Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.03.2021

ಧೈನಂದಿನ ಧ್ಯಾನ(Kannada) – 01.03.2021

ಕಟ್ಟಿರಿ ಕರ್ತನೇ

“ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಸಂಬಳ ಬರುವದು” - 1ಕೊರಿಂಥ 3:14

ಒಬ್ಬ ಬಿಲ್ಡಿಂಗ್ ಇಂಜಿನಿಯರ್ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರ ಓನರ್ ಈ Engineer ವಿಶ್ರಾಂತಿ ತೆಗೆದುಕೊಂಡು ಹೋಗುವುದಕ್ಕಿಂತ ಮುಂಚೆ ಒಂದು ಕಟ್ಟಡವನ್ನು ಕಟ್ಟಿ ಕೊಡುವಂತೆ ಹೇಳಿದರು. ನಾವೇ ಕೆಲಸ ಬಿಟ್ಟು ಹೋಗುತ್ತಿದ್ದೇವೆ ಎಂದು ಬಹಳ ಅಜಾಗ್ರತೆಯಾಗಿ ಹೇಗಾದರೂ ಕಟ್ಟಿಕೊಟ್ಟರೆ ಸಾಕು ಎಂದು, ಗಮನಹರಿಸದೆ ಕಟ್ಟಡದ ಸಾಮಗ್ರಿಗಳನ್ನು ತೆಗೆದು ಕೊಡುವುದರಲ್ಲೂ, ಕೆಲಸದವರನ್ನು ಸರಿಯಾಗಿ ಗಮನಿಸದೆಯೂ ಅಸಡ್ಡೆಯಾಗಿ  ಜವಾಬ್ದಾರಿಯಿಲ್ಲದೆ ಕಟ್ಟಿ ಮುಗಿಸಿದರು. ಅದನ್ನು ಕಟ್ಟಿ ಮುಗಿಸಿ ಓನರ್ ಬಳಿ ಒಪ್ಪಿಸಿದರು. ಓನರ್ ವಿಶ್ರಾಂತಿಯಲ್ಲಿ ಹೋಗುತ್ತಿರುವ ನಿಮಗೆ ನಾನು ಕೊಡುತ್ತಿರುವ ಕಾಣಿಕೆ ಇದು ಎಂದು ಹೇಳಿ ಅವರ ಬಳಿ ಕೀಯನ್ನು ಒಪ್ಪಿಸಿದರು. ಇದನ್ನು ಕೇಳಿದ ಇವರಿಗೆ ಬಾಚಿ ಬಿಸಾಡಿದ ಹಾಗಾಯಿತು. ಈ ಮನೆ ನಮಗೆ ಸಿಗುತ್ತದೆಂದು ತಿಳಿದಿದ್ದರೆ ನಾನು ಎಷ್ಟು ಸುಂದರವಾಗಿ, ಚೆನ್ನಾಗಿ, ಜಾಗ್ರತೆಯಿಂದ ಕಟ್ಟುತ್ತಿದ್ದೆನೆ! ಗುಣಮಟ್ಟವಾದ ಸಾಮಗ್ರಿಗಳನ್ನು ಉಪಯೋಗಿಸಿ, ಕೆಲಸಗಾರರನ್ನು ಚೆನ್ನಾಗಿ ಗಮನಿಸಿ ಉತ್ತಮವಾಗಿ ಮಾಡುತ್ತಿದ್ದೆನು! ಎಂದು ಚಿಂತಿಸಿದರು.

