Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 16.02.2021

ಧೈನಂದಿನ ಧ್ಯಾನ(Kannada) – 16.02.2021

ದೇವರಲ್ಲಿ ವೈರಾಗ್ಯದಿಂದಿರಬೇಕು.

"...ಪೌಲನು... ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು." - ಅಪೊಸ್ತಲ 17:16

ಇಂಗ್ಲೆಂಡ್ ನಲ್ಲಿ ಬಹಳ ಸಾಧಾರಣ ಕುಟುಂಬದಲ್ಲಿ ಹುಟ್ಟಿದ ವಿಲಿಯಂ ಕೇರಿ ಬಡತನದ ನಿಮಿತ್ತ ಶಾಲೆಯ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿಬಿಟ್ಟರು. ಅವರ 16 ನೆಯ ವಯಸ್ಸಿನಲ್ಲಿ ಚಪ್ಪಲಿ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಮೇಜಿನ ಮುಂದೆ, ನೇತುಹಾಕಿದ್ದ ಇಂಡಿಯಾ ಮ್ಯಾಪ್ ಅನ್ನು ನೋಡಿ, ಯೇಸುವನ್ನು ಅರಿಯದ ಮಕ್ಕಳಿಗಾಗಿ ಬಹಳ ವೈರಾಗ್ಯದಿಂದ ಕಣ್ಣೀರಿನೊಂದಿಗೆ ಪ್ರಾರ್ಥಿಸುತ್ತಿದ್ದರು.1793 ನೇ ವರ್ಷ ಭಾರತಕ್ಕೆ ಬಂದು ಪಶ್ಚಿಮ ಬಂಗಾಳದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದರು. ಬಂದ ಕೆಲವೇ ದಿನಗಳಲ್ಲಿ ಇವರ 5 ವರ್ಷದ ಮಗನನ್ನು ಕಳೆದುಕೊಂಡರು, ಇವರ ಹೆಂಡತಿ ಮನಸ್ಥಿತಿ ಬಾಧಿಸಲ್ಪಟ್ಟವರಾದರು, ಇವರು ಮಲೇರಿಯಾ ಜ್ವರದಿಂದ ಮರಣ ಸ್ಥಿತಿಗೆ ತಲುಪಿದರು. ಆದರೂ ದೇವರಿಗಾಗಿ ವೈರಾಗ್ಯದಿಂದ ನಿಂತು ಪಾಡುಗಳನ್ನು ಜಯಿಸಿದರು. ಒಂದೇ ರಾತ್ರಿಯಲ್ಲಿ ಇವರು ಭಾಷಾಂತರ ಮಾಡುತ್ತಿದ್ದ ಸತ್ಯವೇದದ ಎಲ್ಲಾ ಪುಟಗಳು ಸುಟ್ಟು ಬೂದಿಯಾದವು. ಆದರೂ ಏನೇ ನಡೆದರೂ ದೇವರಿಗಾಗಿ ಅವರು ಮುಂದಿಟ್ಟ ಕಾಲನ್ನು ಹಿಂದೆಗೆಯಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಸೆರಾಂಪೂರ್ ಯುನಿವರ್ಸಿಟಿ ಎಂಬ ಮಹಾ ದೊಡ್ಡ ಸತ್ಯವೇದ ಶಾಲೆಯನ್ನು ಪ್ರಾರಂಭಿಸಿದರು. ಈಗಲೂ ಆ ಸತ್ಯವೇದ ಶಾಲೆಯಿಂದ, ಅನೇಕ ದೇವ ಸೇವಕರು ಎದ್ದು ಪ್ರಕಾಶಿಸುತ್ತಲೇ ಇದ್ದಾರೆ.

ಸತ್ಯವೇದದಲ್ಲಿ, ಯೇಸು ಕ್ರಿಸ್ತನ ನಂತರ ಅನೇಕ ಪಾಡುಗಳು, ಉಪದ್ರವಗಳು ಹೊಂದಿದವರೆಂದರೆ ಅಪೊಸ್ತಲನಾದ ಪೌಲನು, ಹಸಿವು, ದಾಹ, ಏಟುಗಳು, ಸೆರೆವಾಸ ಎಂಬ ಇಂತಹ ಅನೇಕ ಪಾಡುಗಳು. ಸೆರೆಮನೆಯಲ್ಲಿದ್ದರೂ ಅನೇಕ ಯೌವ್ವನ ಸೇವಕರನ್ನು ರೂಪಿಸಿದರು, ಅನೇಕ ಪತ್ರಿಕೆಗಳನ್ನು ಬರೆದರು. ಕಾರಣ ಹೊಂದಿಕೊಂಡ ಸೇವೆಯನ್ನು ನೆರವೇರಿಸಬೇಕು ಎಂಬ ವೈರಾಗ್ಯವೇ! ಮತ್ತು ಅವರು ಆತ್ಮದಲ್ಲಿ ಬಹಳ ವೈರಾಗ್ಯದಿಂದ, ಪ್ರತಿದಿನವೂ ಧೈರ್ಯವಾಗಿ ಪ್ರಸಂಗ ಮಾಡುತ್ತಿದ್ದರು. ಇದರ ನಿಮಿತ್ತವಾಗಿ ಆ ದಿನಗಳಲ್ಲಿ ಮಹಾ ದೊಡ್ಡ ಉಜ್ಜೀವನವು ಉಂಟಾಯಿತು.

