ ಹಿಂತಿರುಗಿದಳು.

ಮುದ್ದು ಪುಟಾಣಿಗಳೇ! ಕಥೆಯನ್ನು ಕೇಳುದ್ರಿ  ತಾನೇ, ನೀವು ಅನುದಿನವು ಸಂಧಿಸುವ ಒಂದೊಂದು ಕಾರ್ಯವನ್ನು ಹೆತ್ತವರ ಬಳಿ ಹೇಳಬೇಕು. ಝಾನ್ಸಿ ಯೇಸಪ್ಪನನ್ನು ಹುಡುಕುವ ಮಗಳಾಗಿದ್ದಳು, ಅವಳು ಹೋಗುವ ಸ್ಥಳದಲ್ಲೆಲ್ಲ ಕೇಡು ಸಂಭವಿಸದಂತೆ ಯೇಸಪ್ಪ ಜೊತೆಯಲ್ಲೇ ಇದ್ದು ಕಾಪಾಡಿದರು ಅಲ್ಲವೇ! ನಿನಗೆ ಭಯ ಉಂಟಾದಾಗೆಲ್ಲ, ಯೇಸಪ್ಪನ ಬಳಿ ಹೇಳಿಬಿಡು, ಅವರು ನಿನ್ನನ್ನು ಎಲ್ಲಾ ಕೇಡಿಗೂ ತಪ್ಪಿಸಿ, ಕಾಪಾಡುತ್ತಾರೆ. ನೀವು ಝಾನ್ಸಿಯ ಹಾಗೆ Excellent - ಆದ ಮಕ್ಕಳಾಗಿ ಮಾರ್ಪಡುತ್ತೀರಾ? Very Good
-    Mrs. ಅನ್ಬು ಜ್ಯೋತಿ ಸ್ಟಾಲಿನ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)