Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 29.01.2021

ಧೈನಂದಿನ ಧ್ಯಾನ(Kannada) – 29.01.2021

ಅವಕಾಶ

"ನೋಡು, ನಾನು ಈಹೊತ್ತು ಜೀವವನ್ನೂ ಮರಣವನ್ನೂ, ಒಳ್ಳೇದನ್ನೂ ಕೆಟ್ಟದ್ದನ್ನೂ ನಿನ್ನ ಮುಂದೆ ಇಟ್ಟಿದ್ದೇನೆ" - ಧರ್ಮೋಪದೇಶ 30:15

ಬಿಲ್ ಗೇಟ್ಸ್ ಪ್ರಪಂಚದ ಹಣವಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದವರು ಎಂಬುದು ನಮಗೆ ಗೊತ್ತು. ಅವರ ಬಳಿ ಇಂಟರ್ವ್ಯೂಗಾಗಿ  ಪತ್ರಿಕೆಯವರು ಬಂದಿದ್ದರು. ಅದರಲ್ಲೊಬ್ಬರು ಪ್ರಪಂಚದ ಹಣವಂತರಲ್ಲಿ ಮೊದಲ ಸ್ಥಾನದಲ್ಲಿ ಇದ್ದೀರಲ್ಲಾ ಇದಕ್ಕೆ ಕಾರಣವೇನು ಎಂದು ಕೇಳಿದರು. ಕೂಡಲೇ ಬಿಲ್ ಗೇಟ್ಸ್, ಒಂದು ಪೇಪರನ್ನು ಅವರ ಕೈಯಲ್ಲಿ ಕೊಟ್ಟು "ನಿನಗೆ ಎಷ್ಟು ಹಣ ಬೇಕಾದರೂ ತುಂಬಿಸಿಕೊಡು ನಾನು ಕೊಡುತ್ತೇನೆ" ಎಂದರು. ಅದಕ್ಕೆ ಆ ಪತ್ರಿಕೆಯ ನಿರ್ವಾಹಕರು ನನಗೆ ಯಾವುದೂ ಬೇಡ ಎಂದು ಹೇಳಿಬಿಟ್ಟರು. ಅದಕ್ಕೆ ಬಿಲ್ ಗೇಟ್ಸ್,  "ನೀನು ಎಷ್ಟು ಬರೆದಿದ್ದರೂ ಕೊಡುತ್ತಿದ್ದೆನು, ಆದರೆ ನೀನು ಕೇಳಲಿಲ್ಲ ನಿನಗೆ ಸಿಕ್ಕಿದ ಅವಕಾಶವನ್ನು ಕಳೆದುಕೊಂಡೆ. ನಾನೋ ನಿನ್ನಂತೆ ನನಗೆ ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳಲಿಲ್ಲ, ಚಿಕ್ಕ ಅವಕಾಶವಾಗಿದ್ದರೂ ಉಪಯೋಗಿಸಿಕೊಂಡೆನು. ಇದೇ ನನ್ನ ಜಯಕ್ಕೆ ಕಾರಣ"ಎಂದರಂತೆ.

ಸತ್ಯವೇದದಲ್ಲಿ ಏಸಾವನು ತನಗಿದ್ದ ಅವಕಾಶವನ್ನು ನಿರ್ಲಕ್ಷ್ಯ ಮಾಡಿದನು. ಆದ್ದರಿಂದ ಅವನಿಗೆ ಬರಬೇಕಾದ ಜೇಷ್ಠ ಪುತ್ರ ಭಾಗ್ಯವನ್ನು ಕಳೆದುಕೊಂಡನು. ಜೇಷ್ಠ ಪುತ್ರ ಭಾಗ್ಯ ಎಂಬುದು ಎರಡರಷ್ಟು ಸ್ವಾಸ್ತ್ಯವಾಗಿದೆ. ಅವನಿಗಿದ್ದ ಹಸಿವಿನಿಂದ ಸಾಧಾರಣವಾದ ಗಂಜಿ ಕೂಡ ಪಳಪಳ ಎಂದು ಹೊಳೆಯುವಂತೆ ಕಾಣುತ್ತಿತ್ತು. ಇದರಿಂದ ತನ್ನ ಸ್ವತ್ತನ್ನು ಕಳೆದುಕೊಂಡನು ಏಸಾವನು ನಂತರ ಶಬ್ಧವಾಗಿ ಕೂಗಿಕೊಂಡರೂ ಅತ್ತರೂ ಅವನಿಗೆ ಸಿಗಲಿಲ್ಲ. ಆದರೆ ಅವನ ಸಹೋದರನಾದ ಯಾಕೋಬನು ಏನೂ ಇಲ್ಲದವನಾಗಿ ಬರೀ ಕೋಲು ಕೈಯಾಗಿ ತನ್ನ ಮಾವನ ಬಳಿ ಹೋದನು. ಅಲ್ಲಿ ಸಿಕ್ಕಿದ ಎಲ್ಲಾ ಅವಕಾಶಗಳು ಉಪಯೋಗಿಸಿಕೊಂಡು ಎರಡು ಪರಿವಾರಗಳನ್ನು ಸಂಪಾದಿಸಿದನು. ಇಂದಿನವರೆಗೂ ಅವನ ಸಂತತಿಗಳು ಭೂಮಿಯ ಮೇಲೆ ಆಶೀರ್ವಾದಕರವಾಗಿದ್ದಾರೆ. ಅವರಿಗಾಗಿ ಪ್ರತ್ಯೇಕ ದೇಶವೇ ರೂಪಿಸಲ್ಪಟ್ಟಿತು. ಆ ಸಂತತಿಯಲ್ಲೇ ರಕ್ಷಕನಾದ ಯೇಸುಕ್ರಿಸ್ತನು ಹುಟ್ಟಿದರು.

