Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 03.03.2021

ಧೈನಂದಿನ ಧ್ಯಾನ(Kannada) – 03.03.2021

ತೊಲೆಯು ನಿನ್ನ ಕಣ್ಣಿನಲ್ಲಿ!

"ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?." - ಮತ್ತಾಯ 7:3

ಅಪಾರ್ಟ್ ಮೆಂಟ್ ನಲ್ಲಿ ಎರಡನೇ ಮಹಡಿಯಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಒಂದು ಸಂಜೆ, ಗಂಡ- ಹೆಂಡತಿ ಇಬ್ಬರೂ ದೊಡ್ಡ ಗಾಜಿನ ಕಿಟಕಿಯ ಬಳಿಯಿರುವ ಕುರ್ಚಿಯಲ್ಲಿ ಕುಳಿತು, ಟೀ ಕುಡಿಯುತ್ತಿದ್ದರು. ಆಗ ಎದುರು ಮನೆಯವರು ಒಣಹಾಕಿದ್ದ ಬಟ್ಟೆಗಳೆಲ್ಲ ಕಿಟಕಿಯ ಮೂಲಕ ಇವರ ಕಣ್ಣಿಗೆ  ಬಿದ್ದವು. ಎಲ್ಲಾ ಬಟ್ಟೆಗಳು ತುಂಬಾ, ಕೊಳಕಾಗಿ ಕಾಣುತ್ತಿದ್ದವು. ಪತಿ ತನ್ನ ಹೆಂಡತಿಗೆ, “ನಮ್ಮ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿರುವ ಜನರಿಗೆ  ಸ್ವಚ್ಛತೆ ಎಂದರೇನೆ ಏನೆಂದು ಗೊತ್ತಿಲ್ಲ. ಅವರು ಬಟ್ಟೆಗಳನ್ನು ಎಷ್ಟೊಂದು ಕೊಳಕಾಗಿ ಇಟ್ಟುಕೊಂಡಿದ್ದಾರೆ ” ಎಂದರು. ತಕ್ಷಣ ಹೆಂಡತಿ, “ಛೇ ... ಛೇ .... ನಮ್ಮ ಮನೆಯಂತೆ  ಯಾವ ಮನೆಯಲ್ಲಿಯೂ clean ನ್ನು  ನೋಡಲಾಗುವುದಿಲ್ಲ. ಇವರೇನು  ಜನರೋ? ” ಎಂದು ಹೇಳಿದಳು. ಸ್ವಲ್ಪ ಸಮಯದ ನಂತರ ಅವರ ಕೆಲಸದಾಕೆ ಬಂದು ಕಿಟಕಿಯ ಗಾಜನ್ನು ಚೆನ್ನಾಗಿ ಒರೆಸಿಕೊಂಡು ಹೊರಟುಹೋದಳು. ಗಂಡ-ಹೆಂಡತಿಗೆ ದೊಡ್ಡ ಅವಮಾನವಾಗಿ ಬಿಟ್ಟಿತು. ಕಾರಣ ಇವರ ದೊಡ್ಡ ಗಾಜಿನಲ್ಲೇ ಕೊಳಕು ಇತ್ತು. ಬಟ್ಟೆಗಳು ಸ್ವಚ್ಛವಾಗಿಯೇ ಇದ್ದವು.

