Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.02.2021 (Kids Special)

ಧೈನಂದಿನ ಧ್ಯಾನ(Kannada) – 21.02.2021 (Kids Special)

ಕ್ಷಮಿಸಿ ಮರೆತು ಬಿಡು

“ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು” - ಮತ್ತಾಯ 6:14

ನಿಶಾ... ನಿಶಾ ಎಂದು ಶಬ್ಧ ಮಾಡುತ್ತಲೇ ವೇಗವಾಗಿ ಓಡಿಬಂದಳು, ಅವಳ ಸ್ನೇಹಿತೆ ತ್ರಿಷಾ. ಇವರು ಇಬ್ಬರು ಬಹಳ ಹತ್ತಿರದ ಸ್ನೇಹಿತರು 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು. ಎಲ್ಲಿ ಹೋದರೂ ಒಂದಾಗಿ ಹೋಗುತ್ತಾರೆ ನಿಶಾಗೆ ಹೂವುಗಳೆಂದರೆ ಅಷ್ಟೊಂದು ಇಷ್ಟ. ಯಾವುದಾದರೂ ಹೂವುಗಳು ಇರುವ ಸ್ಟಿಕರ್ ಮತ್ತು ಕ್ಯಾಲೆಂಡರ್ ಗಳು ಇದ್ದರೆ ಕೂಡಲೇ ಅದನ್ನು ತೆಗೆದಿಟ್ಟು ಕೊಳ್ಳುತ್ತಾಳೆ.