ಪ್ರೀತಿಯ ಯೌವ್ವನಸ್ಥನೇ! ನಿನಗೆ ಸಿಕ್ಕುವ ಯಾವ ಅವಕಾಶವನ್ನೂ ಕಳೆದುಕೊಳ್ಳಬೇಡ. ತನಗೆ ಸಿಕ್ಕಿದ ಅವಕಾಶ ಚಿಕ್ಕದೋ, ದೊಡ್ಡದೋ ಅದನ್ನು ಉಪಯೋಗಿಸಿಕೊಳ್ಳುವವರು ಆಶೀರ್ವದಿಸಲ್ಪಡುತ್ತಾರೆ. ಕಾಲೇಜಿನಲ್ಲಿಯೋ, ಕುಟುಂಬದಲ್ಲಿಯೋ, ಸೇವೆಯಲ್ಲಿಯೋ ನಿನಗೆ ಸಿಗುವ ಎಲ್ಲಾ ಅವಕಾಶಗಳನ್ನು ಹಿಂಜರಿಯದೆ ಅಂಗೀಕರಿಸಿ ಪ್ರಾರ್ಥಿಸಿ ಉಪಯೋಗಿಸಿರಿ. ಸಿಕ್ಕುವ ಅವಕಾಶಗಳನ್ನು ಉಪಯೋಗಿಸುವಾಗ, ಯಾವುದು ನಿನಗೆ ಬಹಳ ಚೆನ್ನಾಗಿ ಮಾಡಿ ಮುಗಿಸಲು ಸಾಧ್ಯವಾಗುತ್ತದೊ ಅದುವೇ ದೇವರು ನಿನಗೆ ಕೊಟ್ಟ ಪ್ರತಿಭೆ. ನಿನ್ನ ಪ್ರತಿಭೆ ಏನು ಎಂಬುದು ತಿಳಿದುಕೋ ಇದುವೇ ದಾರಿ. ಸೋಮಾರಿತನವೂ, ಲೋಕದಾಶೆಯು ನಿನ್ನ ಕಠಿಣವಾದ ದುಡಿಮೆ ನಿಲ್ಲಿಸಲು ಸ್ಥಳ ಕೊಡಬೇಡ. ಮುಖ್ಯವಾಗಿ, ನಿನಗಿರುವ ಪ್ರತಿಭೆ ದೇವರ ನಾಮ ಮಹಿಮೆಗಾಗಿಯೇ ಉಪಯೋಗವಾಗ ಬೇಕೆಂಬುದರಲ್ಲಿ ಬಹಳ ಎಚ್ಚರಿಕೆಯಾಗಿರು.  "ಯೇಸುವಿಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದು ಆದರೆ ಯಾವುದಕ್ಕಾಗಿಯು ಯೇಸುವನ್ನು ಕಳೆದುಕೊಳ್ಳಲೇ ಬೇಡ"
-    J.ಡೇವಿಡ್

ಪ್ರಾರ್ಥನಾ ಅಂಶ:-
ಬೈಬಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಓದಲು ಚೇರ್ ಗಳನ್ನು ತೆಗೆದುಕೊಳ್ಳುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)