Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 20.02.2021

ಧೈನಂದಿನ ಧ್ಯಾನ(Kannada) – 20.02.2021

ಮನೋಸ್ಥೈರ್ಯವಾ, ದೇವರ ಬಲವಾ?

 "ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ,..." - ಅಪೊಸ್ತಲ 1:8

ಒಂದು ಪೆನ್, "ನನಗೆ ಎಲ್ಲಾ ಗೊತ್ತು, ನನ್ನಿಂದ ಎಲ್ಲವನ್ನು ತುಂಬಾ ಚೆನ್ನಾಗಿ, ಜ್ಞಾನವಾಗಿ ಬರೆಯಲು ಸಾಧ್ಯ" ಎಂದು ಹೇಳಿದರೆ ಹೇಗಿರುತ್ತದೆ? ಫಕ್ಕನೆ ನಗುವೇ ಬರುತ್ತದೆ. ಆದರೆ ಅದು ಬರೆಯುವವರ ಕೈಯೊಳಗೆ ತನ್ನನ್ನು ಒಪ್ಪಿಸಿಕೊಟ್ಟರೆ ಅನೇಕರಿಗೆ ಆಶೀರ್ವಾದವನ್ನು ಹೊತ್ತು ತರಲು ಸಾಧ್ಯ. ಅದರಂತೆಯೇ ನಾವು ಕೂಡ ಒಬ್ಬರಾಗಿ ನಿಂತು ದೇವರಿಗಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಎಂಬುದನ್ನು ಗ್ರಹಿಸಿ ಪರಿಶುದ್ಧಾತ್ಮನ ಆಳ್ವಿಕೆಯಲ್ಲಿ ಇರುವಾಗ ನಮ್ಮ ಮೂಲಕ ದೇವರು ದೊಡ್ಡ ಕಾರ್ಯಗಳನ್ನು ಮಾಡಲು ಸಾಧ್ಯ.

ಈ ದೃಷ್ಟಿ ಕೋನದಲ್ಲಿ ಯೇಸುಕ್ರಿಸ್ತನ ಶಿಷ್ಯನಾದ ಪೇತ್ರನ ಜೀವನವನ್ನು ಯೋಚಿಸೋಣ. ಆ ಪೆನ್ನಿನ ಹಾಗೆಯೇ ಪೇತ್ರನು ಯೇಸುವಿನ ಬಳಿ "ಯಾರು ನಿಮ್ಮನ್ನು ಬಿಟ್ಟು ಹೋದರೂ ನಾನು ಹೋಗುವುದಿಲ್ಲ, ಯಾರು ತಿರಸ್ಕರಿಸಿದರೂ ನಾನು ತಿರಸ್ಕರಿಸುವುದಿಲ್ಲ"  ಎಂಬಂತೆ ಮಾತನಾಡಿದರು, ಇದೆಲ್ಲವನ್ನು ನೋಡಿ ದೂತರು ನಗುತ್ತಿರಬಹುದು. ಯೇಸು ನೀನು ನನ್ನನ್ನು 3 ಬಾರಿ ತಿರಸ್ಕರಿಸುತ್ತೀಯ ಎಂದು ಹೇಳಿದರು ಅವರಿಂದ ಆ ಮಾತನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ಕೊನೆಗೆ, ಪೇತ್ರನು ಯೇಸುವನ್ನು ಶಪಿಸಲು, ಪ್ರಮಾಣ ಮಾಡಲು ಪ್ರಾರಂಭಿಸಿದನು. ಅವರ ಮನೋಸ್ಥೈರ್ಯವೆಲ್ಲಾ ಬರಿದಾಯಿತು. ಆದರೆ ಯಾವಾಗ ಪರಿಶುದ್ಧಾತ್ಮವನ್ನು ಹೊಂದಿಕೊಂಡು ಪರಿಶುದ್ಧಾತ್ಮನ ಆಳ್ವಿಕೆಗೆ ತನ್ನನ್ನು ಒಪ್ಪಿಸಿಕೊಟ್ಟರೋ, ಅಂದಿನಿಂದ ಅವರು ಹೊಸ ಬಲವನ್ನು ಹೊಂದಿಕೊಂಡರು. ಯಾವ ಜನರ ಮುಂದೆ ಯೇಸುವನ್ನು ತಿರಸ್ಕರಿಸಿದರೋ, ಅದೇ ಜನರ ಮುಂದೆ ಯೇಸುವನ್ನು ಪ್ರಸಿದ್ಧ ಪಡಿಸಿ ಸಾಕ್ಷಿಯಾಗಿ ನಿಂತರು. ತನ್ನ ಜೀವವನ್ನು ಕಾಪಾಡಿಕೊಳ್ಳಲು ಯಾರ ಬಳಿ ಗೋಳಾಡಿದರೋ, ಅದೇ ಯೆಹೂದ್ಯರ ಬಳಿ ತನ್ನ ಜೀವವನ್ನು ಕ್ಷುಲ್ಲಕವಾಗಿ ನೆನೆಸಿ ಧೈರ್ಯವಾಗಿ ಮಾತಾಡಿದರು. ಇದೆಲ್ಲವನ್ನು ತನ್ನ ಸ್ವಂತ ಬಲದಿಂದಲಾ ಮಾಡಿದರು? ಇಲ್ಲವೇ ಇಲ್ಲ! ಪರಿಶುದ್ಧಾತ್ಮನ ಬಲವೇ ಕಾರಣ!

ನನ್ನ ಪ್ರೀತಿಯ ಸಹೋದರ-ಸಹೋದರಿಯರೇ!  "ನನ್ನಿಂದ ಸಾಧ್ಯ, ನಾನು ಇದನ್ನು ಮಾಡಿಬಿಡುತ್ತೇನೆ" ಎಂದು ನಿಮ್ಮ ಸ್ವಂತ ಬಲದಿಂದ ಪ್ರಯತ್ನ ಮಾಡಿ ಸೋತು ಹೋದ ದಿನಗಳು ಸಾಕು. ನಮ್ಮ ಕೈಯಲ್ಲಿ ಹೇಗೆ ಒಂದು ಪೆನ್ ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಕೊಟ್ಟು ನಮಗೂ ಮತ್ತೊಬ್ಬರಿಗೂ ಪ್ರಯೋಜನಕರವಾಗಿ ಇರುತ್ತದೋ ಅದರಂತೆಯೇ ನಾವು ನಮ್ಮ ಜೀವನವನ್ನು ಪರಿಶುದ್ಧಾತ್ಮನ ಆಳ್ವಿಕೆಗೆ ಒಪ್ಪಿಸಿ ಕೊಡುವಾಗ, ಒಂದು ಉನ್ನತವಾದ ಬಲವು ನಮ್ಮನ್ನು ತುಂಬಿಸುತ್ತದೆ, ಆ ಬಲವು ನಮ್ಮನ್ನು ತುಂಬಿಸುವಾಗ ನಾವು ದೇವರ ನಾಮ ಮಹಿಮೆ ಗಾಗಿ, ಕ್ರಿಸ್ತನ ನಾಮವನ್ನು ಪ್ರಚುರಪಡಿಸಿ, ಅವರಿಗೆ ಸಾಕ್ಷಿಯಾಗಿ ಖಂಡಿತವಾಗಿ ಜೀವಿಸಲು ಸಾಧ್ಯ.
-    Mrs.ಜೆಸಿ ಅಲೆಕ್ಸ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)