ಒಂದು ದಿನ ಅವಳು ಓದುತ್ತಿದ್ದ ತರಗತಿಯಲ್ಲಿ ಒಂದು ಹಳೆಯ ಕ್ಯಾಲೆಂಡರ್ ಒಂದು ಬಿದ್ದಿತ್ತು. ಅದನ್ನು ಎತ್ತಿಕೊಂಡು ನೋಡಿದರೆ ಅದರಲ್ಲಿ 12 ತಿಂಗಳಲ್ಲಿಯೂ ಹೂವುಗಳ ಚಿತ್ರ ಕಾಣಿಸಿತು. ಇದನ್ನು ಕಂಡ ನಿಶಾಗೆ ಬಹಳ ಸಂತೋಷ . ಯಾರ ಬಳಿಯೂ ಕೇಳದೆ ಅದನ್ನು ಎತ್ತಿಟ್ಟುಕೊಂಡಳು. ಮರುದಿನ ಬೆಳಿಗ್ಗೆ ಅವರ ತರಗತಿಯ ಟೀಚರ್ ಆ ಕ್ಯಾಲೆಂಡರ್ ನಲ್ಲಿ ಮುಖ್ಯವಾದ ಏನನ್ನೋ ಅದರಲ್ಲಿ ಗುರುತು ಹಾಕಿಟ್ಟಿದ್ದರು ಆದ್ದರಿಂದ ಅದನ್ನು ಹುಡುಕಲು ಪ್ರಾರಂಭಿಸಿದರು, ಅದು ಕಾಣಲಿಲ್ಲ. ಅವರು ವಿದ್ಯಾರ್ಥಿಗಳ ಬಳಿ ಯಾರು ಆ ಕ್ಯಾಲೆಂಡರನ್ನು ತೆಗೆದುಕೊಂಡದ್ದು ಎಂದು ವಿಚಾರಿಸಿದರು. ಅವರೆಲ್ಲರು ನಿಶಾ ತೆಗೆದುಕೊಂಡಳು ಎಂದರು. ಅದೇ ಸಮಯದಲ್ಲಿ ನಿಶಾ ತರಗತಿಯೊಳಗೆ ಬಂದಳು. ಟೀಚರ್ ಕೋಪದಿಂದ ನಿಶಾಳನ್ನು ನೋಡಿ ಏಯ್ ನಿಶಾ ನೀನೇನ ಆ ಕ್ಯಾಲೆಂಡರ್ ತೆಗೆದುಕೊಂಡದ್ದು? ಹೀಗೆ ಯಾರ ಬಳಿಯಲ್ಲಿಯೂ ಕೇಳದೆ ಎತ್ತಿಕೊಳ್ಳುತ್ತೀಯ, ಎಂದು ಬೈದು ಕೂಡಿಹಾಕಿದರು. ನಿಶಾ ಮೆಲ್ಲನೆಯ ಸ್ವರದಲ್ಲಿ Sorry Miss ಅದರಲ್ಲಿ ಹೂಗಳ ಚಿತ್ರ ಇದ್ದದ್ದರಿಂದ ಎತ್ತಿಕೊಂಡು ಬಿಟ್ಟೆ, ನನ್ನನ್ನು ಕ್ಷಮಿಸಿಬಿಡಿ, ಇನ್ನುಮೇಲೆ ಅಂತಹ ತಪ್ಪನ್ನು ಮಾಡುವುದೇ ಇಲ್ಲ ಎಂದು ಹೇಳಿ ಅತ್ತುಬಿಟ್ಟಳು. ಆದರೆ ಆ ಟೀಚರ್ ಅವಳನ್ನು ಕ್ಷಮಿಸಲು ಮನಸ್ಸಿಲ್ಲದೆ, ಒಂದು ರೆಟ್ಟನ್ನು ತೆಗೆದುಕೊಂಡು ಅದರಲ್ಲಿ  "ನಾನೊಂದು ಕಳ್ಳಿ" ಎಂದು ಬರೆದು ಅದನ್ನು ಅವಳ ಕತ್ತಿಗೆ ತಗುಲಿಸಿ ಒಂದೊಂದು ತರಗತಿಗೆ ಅವಳನ್ನು ಕರೆದುಕೊಂಡು ಹೋಗಿ ತೋರಿಸಿದರು. ಬೇರೆ ವಿದ್ಯಾರ್ಥಿಗಳು ಅವಳನ್ನು ನೋಡಿ ನಗಲು, ನಿಶಾಳಿಂದ ಆ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸು ಒಡೆದು ಹೋಯಿತು. School ಮುಗಿದ ಮೇಲೆ ಸಂಜೆ ಮನೆಗೆ ಹೋದ ನಿಶಾ, ಮನೆಯ ಬಾಗಿಲನ್ನು ಮುಚ್ಚಿಕೊಂಡು, ತರಗತಿಯಲ್ಲಿ ತನಗೆ ನಡೆದ ಒಂದೊಂದು ಘಟನೆಯನ್ನು ನೆನೆಸಿಕೊಂಡು ಅತ್ತು ಮನಸ್ಸು ಹೊಡೆದು ಹೋಗಿ ಮನೆಯೊಳಗೆಯೇ ಬಂಧಿಯಾದಳು. ಯಾರ ಬಳಿ ಮಾತಾಡಬೇಕೆಂದರೂ ನಾಚಿಕೊಂಡಳು. ಅದರ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಇಷ್ಟವಿರಲಿಲ್ಲ. ತಪ್ಪನ್ನು ಕ್ಷಮಿಸದೆ ಹೋದದ್ದರಿಂದ ಒಂದು ವಿದ್ಯಾರ್ಥಿಯ ಪ್ರಜ್ವಲಿಸಬೇಕಾದ ಭವಿಷ್ಯವು ಮರೆಯಾಯಿತು.

ಪ್ರೀತಿಯ ತಮ್ಮ, ತಂಗಿ! ಆ ಟೀಚರ್ ಅವಳನ್ನು ಕ್ಷಮಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನೀನು ಯಾರನ್ನು ಕ್ಷಮಿಸದೆ ಇರಬೇಡ ನಿನಗೋ ಅಥವಾ ನಿನ್ನ ಕುಟುಂಬಕ್ಕೋ ವಿರೋಧವಾಗಿ ಇದ್ದವರು ಮನಸ್ಸು ಬದಲಾಗಿ ಕ್ಷಮಾಪಣೆ ಕೇಳಲು ಬರುವಾಗ ಮನಃಸ್ಪೂರ್ತಿಯಾಗಿ ಕ್ಷಮಿಸಿ ಬಿಡಬೇಕು. ಆಗಲೇ ಯೇಸಪ್ಪ ನೀನು ಮಾಡಿದ ತಪ್ಪನ್ನು ಕ್ಷಮಿಸುತ್ತಾರೆ.ok ನಾ.
-    Mrs.ಸಾರಾಳ್ ಸುಭಾಷ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)