Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 28.02.2021 (Kids Special)

ಧೈನಂದಿನ ಧ್ಯಾನ(Kannada) – 28.02.2021 (Kids Special)

ನಂಬಿಗಸ್ತಿಕೆಯೆ  ಹೆಚ್ಚಳವನ್ನು ಕೊಡುತ್ತದೆ.

“...ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;” - ಮತ್ತಾಯ 25:21

ಪ್ರೀತಿಯ ಪುಟಾಣಿಗಳೇ! ನೀವು ಹಣ್ಣುಗಳೆಂದರೆ ತುಂಬಾ ಇಷ್ಟಪಡುತ್ತೀರ? ಅದು ಯಾವ ಯಾವ ಬಣ್ಣಗಳಲ್ಲಿರುತ್ತದೆ ಎಂದು ಹೇಳಿ ನೋಡೋಣ. ರೆಡ್ ಕಲರ್ ಆಪಲ್, ಯೆಲ್ಲೊ ಕಲರ್ ಮಾವು, ಆರೆಂಜ್ ಕಲರ್ ಆರೆಂಜ್, ಗ್ರೀನ್ ಕಲರ್ ದ್ರಾಕ್ಷಿಯಂತಹ ಹಣ್ಣುಗಳನ್ನು ನೀವು ಎಂದಾದರೂ ಸೇವಿಸಿದ್ದೀರಾ? Super ಆಗಿ ಇರುತ್ತದೆ ತಾನೆ!  ಹಣ್ಣುಗಳನ್ನು ನೋಡಿದರೆ ಯಾರಿಗೆ ತಾನೇ ಆಸೆ ಬರೋದಿಲ್ಲ.  ಅದರಲ್ಲೂ ತೋಟದಲ್ಲಿ  ಹಣ್ಣನ್ನು ಕಿತ್ತು ತಿಂದರೆ ಅದು ಇನ್ನೂ ವಿಶಿಷ್ಟವಾದ ರುಚಿಯಾಗಿರುತ್ತದೆ.