ಅದರಂತೆ ನಾವು ಈ ಲೋಕದಲ್ಲಿ, ನಮ್ಮ ಕುಟುಂಬಗಳನ್ನು ಸಂಬಂಧಗಳನ್ನು ಕಟ್ಟಿ ಕೊಳ್ಳುತ್ತಿದ್ದೇವೆ. ನಾವು ಹೇಗೆ ಕಟ್ಟುತ್ತಿದ್ದೇವೆ ಎಂಬುದರ ಬಗ್ಗೆ ಚಿಂತಿಸಿ ನೋಡಲು ಕರೆಯಲ್ಪಟ್ಟಿದ್ದೇವೆ. ನಮ್ಮ ಕಟ್ಟಡದ ಫೌಂಡೇಶನ್ ಪ್ರೀತಿಯೇ. ಕುಟುಂಬದಲ್ಲಿ ಸಂಬಂಧಗಳನ್ನು ಕಟ್ಟಬೇಕು, ಸ್ನೇಹ ಕಟ್ಟಬೇಕು, ಕೆಲಸ ಮಾಡುವ ಸ್ಥಳದಲ್ಲಿ ಜವಾಬ್ದಾರಿಗಳನ್ನು ಮತ್ತು ನಂಬಿಕೆಯನ್ನು ಕಟ್ಟಬೇಕು. ಅನೇಕ ಸಮಯಗಳಲ್ಲಿ ನಮ್ಮ ಕುಟುಂಬ ಜೀವನವನ್ನು ನಿರ್ಲಕ್ಷ್ಯವಾಗಿ ಕಟ್ಟಿಕೊಳ್ಳುತ್ತಿದ್ದೇವೆ. ಬೆಂದದ್ದನ್ನು ತಿಂದು, ಸುಮ್ಮನೆ ಬದುಕಿ, ವಿಧಿ ಬಂದರೆ ಸಾಯೋಣ ಎಂದು ಜೀವಿಸುತ್ತಿದ್ದರೆ ಕರ್ತನು ನಮ್ಮನ್ನು ನೋಡಿ ವೇದನೆ ಪಡುತ್ತಾರೆ. ಏಕೆಂದರೆ ನಾವು ಜೀವಿಸುವ ಜೀವನ ಅದು ಬೇಗನೆ ಗತಿಸಿ ಹೋಗುತ್ತದೆ. ಕ್ರಿಸ್ತನಿಗಾಗಿ ಏನು ಮಾಡಿದೆವೋ ಅದು ಮಾತ್ರವೇ ನೆಲೆಗೊಂಡಿರುತ್ತದೆ. ಆದ್ದರಿಂದ ನಾವು ಕ್ರಿಸ್ತನ ಹೆಜ್ಜೆಜಾಡನ್ನು ಹಿಂಬಾಲಿಸುವವರಾಗಿ ಜೀವಿಸಿ ತೋರಿಸೋಣ.

1 ಕೊರಿಂಥ 3:10-12 ರಲ್ಲಿ ಬರೆದಿರುವ ಸತ್ಯವೇದದ ವಾಕ್ಯಗಳ ಪ್ರಕಾರ ನಾವು ಕಟ್ಟುವ ಕಟ್ಟಡವನ್ನು ಚಿನ್ನ, ಬೆಳ್ಳಿ, ಬಹು ಬೆಲೆಯುಳ್ಳ ಕಲ್ಲು, ಮರ, ಹುಲ್ಲು, ಒಣಹುಲ್ಲು ಎಂಬಿವುಗಳಿಂದ ಕಟ್ಟಿ ಮುಗಿಸಬಹುದು. ನಾವೊಬ್ಬೊಬ್ಬರು ಕಟ್ಟುತ್ತಿರುವಂತಹ ಕೆಲಸದ ಪಾಡು ಒಂದು ದಿನ ಹೊರಬೀಳುತ್ತದೆ. ನೀವು ಹೇಗೆ ನಿಮ್ಮ ಕುಟುಂಬ ಜೀವನವನ್ನು ಕಟ್ಟಲಿದ್ದೀರ ಎಂಬುದನ್ನು ಈಗಲೇ ಇಂದೇ ತೀರ್ಮಾನಿಸಿರಿ.
-    Mrs. ಜೆಬ ಡೇವಿಡ್ ಗಣೇಶನ್

ಪ್ರಾರ್ಥನಾ ಅಂಶ:-
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ಮುನ್ನಡೆಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)