Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 22.02.2021

ಧೈನಂದಿನ ಧ್ಯಾನ(Kannada) – 22.02.2021

ಮೊಣಕಾಲಿನ ಬಲ

"ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆಮಾಡಿ,..." - ಅಪೊಸ್ತಲ 9:40

ಬೌದ್ಧ  ಧರ್ಮಕ್ಕೆ ಸೇರಿದ 19 ವರ್ಷ ತುಂಬಿದ ಯೌವನಸ್ಥನೊಬ್ಬರು ಕ್ಷಯರೋಗದಿಂದ ಬಹಳ ಬಾಧಿಸಲ್ಪಟ್ಟಿದ್ದರು. ವೈದ್ಯರಿಂದ ಕೈಬಿಡಲ್ಪಟ್ಟ ಸ್ಥಿತಿಯಲ್ಲಿ ಒಬ್ಬಂಟಿಯಾಗಿಯೂ, ನಂಬಿಕೆ ಕಳೆದುಕೊಂಡವರಾಗಿಯು, ಮನಸ್ಸು ವಿಚಲಿತವಾದ ಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಹಳ ಮೋಸವಾಗುತ್ತಲೇ ಇತ್ತು. ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಶಾಲೆಯಲ್ಲಿ ಓದುತ್ತಿದ್ದ ಒಂದು ಚಿಕ್ಕ ಹುಡುಗಿ ಆ ಯೌವನಸ್ಥನ ಬಳಿಗೆ ಬಂದು, ಯೇಸುಕ್ರಿಸ್ತನ ಬಗ್ಗೆ ಹೇಳಿ ಒಂದು ಹೊಸ ಒಡಂಬಡಿಕೆಯನ್ನು ಕೊಟ್ಟಳು. ಆದರೆ ಆ ಯೌವನಸ್ಥನು ಅದನ್ನು ಅಂಗೀಕರಿಸಲಿಲ್ಲ. ಬದಲಾಗಿ, ಇದು ಅವನಿಗೆ ಬುದ್ಧಿ ಹೀನವಾಗಿ ತೋಚಿತು. ಆ ಚಿಕ್ಕ ಹುಡುಗಿ ದಿನವೂ ಮತ್ತೆ ಮತ್ತೆ ಬಂದು ಯೇಸುವಿನ ಪ್ರೀತಿಯನ್ನು ಹೇಳುತ್ತಲೇ ಇದ್ದಳು. ಯೌವನಸ್ಥನೋ ಹೊಸ ಒಡಂಬಡಿಕೆಯನ್ನು ಬಿಸಾಡಿ ಅದನ್ನು ಸುಟ್ಟು ಹಾಕಿ ಆ ಹುಡುಗಿಯನ್ನು ಬೈದು ಕಳುಹಿಸಿಬಿಟ್ಟನು. ಆ ಚಿಕ್ಕ ಹುಡುಗಿಯ ಮನಸ್ಸು ಸ್ವಲ್ಪವೂ ಬೇಸರಗೊಳ್ಳದೆ, ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದೆ ಆ ಯೌವನಸ್ಥನಿಗಾಗಿ ಮೊಣಕಾಲೂರಿ ಪ್ರಾರ್ಥಿಸಿದಳು. ಹಾಗೆ, ಅವಳು ಮೊಣಕಾಲೂರಿ ಪ್ರಾರ್ಥಿಸಿದಾಗ, ಅವರ ಕಣ್ಣುಗಳಿಂದ ಕಣ್ಣೀರಿನ ಹನಿಗಳು ಹರಿದುಬಂದವು. ಈ ಪರಿಸ್ಥಿತಿಯಲ್ಲಿಯೇ ಆ ಯೌವನಸ್ಥನು ಯೇಸುವಿನ ಪ್ರೀತಿಯನ್ನು ಗ್ರಹಿಸಿದರು. ಪ್ರಾರ್ಥಿಸಿದರು, ಅದ್ಭುತವಾಗಿ ಸ್ವಸ್ಥತೆ ಹೊಂದಿಕೊಂಡು ಇಂದಿಗೂ ಸೇವೆ ಮಾಡುತ್ತಲೇ ಇದ್ದಾರೆ. ಅವರೇ ದಕ್ಷಿಣ ಕೊರಿಯಾದಲ್ಲಿ ದೇವರಿಂದ ಬಲವಾಗಿ ಉಪಯೋಗಿಸಲ್ಪಡುತ್ತಿರುವ ಸೇವಕರು ಪಾಲ್ ಯಾಂಗಿ ಚೋ.

