Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 26.02.2021

ಧೈನಂದಿನ ಧ್ಯಾನ(Kannada) – 26.02.2021

ದೇವರ ಚಿತ್ತ

"...ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ....” - ಅಪೊಸ್ತಲ 5:38,39

ಮಹಿಮಾ ಎಂಬ ಒಂದು ಯೌವನ ಹುಡುಗಿಗೆ ವಿವಾಹದ ವಯಸ್ಸು ಮೀರಿ ಹೋದರೂ ಅವಳ ಮನೆಯಲ್ಲಿ ಪೋಷಕರು ಅವಳಿಗೆ ಸರಿಯಾದ ವರನು ಸಿಗುವಂತೆ ಬಂಧುಮಿತ್ರರ ಬಳಿ, ಪರಿಚಯವಿರುವವರ ಬಳಿ ಹೇಳಿಟ್ಟಿದ್ದರು. ಮಹಿಮಾ ಯೇಸುವನ್ನು ಅಂಗೀಕರಿಸಿದವಳು ಆದ್ದರಿಂದ ಅವಳು ಅದಕ್ಕಾಗಿ ಪ್ರಾರ್ಥಿಸಲು ಪ್ರಾರಂಭಿಸಿದಳು. ಅನೇಕ ವರರು  ಕೈ ಕೂಡಿ ಬರುವಂತೆ ಇರುತ್ತಿತ್ತು. ಆದರೆ ಕೊನೆಯಲ್ಲಿ ಯಾವುದೋ ಕಾರಣಗಳಿಂದ ತಡೆಯಾಗಿ ಬಿಡುತ್ತಿತ್ತು. ಹೀಗೆಯೇ ನಡೆಯುತ್ತಿರುವುದನ್ನು ಕಂಡ ಮಹಿಮಾ ಸ್ವಲ್ಪ ಬಳಲಿ ಹೋದಳು. ಒಂದು ದಿನ ಇದರ ಬಗ್ಗೆ ಅವಳು ಒಂದು ಆತ್ಮೀಕ ಸಹೋದರಿಯ ಬಳಿ ಹಂಚಿಕೊಂಡಳು. ಅದಕ್ಕೆ ಆ ಸಹೋದರಿ ಕೊಟ್ಟ ಆಲೋಚನೆ ಮಹಿಮಾಳನ್ನು ಉತ್ಸಾಹಪಡಿಸಿತು.  "ನನ್ನ ಆಸೆಯೋ, ನನ್ನ ಹೆತ್ತವರ ಆಸೆಯೋ ಅಲ್ಲ ನಿಮ್ಮ ಆಸೆಯೇ ನನ್ನ ವಿವಾಹ ಕಾರ್ಯದಲ್ಲಿ ನೆರವೇರಿಸಿ" ಎಂದು ಪ್ರಾರ್ಥಿಸಲು ಹೇಳಿದರಂತೆ. ಸತತವಾಗಿ ಮಹಿಮಾ ಅದನ್ನು ಮಾಡಲು ಪ್ರಾರಂಭಿಸಿದಳು. ಆದರೂ, ಕೆಲವು ವರರು ಬರುತ್ತಾ, ಹೋಗುತ್ತಲೇ ಇದ್ದರು. ಆದರೆ ಕೆಲವು ದಿನಗಳೊಳಗೆ ಒಂದು ತಕ್ಕ ಜೊತೆಯನ್ನು ಕರ್ತನು ಕರೆತಂದು ಕೊರತೆಯಿಲ್ಲದೆ ಒಳ್ಳೆಯ ರೀತಿಯಲ್ಲಿ ವಿವಾಹ ನಡೆಯಲು ಸಹಾಯ ಮಾಡಿದರು. ಅದು ಮಹಿಮಾ ಗೆ ಬಹಳ ಸಂತೋಷವನ್ನುಂಟುಮಾಡಿತು.

