Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 06.03.2021

ಧೈನಂದಿನ ಧ್ಯಾನ(Kannada) – 06.03.2021

ಕ್ಷಮಿಸುವ ಗುಣ

"...ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ." - ಕೊಲೊಸ್ಸೆ 3:13

ಒಂದು ಕುಟುಂಬದಲ್ಲಿ ಗಂಡ-ಹೆಂಡತಿಯ ಮಧ್ಯೆ ಪದೇಪದೇ ಜಗಳ ನಡೆಯುತ್ತಲೇ ಇತ್ತು. ಒಂದು ದಿನ ನಡೆದ ಜಗಳದಲ್ಲಿ ಬೇರ್ಪಡುವ ಪರಿಸ್ಥಿತಿ ಏರ್ಪಟ್ಟಿತು, ಇಬ್ಬರು ಬೇರೆಬೇರೆ ಹೋಗಿಬಿಡೋಣ ಎಂಬ ತೀರ್ಮಾನಕ್ಕೆ ಬಂದರು. ಅಂದು ರಾತ್ರಿ ಗಂಡ ಪ್ರಾರ್ಥಿಸಲು ಹೋದರು. ಆಗ ದೇವರು ಅವರ ಬಳಿ ಮಾತನಾಡಿದರು,  "ನಾನು, ನೀನು ಮಾಡಿದ ಎಲ್ಲಾ ಪಾಪಗಳನ್ನು ಕ್ಷಮಿಸಿ ಅಂಗೀಕರಿಸಿದೆನು. ನೀನು ಮತ್ತೆ ಮತ್ತೆ ತಪ್ಪು ಮಾಡಿ ನನ್ನ ಬಳಿ ಬಂದು ನೀನು ಕ್ಷಮಾಪಣೆ ಕೇಳುವಾಗ ನಾನು ನಿನ್ನನ್ನು ಕ್ಷಮಿಸಿದೆನು. ನಾನು ನಿನ್ನ ಪಾಪವನ್ನು ಕ್ಷಮಿಸಿದ ಪ್ರಕಾರ, ನಿನ್ನ ಹೆಂಡತಿ ಮಾಡಿದ ತಪ್ಪನ್ನು ನೀನು ಕ್ಷಮಿಸಿಬಿಡು" ಎಂದು ಮಾತಾಡಿದರು. ಕ್ರಿಸ್ತನು ನನ್ನ ಪಾಪಗಳನ್ನು ಕ್ಷಮಿಸಿದ ಹಾಗೆ ನಾನು ನಿನ್ನ ಪಾಪವನ್ನು ಕ್ಷಮಿಸಿ ಬಿಟ್ಟೆನು ಎಂದು ಹೇಳಿ ತನ್ನ ಹೆಂಡತಿಯೊಂದಿಗೆ ರಾಜಿ ಮಾಡಿಕೊಂಡರು.

ಸತ್ಯವೇದದಲ್ಲಿ ಒಂದು ಯಜಮಾನನ ಬಳಿ 10,000 ತಲಾಂತು ಸಾಲ ಮಾಡಿಕೊಂಡಿದ್ದ ಸೇವಕನು ತನ್ನ ಯಜಮಾನನ ಬಳಿಗೆ ಹೋಗಿ, ತನ್ನಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದು ತನ್ನನ್ನು ಕ್ಷಮಿಸುವಂತೆ ಸಾಷ್ಟಾಂಗವಾಗಿ ಬಿದ್ದು ಬೇಡಿಕೊಂಡನು. ಕೂಡಲೆ ಯಜಮಾನನು ಮನಮರುಗಿ ಅವನ ಸಾಲವನ್ನು ಕ್ಷಮಿಸಿದರು. ಆ ಸೇವಕನು ಹೊರಟು ಹೋಗುತ್ತಿರುವಾಗ ತನ್ನ ಬಳಿ 100 ತಲಾಂತು ಸಾಲ ತೆಗೆದುಕೊಂಡಿದ್ದ ಕೆಲಸದವನನ್ನು ನೋಡಿ, ಸಾಲವನ್ನು ತಿರುಗಿಸಿ ಕೊಡಬೇಕು ಎಂದು ಹೇಳಿದನು. ಆ ಕೆಲಸದವನು ಸಾಲವನ್ನು ತಿರುಗಿಸಿ ಕೊಡಲು ಸಾಧ್ಯವಾಗಲಿಲ್ಲ ಎಂದು ಹೇಳಿ ಕ್ಷಮಾಪಣೆ ಕೇಳಿದಾಗ, ಅವನನ್ನು ಆ ಸೇವಕನು ಕಠಿಣವಾಗಿ ನಡೆಸಿದನು. ಇದನ್ನು ಕೇಳಿದ ಯಜಮಾನನು ನಾನು ನಿನಗೆ ಕ್ಷಮಿಸಿದ ಹಾಗೆ, ನೀನು ಕ್ಷಮಿಸಿರಬಾರದಾ, ಎಂದು ಹೇಳಿ, ಅವನ ಪೂರ್ತಿ ಸಾಲವನ್ನು ತೀರಿಸುವಂತೆ ಆಜ್ಞಾಪಿಸಿದರು.