ಇದನ್ನು ಓದುತ್ತಿರುವ ನಮ್ಮೊಳಗೆ ಎಂತಹ ವೈರಾಗ್ಯವಿದೆ? ದೇವರಿಗೆ ತಕ್ಕ ವೈರಾಗ್ಯವಾ? ದೇವರಿಗೆ ತಕ್ಕ ವೈರಾಗ್ಯವು ನಮ್ಮನ್ನು ವಿಶೇಷವಾಗಿ ಆತ್ಮ ಆದಾಯ ಮಾಡುವವರನ್ನಾಗಿ ಮಾರ್ಪಡಿಸುತ್ತದೆ. ಆದರೆ ಸಹೋದರನೊಂದಿಗೆ ಮಾತಾಡದೆ ವೈರಾಗ್ಯ ತೋರಿಸುವುದು, ಹಗೆ, ಕೋಪ, ಮೂರ್ಖತನ ಇಂತಹ ಕಾರ್ಯಗಳಲ್ಲಿ ನಮಗೆ ವೈರಾಗ್ಯವು ಇರುವುದಾದರೆ ನಮ್ಮ ಆತ್ಮವನ್ನು ಕೂಡ ಕಳೆದುಕೊಳ್ಳುತ್ತೇವೆ. ದೇವರು ನಮ್ಮೊಂದಿಗೆ ಮಾತಾಡುತ್ತಿದ್ದಾರೆ. ಕ್ರೈಸ್ತ ಜೀವನದ ಪ್ರಾರಂಭದಲ್ಲಿ ದೇವರಿಗಾಗಿ ಎಷ್ಟು ವೈರಾಗ್ಯವಾಗಿ ನಿಂತಿದ್ದಿರಿ. ದಿನಗಳು ಕಳೆಯುತ್ತಾ ಆ ವೈರಾಗ್ಯವು ಕಡಿಮೆಯಾಗಿ, ಮರೆಯಾಗಿ ಹೋಯಿತೋ? ಪಾಡುಗಳು, ಹೋರಾಟಗಳು ನಿಮ್ಮನ್ನು ಸೋತು ಹೋಗುವಂತೆ ಮಾಡಿ ಬಿಟ್ಟಿತೋ? ಮೇಲ್ಕಂಡ ಇಬ್ಬರು ದೇವ ಮನುಷ್ಯರ ಜೀವನವನ್ನು ನೋಡಿರಿ. ತಮ್ಮನ್ನು ಆರಿಸಿಕೊಂಡ ದೇವರಿಗಾಗಿ ಎಲ್ಲವನ್ನು ಸಹಿಸಿಕೊಂಡು ವೈರಾಗ್ಯದಿಂದ ಜೀವಿಸಿದರ ನಿಮಿತ್ತವಾಗಿ ಇಂದಿನವರೆಗೂ ಅವರು ಶಿಷ್ಯರನ್ನು, ಸೇವಕರನ್ನು ರೂಪಿಸುತ್ತಲೇ ಇದ್ದಾರಲ್ಲವೇ! ಹಾಗಾದರೆ ನಾವು ದೇವರಿಗಾಗಿ ಧೈರ್ಯವಾಗಿ ನಿಲ್ಲುವಾಗ ಫಲವಿಲ್ಲದೆ ಹೋಗುತ್ತದಾ! ನಿಶ್ಚಯವಾಗಿ ಫಲವುಂಟು.
-    Mrs. ಶಕ್ತಿ ಶಂಕರ್ ರಾಜನ್

ಪ್ರಾರ್ಥನಾ ಅಂಶ:
ಕಿರಿಯರ ಪಾಲುದಾರರ ಯೋಜನೆಯಲ್ಲಿ ಸೇರಿರುವ ಮಕ್ಕಳು ಹೆತ್ತವರ ಸಮರ್ಪಣೆಯಲ್ಲಿ ನೆಲೆಗೊಂಡಿರಲು ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)