ಹೌದು, ನಮ್ಮ ಜೀವನದಲ್ಲಿಯೂ ಹಲವು ವಿಧವಾದ ಆಶೀರ್ವಾದಗಳನ್ನು ತಿಳಿದುಕೊಳ್ಳುವುದಕ್ಕೆ ತಿರ್ಮಾನಗಳನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿಗಳಲ್ಲಿ ನಾವು ತಳ್ಳಲ್ಪಡುವಾಗ ಇದಾ? ಅದಾ? ಎಂಬ ಗೊಂದಲ ಉಂಟಾಗುತ್ತದೆ. ಕೆಲವು ಸಮಯದಲ್ಲಿ ಪರಿಸ್ಥಿತಿಗಳು ವಿರುದ್ಧವಾಗಿ ತೋಚುವಾಗ ಬಳಲಿ ಹೋಗುತ್ತೇವೆ. ಯಾಕೆ ನಾವು ಕೂಡ ಮಹಿಮಾಳ ಹಾಗೆ ಪ್ರಾರ್ಥಿಸಬಾರದು? ಎಲ್ಲಾ ಸ್ಥಿತಿಯಲ್ಲಿಯೂ ಒಳ್ಳೆಯದಾದರೂ, ಕೆಟ್ಟದ್ದಾದರೂ ನಾವು ದೇವರ ಚಿತ್ತದ ಪ್ರಕಾರ ನಮ್ಮ ಜೀವನದಲ್ಲಿ ನಡೆಯುವುದೇ ಹೆಮ್ಮೆ. ಇನ್ನೂ ಕೂಡ ಯಾವುದೋ ಒಂದು ವಿಷಯದಲ್ಲಿ, ಮೇಲೆ ಹೇಳಿರುವಂತಹ ವಾಕ್ಯವನ್ನು ಮನದಲ್ಲಿಟ್ಟುಕೊಂಡು ಅವರ ಬಯಕೆಗಾಗಿಯೂ, ಚಿತ್ತಕ್ಕಾಗಿಯೂ ಕಾದಿರಿ. ಖಂಡಿತವಾಗಿ ಮನುಷ್ಯರಿಂದ ಅಥವಾ ಲೋಕದಿಂದ ಉಂಟಾದದ್ದಾಗಿದ್ದರೂ ಅದು ಅಳಿದುಹೋಗುತ್ತದೆ. ದೇವರಿಂದ ಉಂಟಾದದ್ದಾಗಿದ್ದರೆ ಯಾರಿಂದಲೂ ಏನೂ ಮಾಡಲಾಗುವುದಿಲ್ಲ. ಎಲ್ಲಾ ಸ್ಥಿತಿಯಲ್ಲಿಯೂ ಕರ್ತನಿಗಾಗಿ ಕಾದಿರಿ, ಅವರೇ ಕಾರ್ಯವನ್ನು ನೆರವೇರಿಸುತ್ತಾರೆ. ಯೋಸೇಫನ ಜೀವನದಲ್ಲಿ ಸಂಭವಿಸಿದ ಒಂದೊಂದು ಕ್ಷಣಗಳು ವಿರುದ್ಧವಾಗಿದ್ದವು. ಆದರೂ, ಯೋಸೇಫನು ದೇವರನ್ನು ಒರಗಿಕೊಂಡು ಅವರಿಗೆ ಭಯಪಟ್ಟದ್ದರಿಂದ ಆ ಕ್ಷಣಗಳು ಆತನನ್ನು ದೇವರ ಚಿತ್ತಕ್ಕೆ ನೇರವಾಗಿ ನಡೆಸಿಕೊಂಡು ಹೋಯಿತು. ಅದರಂತೆಯೇ ಕರ್ತನನ್ನು ಮಾತ್ರವೇ ಒರಗಿಕೊಂಡಿರಿ. ಅವರೇ ನಿಮ್ಮನ್ನು ನಡೆಸುತ್ತಾರೆ.
-    ಜೆಪಿನ್

ಪ್ರಾರ್ಥನಾ ಅಂಶ:-
Healing service ನಲ್ಲಿ ಪಾಲ್ಗೊಳ್ಳುವವರು ಶಾರೀರಿಕವಾಗಿಯೂ, ಆತ್ಮೀಕವಾಗಿಯೂ ಬಲಗೊಳ್ಳುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)