Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.02.2021

ಧೈನಂದಿನ ಧ್ಯಾನ(Kannada) – 25.02.2021

ಕೆಟ್ಟದರಲ್ಲಿಯೂ ಒಳ್ಳೇದು

"…ನೀನೇನೂ ಕೇಡು ಮಾಡಿಕೊಳ್ಳಬೇಡ;....."

ಹೇಲನ್ ತನ್ನ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ದಿಢೀರೆಂದು ಒಂದು ಚಿಕ್ಕ ಹುಡುಗಿ ಅಡ್ಡ ಓಡಿಬರಲು, ಗಾಡಿ ಬ್ಯಾಲೆನ್ಸ್ ತಪ್ಪಿ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೇಲನ್ ಕೆಳಗೆ ಬಿದ್ದಳು. ಕಣ್ಣು ತೆರೆದು ನೋಡಿದಾಗ ಬಲವಾದ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸೇರಿಸಲ್ಪಟ್ಟಿರುವುದನ್ನು ಗ್ರಹಿಸಿದಳು. 2  ವಾರದ ನಂತರ ಹೇಲನ್ ನನ್ನು ಮನೆಗೆ ಕರೆದುಕೊಂಡು ಹೋದರು. ಅಂದು ಅವಳ ಮನೆಯ ಬಾಗಿಲಲ್ಲಿ ಒಂದು ಬೆಲೆಯುಳ್ಳ ಕಾರೊಂದು ಬಂದು ನಿಂತಿತು. ಅದರಿಂದ ಇಳಿದವರು ಹೇಲನ್ ನನ್ನು ನೋಡಿ, ನಿನ್ನ ವಿಪತ್ತಿಗೆ ನನ್ನ ಮಗಳೇ ಕಾರಣ ಎಂದು ಹೇಳಿ ಕ್ಷಮಾಪಣೆ ಕೇಳಿ, ನಾನು ಏನಾದರೂ ಸಹಾಯ ಮಾಡಬೇಕಾ? ಎಂದು ಕೇಳಿದರು. ಹೇಲನ್ ಅವರನ್ನು ನಗುಮುಖದೊಂದಿಗೆ ನೋಡಿ, "ಯಾವ ಸಹಾಯವೂ ಬೇಡ. ಈ ವಿಪತ್ತಿನಲ್ಲಿ ಸತ್ತು ಹೋಗಿದ್ದರೂ ಕೂಡ ಮೋಕ್ಷಕ್ಕೆ ಹೋಗುತ್ತಿದ್ದೆನು" ಎಂದು ಸ್ವಲ್ಪವೂ ಯೋಚಿಸದೆ ಹೇಳಿದಳು. ಆ ಮನುಷ್ಯನು ಯೋಚಿಸಿದ ಹಾಗೆಯೇ,  "ನಾನೊಬ್ಬ ಹಣಮಂತ, ಮರಣವನ್ನು ನೆನೆಸಿದರೇನೆ ಬಹಳ ಭಯಪಡುತ್ತೇನೆ, ನಾನು ಮೋಕ್ಷಕ್ಕೆ ಹೋಗುವುದಕ್ಕಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಸಿದ್ಧ. ನೀನು ಇದರ ಬಗ್ಗೆ ನನಗೆ ಸ್ವಲ್ಪ ಹೇಳು" ಎಂದರು. ಹೇಲನ್ ಸ್ಪಷ್ಟವಾಗಿ ಶುಭ ಸಂದೇಶವನ್ನು ತಿಳಿಸಿದಳು. ಸಹಾಯ ಮಾಡಲು ಬಂದವರು ಸಹಾಯ ಪಡೆದುಕೊಂಡು ಹೋದರು.

ಪೌಲ, ಸೀಲಾ ಸೆರೆಮನೆಯಲ್ಲಿ ಕಟ್ಟುಗಳು, ಬೇಡಿಗಳ ಮಧ್ಯದಲ್ಲಿಯೂ ಮಧ್ಯರಾತ್ರಿಯಲ್ಲಿ ದೇವರನ್ನು ಸ್ತುತಿಸಿ ಹಾಡಿದಾಗ ಅವರ ಬೇಡಿಗಳು ಕಳಚಿಕೊಂಡವು. ಸೆರೆಮನೆಯ ಕಾವಲುಗಾರನು ಪೌಲ, ಸೀಲಾ ಓಡಿಹೋದರೆಂದು ನೆನೆಸಿ, ತನ್ನನ್ನು ತಾನೇ ಕೊಂದು ಕೊಳ್ಳಲು ನೋಡಿದನು. ಆಗ ಪೌಲನು ಸೆರೆಮನೆಯ ಕಾವಲುಗಾರನನ್ನು ತಡೆದು ಅವನನ್ನು ಉತ್ಸಾಹ ಪಡಿಸಿದರು. ಪೌಲನು ಈ ರೀತಿ ಮಾಡಿದ್ದರಿಂದ ಆ ಸೆರೆಮನೆ ಕಾವಲುಗಾರನ ಕುಟುಂಬವೇ ರಕ್ಷಣೆ ಹೊಂದಿತು. ಪೌಲ ಸೀಲರು ಸೆರೆಮನೆಯ ಈ ಅನುಭವವನ್ನು ಸಂತೋಷವಾಗಿ ನೆನೆಸಿರುವುದಿಲ್ಲ. ಇದು ಅವರ ಜೀವನದಲ್ಲಿ ನಡೆದ ಕೆಟ್ಟ ಕಾರ್ಯವೇ. ಆದರೆ ಆ  ವೇದನೆಯ ಸಮಯದಲ್ಲಿಯೂ ಒಂದು ಒಳ್ಳೆಯ ಕಾರ್ಯ ನಡೆಯಿತು.

ಹೌದು, ಪ್ರಿಯರೇ! ನಿಮ್ಮ ಜೀವನದಲ್ಲಿ ಅಡ್ಡವಾಗಿರುವ ಸಮಸ್ಯೆಗಳನ್ನು ನೋಡಿ ಸೋತು ಹೋಗಬೇಡಿರಿ. ಅದರಲ್ಲಿಯೂ ಒಂದು ಒಳ್ಳೆಯದು ಇರುತ್ತದೆ. ಹೇಲನ್ ನ ಹಾಗೆ, ಪೌಲ-ಸೀಲರ ಹಾಗೆ ನೀವು ನಿಮ್ಮ ಕಷ್ಟದ ಮಧ್ಯದಲ್ಲಿಯೂ ಯಾರನ್ನಾದರೂ ದೇವರಿಗಾಗಿ ಸಿದ್ದ ಮಾಡಲು ಸಾಧ್ಯ.
-    Mrs.ಮನೀಷಾ ಪೌಲ್ ರಾಜ್ 

ಪ್ರಾರ್ಥನಾ ಅಂಶ:-
Peace centre ಪ್ರಾರಂಭಿಸಲು ಕೆಲಸಗಳು ತ್ವರಿತವಾಗಿ ನಡೆಯುತ್ತಲಿದೆ. ಅಗತ್ಯವುಳ್ಳ ವ್ಯಕ್ತಿಗಳು ಇಲ್ಲಿಗೆ ಬಂದು ಬಿಡುಗಡೆಹೊಂದಿಕೊಂಡು ಹೋಗುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)