ಒಂದು ದಿನ ಮಾಧವನ್ ಮತ್ತು ಅವನ ಸ್ನೇಹಿತರು ಫುಟ್ಬಾಲ್ ಮೈದಾನಕ್ಕೆ ಹೋಗಿ ಆಟ ಆಡಿಬಿಟ್ಟು ನಡೆದುಕೊಂಡು ಬಂದರು. ಅವರು ಬರುವ ದಾರಿಯಲ್ಲೇ ಸುಂದರವಾದ ಮಾವಿನ ತೋಟವಿತ್ತು. ಕುಚ್ಚು ಕುಚ್ಚಾಗಿ ನೇತಾಡುತ್ತಿದ್ದ ಹಣ್ಣುಗಳನ್ನು ನೋಡಿಕೊಳ್ಳಲು ತೋಟಗಾರನು ಯಾವಾಗಲೂ ಕಾವಲಾಗಿದ್ದರು. ಎಂದಾದರೂ  ಒಂದು ದಿನ ಈ ಮಾವಿನ ಹಣ್ಣನ್ನು  ಕಿತ್ತು ತಿನ್ನಬೇಕು ಎಂದು ನೆನೆಸಿದನು ಮಾಧವನ್. ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೆಲಸಕ್ಕೆ ಹೋಗದೆ, ಮತ್ತು ಅಡುಗೆ ಮಾಡದೆ ಇದ್ದರು. ಏನು ಮಾಡುವುದೆಂದು ತಿಳಿಯದೆ ಹಸಿವಿನಿಂದ ನಡೆದು ಹೋದನು. ಆ ಮಾವಿನ ತೋಟ ಬಂದಾಗ ಹಸಿವು ಇನ್ನೂ ಹೆಚ್ಚಿತು. ಆ ದಿನ ತೋಟದಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ಅವನು ಒಳಗೆ ಹೋಗಿ ಮಾವಿನ ಹಣ್ಣುಗಳನ್ನು ಕಿತ್ತು ತಿಂದು ತಾಯಿಗೂ  ಎತ್ತಿಟ್ಟುಕೊಂಡನು. ಆಗ ಅದನ್ನು  ನೋಡಿ ತೋಟಗಾರನು ಬಂದು ಬಿಟ್ಟನು. ಲೋ ಕಳ್ಳಹುಡುಗ ಎಂದು ಹೇಳಿ ಹೊಡೆದುಬಿಟ್ಟನು. ಮಾಧವನ್ ಅಳುತ್ತಾ, ಅಯ್ಯಾ ಹಸಿದಿದ್ದರಿಂದ ಕಿತ್ತು ತಿಂದುಬಿಟ್ಟೆ ಎಂದು ಹೇಳಿ ನಂತರ ತಾಯಿಯ ಸ್ಥಿತಿಯನ್ನು ವಿವರಿಸಿದನು ನಂತರ ಆ  ತೋಟಗಾರನು ನಾನು ನಿನ್ನನ್ನು ನಂಬುತ್ತೇನೆ. ಈ ಎರಡು ಕೆಜಿ ಮಾವಿನಹಣ್ಣನ್ನು ಮಾರಿ ಬಿಟ್ಟು ಬಾ ಎಂದು Test ಮಾಡಿದರು. ಮಾಧವನ್ ಕೂಡ ಅಂಗಡಿ ಬೀದಿಗೆ ಹೋಗಿ ಅದನ್ನು ಸರಿಯಾದ ಬೆಲೆಗೆ ಮಾರಿ ಹಣವನ್ನು ತಂದು ಕೊಟ್ಟನು. ಮರುದಿನ ಬರಲು ಹೇಳಿ 10 ಕೆಜಿ ಮಾವಿನಹಣ್ಣನ್ನು ಮಾರಾಟ ಮಾಡಲು ಹೇಳಿದರು. ಅದನ್ನೂ ಮಾರಿ ಕೊಟ್ಟು ಇನ್ನೂ ನಂಬಿಗಸ್ತನಾಗಿದ್ದನು. ಮರುದಿನ ಅವರು ಒಂದು ಮೂಟೆ ಹಣ್ಣನ್ನು ಕೊಟ್ಟು ಮಾರಾಟ ಮಾಡಲು ಹೇಳಿದರು. ಅವನು ಅದನ್ನು ಮಾರಿ ಕೊಟ್ಟು ನಂಬಿಗಸ್ತ ನಾಗಿದ್ದನು. ಇದನ್ನು ನೋಡಿದ ತೋಟಗಾರನು ನನಗೆ ಮಕ್ಕಳಿಲ್ಲ ಮತ್ತು ನಾನು ನಿನ್ನನ್ನು ಮಗನಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಮತ್ತು  ನಿನಗೆ ಬೇಕಾದದ್ದನ್ನೆಲ್ಲ ನಾನೇ ಮಾಡುತ್ತೇನೆ ಎಂದು ಹೇಳಿದಾಗ, ಮಾಧವನ್ ಗೆ ಅದನ್ನು ನಂಬಲು ಸಾಧ್ಯವಾಗಲೇ ಇಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ತೀರಿಕೊಂಡಿದ್ದಾಳೆಂದು, ಮನನೊಂದ ಮಾಧವನ್, ಈ ಸಂತೋಷದ ಮಾತು ಕೇಳಿದಾಗ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಮಾಧವನ್ ನಂಬಿಗಸ್ತನಾಗಿದ್ದದರಿಂದ, ಅನೇಕ ಪ್ರಯೋಜನಗಳನ್ನು ಪಡೆದುಕೊಂಡು ಆಶೀರ್ವಾದವಾಗಿ ಜೀವಿಸಿದನು.

ಪುಟಾಣಿಗಳೇ ನೀವೂ ಸಹ, ನಿಮ್ಮ ಮಾತು ನಡತೆಯನ್ನು ಯಾರು ನೋಡದೇ ಹೋದರೂ, ಯೇಸಪ್ಪ ನನ್ನನ್ನು ನೋಡುತ್ತಲೇ ಇದ್ದಾರೆ ಎಂದು ನೆನೆಸಿ ನಂಬಿಕಸ್ತರಾಗಿದ್ದರೆ ಹೆಚ್ಚಳವು, ಆಶೀರ್ವಾದವೂ ನಿಮ್ಮನ್ನು ಹುಡುಕಿ ಬರುತ್ತದೆ. ಆಮೆನ್.
-    Y. ಅನೀಸ್ ರಾಜ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)