Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 27.02.2021

ಧೈನಂದಿನ ಧ್ಯಾನ(Kannada) – 27.02.2021

ಬಾಡಿಗೆ ಮನೆ

"...ಪೌಲನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ,..." - ಅಪೊಸ್ತಲ 28:30

ಏನು, ಮನೆಕಟ್ಟಿ ಆಯ್ತಾ? ಇನ್ನೊಂದು ಸೈಟ್ ರಿಜಿಸ್ಟರ್ ಮಾಡಿ ಆಯ್ತಾ? ಯಾವ ಕಾರು ಇಟ್ಟುಕೊಂಡಿದ್ದೀರ ಮಕ್ಕಳ ಭವಿಷ್ಯತ್ತಿಗೆ ಹಣವನ್ನು ಬ್ಯಾಂಕ್ ನಲ್ಲಿ Deposit-ಮಾಡಿ ಆಯ್ತಾ? ಮಗಳಿಗೆ ಎಷ್ಟು ಒಡವೆ ಮಾಡಿಸಿದ್ದೀರ?.... ಏನ್ರಿ ಯೋಚಿಸುತ್ತಿದ್ದೀರಾ, ಇದುವೇ ಈಗಿನ ಮನುಷ್ಯರ ಸಂಭಾಷಣೆ. ಸ್ವಂತ ಮನೆ, ಸ್ವಂತ ಭೂಮಿ, ಇಂದು ಇದರ ಬಗ್ಗೆ ಮಾತ್ರವೇ ಚಿಂತೆ ಪಡುತ್ತಿರುವವರು ಅನೇಕರು. ಇದಕ್ಕಾಗಿ ಅವರ ತೆಗೆದುಕೊಳ್ಳುವ ಪ್ರಯಾಸವೂ ತುಂಬಾ ತುಂಬಾ ಅಧಿಕ. ಸ್ವಂತ ಮನೆ ಕಟ್ಟುವುದರಲ್ಲಿ ತಪ್ಪಿಲ್ಲ. ಆದರೆ, ಕೆಲವರಿಗೆ ಮನೆ ಕಟ್ಟುವುದೇ ಜೀವನದ ಮುಖ್ಯ ಗುರಿಯಾಗಿ ಮಾರ್ಪಟ್ಟಿದೆ, ಅದಕ್ಕಾಗಿ ಸಾಲ ತೆಗೆದುಕೊಂಡು ಕಟ್ಟಿ ನೆಮ್ಮದಿಯಾದ ಜೀವನವನ್ನು ಕಳೆದುಕೊಂಡವರು ಹೇರಳವಾಗಿದ್ದಾರೆ. ಹಾಗಾದರೆ, ಮನೆ, ಕಾರು, ಒಡವೆ ಇವೆಲ್ಲಾ ಪಾಪವಾ? ಇಲ್ಲ! ಆದರೆ ಯಾವುದಕ್ಕೆ ಮುಖ್ಯತ್ವವನ್ನು ಕೊಡುತ್ತಿದ್ದೇವೆ ಎಂಬುದೇ ಪ್ರಶ್ನೆ.

ಸತ್ಯವೇದದಲ್ಲಿ ಅಪೊಸ್ತಲ 13-28 ನೇ ಅಧ್ಯಾಯದವರೆಗೂ ಅಪೊಸ್ತಲನಾದ ಪೌಲನ ಬಗ್ಗೆ ಓದುತ್ತೇವೆ. ಅವರ ಶಿಷ್ಯರೆಲ್ಲರಿಗಿಂತ ಅಧಿಕವಾಗಿ ಪಾಡುಪಟ್ಟವರು, ಉಪದ್ರವ ಪಟ್ಟವರು, ಪ್ರಯಾಸ ಪಟ್ಟವರು. ದೇವರ ರಾಜ್ಯಕ್ಕಾಗಿ ಬಿಡುವಿಲ್ಲದೆ ಅಲೆದು ತಿರುಗಾಡಿದವರು. ಅವರು ಪ್ರಯಾಣ ಮಾಡಿದ್ದು ಬಹಳ ದೂರ. ಅವರು ನೋಡಿದ ಜನರೂ ಹೇರಳ. ಅವರಿಗೆ ಸಹಾಯ ಮಾಡಿದವರು ಅನೇಕರು. ಆದರೆ ಮೇಲ್ಕಂಡ ವಾಕ್ಯವನ್ನು ನೋಡುವಾಗ ಪೌಲನು ಒಂದು ಸಾಧಾರಣವಾದ ಜೀವನವನ್ನು ಜೀವಿಸಿದರು ಎಂಬುದು ನಮಗೆ ತಿಳಿಯುತ್ತಿದೆ. ತನಗಾಗಿ ಒಂದು ಸ್ವಂತ ಮನೆಯನ್ನು ಕೂಡ ತೆಗೆದುಕೊಳ್ಳದೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಸೇವೆ ಮಾಡುತ್ತಿದ್ದರು. ಅವರು ನೆನೆಸಿದ್ದರೆ, ಎಷ್ಟೋ ಸೌಕರ್ಯಗಳನ್ನು ತನಗೆ ಸ್ವಂತ ಮಾಡಿಕೊಂಡಿರಬಹುದು. ಆದರೆ,ಅವರು ಸಾಧಾರಣವಾದ ಜೀವನವನ್ನು ಜೀವಿಸಿ ನಮಗೆ ಮೂಲ ಮಾದರಿಯನ್ನು ಇಟ್ಟುಬಿಟ್ಟು ಹೋಗಿದ್ದಾರೆ.

ಸ್ನೇಹಿತರೇ! ಪೌಲನು ನೋಡದ ಹಣವಾ? ಅವರಿಗಿಲ್ಲದ ಹಿನ್ನೆಲೆಯಾ? ಈಗಿರುವ ಸೇವಕರೆಲ್ಲರಿಗಿಂತ ಪೌಲನು ಅಂದು ಬಹಳ ಸೌಕರ್ಯವಾಗಿ ಜೀವಿಸಿರಬಹುದಿತ್ತು. ಆದರೆ ಅವರಿಗೆ ದೇವರ ರಾಜ್ಯದ ಬಗ್ಗೆ ಮಾತ್ರವೇ ಚಿಂತೆ. ಇಂದು ನಾವು ಮನೆ, ಆಸ್ತಿ, ಹಣ, ಒಡವೆ ಎಂದು ಇವುಗಳಿಗಾಗಿ ವ್ಯರ್ಥವಾಗಿ ಚಿಂತಿಸುವುದನ್ನು ಬಿಟ್ಟು ಬಿಟ್ಟು ಪೌಲನ ಹಾಗೆ ಒಂದು ಸಾಧಾರಣವಾದ ಜೀವನವನ್ನು ಜೀವಿಸೋಣ.ಅಪೊಸ್ತಲರ ಪುಸ್ತಕದ ಕಥಾನಾಯಕನಾದ ಪೌಲನು ಒಂದು ಬಾಡಿಗೆ ಮನೆಯಲ್ಲಿದ್ದರು. ಎಂಥಾ! ಸುಂದರವಾದ ಒಂದು ಪಾಠ ನಮಗೆ!
-    T. ಶಂಕರ್ ರಾಜನ್

ಪ್ರಾರ್ಥನಾ ಅಂಶ:-
ಒಂದೊಂದು ರಾಜ್ಯದಲ್ಲಿಯೂ 500 ಸಹ ಮಿಷನರಿಗಳನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)