Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 17.02.2021

ಧೈನಂದಿನ ಧ್ಯಾನ(Kannada) – 17.02.2021

ಬೂದಿ ಬುಧವಾರ

"...ಶುದ್ಧಿಮಾಡಿಕೊಂಡು ವ್ರತದ ದಿವಸಗಳು ಮುಗಿದವೆಂದು ತಿಳಿಸುವವನಾಗಿ ದೇವಾಲಯದೊಳಗೆ ಹೋದನು" - ಅಪೊಸ್ತಲ 21:26

ಇಂದು ಬೂದಿ ಬುಧವಾರ. ಲೋಕ ಪೂರ್ತಿಯಾಗಿ ಎಲ್ಲಾ ಕ್ರೈಸ್ತ ಸಭೆಗಳಲ್ಲಿ ವಿಶೇಷವಾದ ದಿನವಾಗಿ ರೂಪಿಸಲಾಗಿದೆ ಎಂದು ನೋಡುತ್ತೇವೆ.

ಮೊಟ್ಟಮೊದಲು ಕ್ರಿ.ಶ.360 ನೇ ವರ್ಷದಲ್ಲಿ ಬೂದಿ ಬುಧವಾರ ಕ್ರೈಸ್ತ ಸಭೆಗಳಲ್ಲಿ ಆಚರಿಸಲ್ಪಟ್ಟ ದ್ದಾಗಿ ಇತಿಹಾಸವು ಹೇಳುತ್ತದೆ. ನಂತರ 5ನೇ ಶತಮಾನದಲ್ಲಿ ಪೋಪ್ ಕಿರಿಕೋರಿಯನ್ ಎಂಬವರ ಮೂಲಕ ಕ್ಯಾಥೋಲಿಕ್ ಸಭೆಗಳಲ್ಲಿ ಬೂದಿ ಬುಧವಾರ ಎಂಬುದು ಕ್ರಮವಾಗಿ ಪ್ರತಿವರ್ಷವೂ ಸಿದ್ದ ಮಾಡಲಾದ ವಿಶೇಷ ದಿನವಾಗಿ ಮಾರ್ಪಟ್ಟಿತು. ಮೊದಲು ಇದು 40 ಗಂಟೆಗಳು ನಂತರ ಆರು ದಿನಗಳಾಗಿಯೂ ಹಾಗೆ 21 ದಿನಗಳಾಗಿಯೂ ಅನುಸರಿಸಲ್ಪಟ್ಟಿತು. ಒಂದು ಹಂತದಲ್ಲಿ ಬೂದಿ ಬುಧವಾರ ಪ್ರಾರಂಭವಾಗಿ 40 ದಿನಗಳ ವರೆಗೂ ಉಪವಾಸ, ಶರೀರವನ್ನು ಜಜ್ಜುವಿಕೆ ಎಂದು ಈ ಆಚರಣೆಯನ್ನು ಮುಂದುವರಿಸಲಾಗುತ್ತಿದೆ. ಇದೇ lent days ಎಂದು ಕರೆಯಲ್ಪಡುತ್ತಿದೆ. ಗರಿಗಳ ಭಾನುವಾರದಂದು ಉಪಯೋಗಿಸುವ ಗರಿಗಳನ್ನು ಭದ್ರವಾಗಿ ಇಟ್ಟುಕೊಂಡು ಮುಂದಿನ ವರ್ಷ ಅದನ್ನು ಸುಟ್ಟು ಹಾಕಿ ಶಿಲುಬೆಯ ಜ್ಞಾಪಕವಾಗಿ ಆ ಬೂದಿಯನ್ನು ಹಣೆಯಲ್ಲಿ ಹಚ್ಚಿಕೊಳ್ಳುವ ಒಂದು ಸಂಪ್ರದಾಯವು ಕೆಲವು ಸಭೆಯ ವಿಭಜನೆಯಲ್ಲಿ ಉಂಟು.