ಸತ್ಯವೇದದಲ್ಲಿ ಯೊಪ್ಪ ಪಟ್ಟಣದಲ್ಲಿ  ದೊರ್ಕ ಎಂಬ ಒಬ್ಬ ಶಿಷ್ಯೆ ಇದ್ದಳು.ಆಕೆಯು ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು. ಅವಳು ರೋಗದಲ್ಲಿ ಬಿದ್ದು ಸತ್ತಳು. ಆಗ ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಅವಳಿಗಾಗಿ ಮೊಣಕಾಲೂರಿ ಪ್ರಾರ್ಥಿಸಿದರು. ದೇವರು ಪ್ರಾರ್ಥನೆಯನ್ನು ಕೇಳಿ ಅವಳನ್ನು ಜೀವಂತವಾಗಿ ಎಬ್ಬಿಸಿದರು.

ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಮೊಣಕಾಲಿನ ಪ್ರಾರ್ಥನೆಯು ಬಹಳ ಬೆಲೆಯುಳ್ಳದ್ದು. ಮೊಣಕಾಲಿನ ಪ್ರಾರ್ಥನೆಯಲ್ಲಿ ಬಹಳ ಬಲವುಂಟು. ಸಾಯುತ್ತಿದ್ದ ಪಾಲ್ ಯಾಂಗಿ ಚೋ ಜೀವವನ್ನು ಒಂದು ಚಿಕ್ಕ ಹುಡುಗಿಯ ಮೊಣಕಾಲಿನ ಪ್ರಾರ್ಥನೆ ಬದುಕುವಂತೆ ಮಾಡಿತು. ಹೌದು, ಹಣದಿಂದಲೂ, ವೈದ್ಯರಿಂದಲೂ ಮಾಡಲಾಗದೆ ಇರುವುದನ್ನು ಮೊಣಕಾಲಿನ ಪ್ರಾರ್ಥನೆಯಿಂದ ಮಾಡಲು ಸಾಧ್ಯ. ಇಂದು, ನಿಮ್ಮ ಸತ್ತು ಹೋದ ಪರಿಸ್ಥಿತಿಗಳ ನಿಮಿತ್ತವಾಗಿ ಕಣ್ಣೀರು ಸುರಿಸುತ್ತಿದ್ದೀರ? ನಿಮ್ಮ ನಂಬಿಕೆ ಸತ್ತುಹೋಯಿತಾ? ಇಂದೇ ಮೊಣಕಾಲೂರಿರಿ. ಪ್ರಯತ್ನ ಮಾಡಿ ಸೋತು ಹೋಗಿದ್ದನ್ನು ಮೊಣಕಾಲಿನ ಪ್ರಾರ್ಥನೆಯ ಮೂಲಕ ಜಯವನ್ನು ಹೊಂದಿಕೊಳ್ಳೋಣ. ನಿಮಗೆ ಹತ್ತಿರವಾದವರನ್ನು ಆಸ್ಪತ್ರೆಯಲ್ಲಿ ಇಟ್ಟು ಏನು ನಡೆಯುತ್ತದೋ ಎಂದು ಚಿಂತಿಸುತ್ತಿದ್ದೀರಾ, ಮೊಣಕಾಲಿನಲ್ಲಿ ದೇವರೊಂದಿಗೆ ಹೋರಾಡಿರಿ. ಕಣ್ಣೀರನ್ನು ಆಯುಧವಾಗಿ ಮಾಡಿಕೊಳ್ಳಿರಿ. ಅದ್ಭುತ ನಡೆಯುವುದು ಖಂಡಿತ!
-    Mrs. ಶಕ್ತಿ ಶಂಕರ್ ರಾಜನ್

ಪ್ರಾರ್ಥನಾ ಅಂಶ:-
ಲೆಂತು ದಿನಗಳ ಕೂಟಗಳಲ್ಲಿ ಸಹೋ. ಡೇವಿಡ್ ಗಣೇಶನ್ ರವರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)