Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 18.02.2021

ಧೈನಂದಿನ ಧ್ಯಾನ(Kannada) – 18.02.2021

ಏಕ ಮನಸ್ಸು

"...ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು." - ಅಪೊಸ್ತಲ 2:1

ಒಂದು ಗ್ರಾಮದಲ್ಲಿನ ಸಭೆಯಲ್ಲಿ ಯೌವನಸ್ಥರು ಯಾರು ಕೂಡ ಆಲಯಕ್ಕೆ ಬರದೇ ಇರುವುದು ಒಂದು ಯಾತನೆಯಾಗಿತ್ತು. ಈ ಪರಿಸ್ಥಿತಿಯಲ್ಲಿ ಒಬ್ಬ ಯೌವನಸ್ಥನನ್ನು ದೇವರು ರಕ್ಷಿಸಿದರು. ಆದ್ದರಿಂದ ಅವನನ್ನು ಕೆಲ ಯೌವನಸ್ಥರು ಕೊರೋನ ಕ್ರಿಮಿಯ ಹಾಗೆಯೇ ನೋಡಿದರು, ಹತ್ತಿರ ಸೇರುತ್ತಿರಲಿಲ್ಲ. ಆದರೂ ಕೆಲವು ತಿಂಗಳುಗಳಲ್ಲಿ ಅದ್ಭುತವಾಗಿ ಮತ್ತೊಬ್ಬ ಯೌವನಸ್ಥನು ರಕ್ಷಣೆ ಹೊಂದಿದನು. ನಂತರ ಇಬ್ಬರು ಸೇರಿ ದಿನವೂ ಒಂದು ನಿರ್ದಿಷ್ಟವಾದ ಸಮಯದಲ್ಲಿ ಪ್ರಾರ್ಥಿಸಲು ಪ್ರಾರಂಭಿಸಿದರು. ದಿನಗಳು ಕಳೆಯುತ್ತಾ ಅವರನ್ನು ಅರಿಯದೆಯೇ ಉಳಿದ ಯೌವನಸ್ಥರ ಕುರಿತ ಒಂದು ಆತ್ಮ ಬಾರಭಾರ ಅವರಲ್ಲಿ ಉಂಟಾಗಲು, ಇಬ್ಬರು ಸೇರಿ ಏಕ ಮನಸ್ಸಿನಿಂದ ಪ್ರಾರ್ಥಿಸಿದರು. ಪರಿಶುದ್ಧಾತ್ಮನು ಕಾರ್ಯ ಮಾಡಲು ಪ್ರಾರಂಭಿಸಿದರು. ನಂತರ ಹಾಗೆ ಅನೇಕ ಯೌವನಸ್ಥರು ರಕ್ಷಣೆ ಹೊಂದಿದರು. ಸಭೆಯಲ್ಲಿ ದೊಡ್ಡ ಬದಲಾವಣೆ ಉಂಟಾಯಿತು. Sunday school ತೆಗೆದುಕೊಳ್ಳಲು, ಸುವಾರ್ತೆ ಸೇವೆಗೆ ಹೋಗಲು ಯೌವನಸ್ಥರು ಮುಂದೆ ಬಂದರು. ಹಲವು ವರ್ಷಗಳಿಂದ ಕಾಣದಿದ್ದ ಅಂತಹ ಬದಲಾವಣೆ ಉಂಟಾಗಲು ಕಾರಣ,  ಆ ಇಬ್ಬರು ಯೌವನಸ್ಥರ ಏಕ ಮನಸ್ಸಿನ ಪ್ರಾರ್ಥನೆಯೇ ಎಂಬುದರಲ್ಲಿ ಸಂದೇಹವೇ ಇಲ್ಲ.