ಪರಿಶುದ್ಧ ಗ್ರಂಥದಲ್ಲಿ ಮತ್ತಾಯ  7 ನೇ ಅಧ್ಯಾಯದ ಮೊದಲ 5 ವಾಕ್ಯಗಳನ್ನು ಓದಿ ನೋಡಿರಿ. ನಮ್ಮ ಕಣ್ಣಿನಲ್ಲಿರುವ ತೊಲೆಯನ್ನು ನೋಡುವಂತೆ ಯೇಸು ನಮಗೆ ಬೋಧಿಸುತ್ತಿದ್ದಾರೆ. ಯಾವಾಗಲೂ ನಮ್ಮ ಪಕ್ಕದಲ್ಲಿರುವ ದೊಡ್ಡ ತಪ್ಪನ್ನು ಗ್ರಹಿಸದೆ, ಹೇಗಾದರೂ ಇತರರನ್ನು ದೂಷಿಸಬೇಕು ಎಂದು ಯಾವಾಗಲು ಭಾವಿಸುವುದು ಮಾನವ ಸ್ವಭಾವ. ಆದರೆ ಇದು ಪರಿಶುದ್ಧ ಗ್ರಂಥಕ್ಕೆ ಅನುಗುಣವಾಗಿಲ್ಲ. ನಮ್ಮ ಬಳಿ ತೊಲೆಯ ಹಾಗೆ ದೊಡ್ಡ ಕೊರತೆ ಇರುವಾಗ ಅದನ್ನು ತೆಗೆಯದೆ, ಮತ್ತೊಬ್ಬರ ಕಣ್ಣಿನಲ್ಲಿರುವ ಚಿಕ್ಕ    ರವೆಯನ್ನು ಎತ್ತಿ ಹಾಕಲು ಸಮಯ ನೋಡಬಾರದು.  ಯೇಸುಕ್ರಿಸ್ತನ ಬೋಧನೆಗಳು ಕಾಲಕ್ಕೂ ಅಳಿಯದಿರುವವುಗಳಾಗಿವೆ. ನಮ್ಮ ಜೀವನಕ್ಕೆ ಬಹಳ ಪ್ರಯೋಜನಕರವಾದದ್ದಾಗಿದೆ.  ನಮ್ಮ ಕೈಯ ಒಂದು ತೋರು ಬೆರಳಿನಿಂದ ಇತರರನ್ನು ತಪ್ಪಿತಸ್ಥರೆಂದು ನಿರ್ಣಯಿಸಿದಾಗ ಮೂರು ಬೆರಳುಗಳು ನಮ್ಮ ಕಡೆ ಇರುತ್ತವೆ ಎಂಬುದನ್ನು ನಾವು ಮರೆಯಬಾರದು.

ಇದನ್ನು ಓದುತ್ತಿರುವ ಸ್ನೇಹಿತರೇ! ಯೇಸುಕ್ರಿಸ್ತನಂತೆ ಜೀವಿಸಲು ಕರೆಯಲ್ಪಟ್ಟಿರುವ ನಾವು ಇತರರನ್ನು ದೂಷಿಸಬಾರದು! ಪರಿಶುದ್ಧ ಗ್ರಂಥವು ಹೇಳುವ ಈ ಪ್ರಾಯೋಗಿಕ ಅಭ್ಯಾಸಕ್ಕೆ ನಾವು ಬದ್ಧರಾಗೋಣ. ನಾವು ಮೊದಲು ನಮ್ಮಲ್ಲಿರುವ ದೊಡ್ಡ ದೊಡ್ಡ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸೋಣ. ಮತ್ತೊಬ್ಬರ ಬಳಿ ಇರುವ ಸಣ್ಣ ತಪ್ಪುಗಳು ಬದಲಾಗಲಿ ಎಂದು ಪ್ರಾರ್ಥಿಸೋಣ. ಹೀಗೆ, ನಮ್ಮನ್ನು ಅನೇಕರ ಮುಂದೆ ಪ್ರಾಯೋಗಿಕ ಕ್ರೈಸ್ತರಂತೆ, ಅಂದರೆ ಪ್ರಾಯೋಗಿಕ ಜೀವನದಲ್ಲಿ ಕ್ರಿಸ್ತನನ್ನು ಹೊಂದಿಕೊಂಡಿರುವವರಾಗಿ ತೋರಿಸೋಣ. ನಮ್ಮ ಜೀವನದ ಮೂಲಕ ದೇವರು ಮಹಿಮೆ ಹೊಂದುತ್ತಾರೆ.
-    ಟಿ. ಶಂಕರ್ ರಾಜ್

ಪ್ರಾರ್ಥನಾ ಅಂಶ:-
ಲೆಂಟ್ ದಿನಗಳ  ಕೂಟಗಳಲ್ಲಿ ಸಹೋ. ಡೇವಿಡ್ ಗಣೇಶನ್ ರವರನ್ನು ದೇವರು ಬಲವಾಗಿ ಉಪಯೋಗಿಸುವಂತೆ  ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)