ಪ್ರಿಯರೇ! ಇದರಂತೆಯೇ, ನಮ್ಮ ಎಲ್ಲಾ ಪಾಪದ ಸಾಲವನ್ನು ಯೇಸುಕ್ರಿಸ್ತನು ಶಿಲುಬೆಯಲ್ಲಿ ಕ್ಷಮಿಸಿ ಬಿಟ್ಟರು. ಇದನ್ನು ತಿಳಿದು, ಅನುಭವಿಸುತ್ತಿರುವ ನಾವು, ಮತ್ತೊಬ್ಬರು ಮಾಡುವ ತಪ್ಪುಗಳನ್ನು ಕ್ಷಮಿಸದೇ ಹೃದಯ ಕಾಠಿಣ್ಯದೊಂದಿಗಿದ್ದೇವಾ? ಆಲೋಚಿಸೋಣ. ಮತ್ತೊಬ್ಬರ ಚಿಕ್ಕ ಚಿಕ್ಕ ತಪ್ಪುಗಳನ್ನು ದೋಷಗಳನ್ನು ದೊಡ್ಡದಾಗಿ ನೆನೆಸಿ, ಅವುಗಳನ್ನು ಕ್ಷಮಿಸಿ ಮರೆಯದೆ ಇರುವ ನಮ್ಮ ಮನಸ್ಥಿತಿ ಬದಲಾಗಲಿ. ನಾವು ಮತ್ತೊಬ್ಬರ ದೋಷಗಳನ್ನು ಕ್ಷಮಿಸದೇ ಹೋದರೆ, ನಮ್ಮ ಪಾಪಗಳು ಕ್ಷಮಿಸಲ್ಪಡುವುದಿಲ್ಲ ಅವುಗಳನ್ನು ನ್ಯಾಯ ವಿಚಾರಣೆಗೆ ತಂದು ನಿಲ್ಲಿಸುತ್ತಾರೆ ಎಂಬ ಸತ್ಯವನ್ನು ಗ್ರಹಿಸೋಣ. ಈ ದಿನ ಮತ್ತೊಬ್ಬರನ್ನು ಮನಃಸ್ಪೂರ್ತಿಯಾಗಿ ಕ್ಷಮಿಸಿ ಅಂಗೀಕರಿಸುವ ದಿನವಾಗಿ ಮಾರ್ಪಡಲಿ.
-    S. ಗಾಂಧಿ ರಾಜನ್

ಪ್ರಾರ್ಥನಾ ಅಂಶ:-
ಕಚೇರಿ ಕೆಲಸಕ್ಕೆ ಅತ್ಯಗತ್ಯ ಅವಶ್ಯಕತೆಯಾಗಿರುವ ಜೆರಾಕ್ಸ್ ಮಿಷಿನ್ ನನ್ನು ತೆಗೆದುಕೊಳ್ಳಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)