ಮೇಲೆ ಓದಿದಂತಹ ಸಂದೇಶವನ್ನು ಸತ್ಯವೇದದ ದೃಷ್ಟಿಕೋನದಿಂದ ನಾವು ನೋಡುವುದಾದರೆ,"ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀತಟ್ಟನ್ನೂ ಬೂದಿಯನ್ನೂ ಆಸನಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ? "ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀತಟ್ಟನ್ನೂ ಬೂದಿಯನ್ನೂ ಆಸನಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?"ಎಂದು ಯೆಶಾಯ 58:5 ರಲ್ಲಿ ಓದುತ್ತೇವೆ. ನಮ್ಮ ದೇವರು ಉಪವಾಸದ ಕುರಿತು ಶರೀರವನ್ನು ಜಜ್ಜುವುದರ ಕುರಿತು ಸತ್ಯವೇದದಲ್ಲಿ ಹಲವು ಸ್ಥಳಗಳಲ್ಲಿ ಸ್ಪಷ್ಟವಾಗಿ ನಮಗೆ ಹೇಳಿದ್ದಾರೆ. ಕಾಲ ಕಾಲವಾಗಿ ಸಭೆಗಳಲ್ಲಿ ಕೈಗೊಳ್ಳುತ್ತಿರುವ ಇದನ್ನು ಹೊರಭಾಗದಲ್ಲಿ ನಿಂತು ಬಿಡದಂತೆ ಅಂತರಂಗದ ಮನುಷ್ಯನಲ್ಲಿಯೂ ಒಳ್ಳೆಯ ಬದಲಾವಣೆಗಳೊಂದಿಗೆ ನಡೆಸಲ್ಪಡಬೇಕು. ಸುಮ್ಮನೆ ಬೂದಿಯಲ್ಲಿಯೂ ಮಣ್ಣಿನಲ್ಲಿಯೂ ನಮ್ಮ ಭಕ್ತಿಯನ್ನು ತೋರಿಸುವುದು ಸರಿಯಲ್ಲ. ನಮ್ಮ ಹೃದಯದಲ್ಲಿ ಉಂಟಾಗುವ ಬದಲಾವಣೆಯನ್ನೇ ನಮ್ಮ ದೇವರು ಎದುರು ನೋಡುವ ಕಾರ್ಯವಾಗಿದೆ.

ಕ್ರಿಸ್ತನಲ್ಲಿ ಪ್ರಿಯರೇ! ಇನ್ನೊಂದು ವಾಕ್ಯದೊಂದಿಗೆ ಈ ಸಂದೇಶವನ್ನು ಮುಗಿಸಲು ಬಯಸುತ್ತೇನೆ. "ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ. ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ"ಎಂದು ಓದುತ್ತೇವೆ. (ರೋಮಾ 2:28,29) ಹೌದು, ಇದನ್ನೇ ದೇವರು ನಮ್ಮ ಬಳಿ ಎದುರು ನೋಡುತ್ತಿದ್ದಾರೆ. ಧಾರ್ಮಿಕ ರೀತಿಯಾಗಿ ಹೊರಗಡೆ ಮಾಡಲ್ಪಡುವ ಸಂಪ್ರದಾಯಗಳನ್ನು ಕಂಡು ದೇವರು ಮೋಸ ಹೋಗುವವರಲ್ಲ. ನಾವು ಇದನ್ನು ಗ್ರಹಿಸಿದವರಾಗಿ ನಮ್ಮ ತಂದೆಯಾದ ದೇವರನ್ನು ಆತ್ಮ ದಿಂದಲೂ ಸತ್ಯದಿಂದಲೂ ಆರಾಧಿಸಲು ಯಾವಾಗಲೂ ಸಿದ್ದವಾಗಿರೋಣ.
-    Mrs.ಜೇಕಬ್ ಶಂಕರ್

ಪ್ರಾರ್ಥನಾ ಅಂಶ:-
ಹಸಿದವರಿಗೆ ಆಹಾರ ಕೊಡುವ ಯೋಜನೆಯ ಮೂಲಕ ಉಪಯೋಗ ಹೊಂದುತ್ತಿರುವ ವ್ಯಕ್ತಿಗಳು ಪರಲೋಕದ ಪ್ರಜೆಗಳಾಗಿ ಮಾರ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)