ಅಪೊಸ್ತಲರ ಕೃತ್ಯಗಳಲ್ಲಿ ಹೆಚ್ಚುಕಡಿಮೆ 10 ಬಾರಿ "ಏಕಮನಸ್ಸಿನಿಂದ" ಎಂಬ ಮಾತನ್ನು ಪರಿಶುದ್ಧಾತ್ಮನು ಬರೆದಿಟ್ಟಿದ್ದಾರೆ. ಅದರಲ್ಲಿ 6 ಬಾರಿ ಒಳ್ಳೆಯ ಕಾರ್ಯಕ್ಕೂ, 4 ಬಾರಿ ಕೆಟ್ಟ ಕಾರ್ಯಕ್ಕೂ ಏಕಮನಸ್ಸು ಉಂಟಾಗಿದ್ದನ್ನು ಓದಬಹುದು‌. ಯಾವಾಗೆಲ್ಲಾ ದೇವರ ನಾಮ ಮಹಿಮೆಗಾಗಿ ಎಂದು ಅಪೊಸ್ತಲರು ಏಕಮನಸ್ಸಿನಿಂದಿದ್ದರೋ ಆಗೆಲ್ಲಾ ಪ್ರಾರ್ಥನೆ ಹೆಚ್ಚಾಯಿತು, ಸ್ಥಳವು ಕದಲಿತು, ಬಲವಾದ ವರಗಳು ಪ್ರಕಟವಾಯಿತು, ಸೇವೆಗೆ ಜನರನ್ನು ಕಳುಹಿಸಿದರು. ಹೀಗೆ ಪರಿಶುದ್ಧಾತ್ಮನು ಬಲವಾಗಿ ಕಾರ್ಯ ಮಾಡಿದರು. ದೊಡ್ಡ ಉಜ್ಜೀವನ ಉಂಟಾಯಿತು. ಅದೇ ಸಮಯದಲ್ಲಿ ಕೆಟ್ಟ ಕಾರ್ಯಗಳಿಗಾಗಿ ಜನರು ಏಕಮನಸ್ಸಿನಿಂದ ಕೂಡುವಾಗೆಲ್ಲ ಪರಿಶುದ್ಧಾತ್ಮನು ದುಃಖಪಟ್ಟರು.ಅನನೀಯ ಸಫ್ಫೈರಳು ಏಕಮನಸ್ಸಿನಿಂದ ನೆಲದ ವಿಷಯದಲ್ಲಿ ಪರಿಶುದ್ಧಾತ್ಮನ ಬಳಿ ಸುಳ್ಳು ಹೇಳಿ ದುಃಖ ಪಡುವಂತೆ ಮಾಡಿದರು.

ಇದನ್ನು ಓದುತ್ತಿರುವ ನಿಮ್ಮೊಂದಿಗೆ ಪರಿಶುದ್ಧಾತ್ಮನು ಮಾತನಾಡುತ್ತಿದ್ದಾರೆ. ನೀವು ಯಾರೊಂದಿಗೆ, ಏತಕ್ಕಾಗಿ ಏಕಮನಸ್ಸಿನಿಂದಿದ್ದೀರ. ನೀವು ಏಕಮನಸ್ಸಿನಿಂದ ಮಾಡುವ ಕಾರ್ಯ ಪರಿಶುದ್ಧಾತ್ಮನು ಬಲವಾಗಿ ಕಾರ್ಯ ಮಾಡುವಂತೆ ಮುನ್ನಡೆಸುತ್ತಿದೆಯಾ? ಅಥವಾ ಅವರನ್ನು ದುಃಖಪಡಿಸುತ್ತಿದೆಯಾ? ಅನನೀಯ ಸಫ್ಫೈರಳ ಹಾಗೆ ಗೌರವಕ್ಕಾಗಿ, ಒಳ್ಳೆಯ ಹೆಸರು ಹೊಗಳಿಕೆಗಾಗಿ, ಸ್ವಾರ್ಥಕ್ಕಾಗಿ ಏಕಮನಸ್ಸಾಗುವುದಾದರೆ ನಿಮ್ಮೊಂದಿಗಿರುವ ಇಬ್ಬರ ಪರಿಸ್ಥಿತಿಯು ಪರಿತಾಪವೇ! ಇದಕ್ಕೆ ಬದಲಾಗಿ ಪ್ರಾರ್ಥಿಸಲು, ದೇವರಿಗಾಗಿ ದುಡಿಯಲು, ಕೊಡಲು, ಸೇವಕರನ್ನು ಕಳುಹಿಸಲು ಏಕಮನಸ್ಸಿನಿಂದ ಇರುವುದಾದರೆ, ಭಾರತ ದೇಶದ ಉಜ್ಜೀವನದ ಬಗ್ಗೆ ಪರಲೋಕದಲ್ಲಿ ಬರೆಯಲ್ಪಟ್ಟಿರುತ್ತದೆ ಎಂದರೆ ಅದರಲ್ಲಿ ನಿಮ್ಮ ಹೆಸರು ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಟ್ಟಿರುತ್ತದೆ ಎಂಬುದು ನಿಜ! ಒಂದಾಗಿ ಕೂಡಿರಿ! ಏಕಮನಸ್ಸಿನಿಂದಿರಿ! ಲೋಕಕ್ಕೆ ಬೆಳಕನ್ನು ಕೊಡಿರಿ.
-    Bro. ಗಾಂಧಿ ರಾಜನ್

ಪ್ರಾರ್ಥನಾ ಅಂಶ:-
ಮಿಷನರಿಗಳನ್ನು ಬೆಂಬಲಿಸುತ್ತಿರುವ ಕುಟುಂಬಗಳಿಂದ ಮಿಷನರಿಗಳು ಎದ್ದೇಳಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)