Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 27.01.2021

ಧೈನಂದಿನ ಧ್ಯಾನ(Kannada) – 27.01.2021

ಹೀನವಾಗಿ ನೆನೆಸಬೇಡಿರಿ

"ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ" - ಕೀರ್ತನೆಗಳು 75:5

ಕುಚ್ಚು ಕುಚ್ಚಾಗಿ ಕಾಯಿಗಳು,ಹೂಗಳೂ ತುಂಬಿದ್ದ  ಪಪ್ಪಾಯಿ ಮರ, ಹತ್ತಿರದಲ್ಲಿದ್ದ ಒಂದು ಚಿಕ್ಕ ಗಿಡವನ್ನು ನೋಡಿ ನಿನ್ನ ಬಳಿ ಅದಿಲ್ಲ,ಇದಿಲ್ಲ ಎಂದು ಹೇಳುತ್ತಾ ಹೀನವಾಗಿ ಮಾತಾಡಿ ಮನಸ್ಸನ್ನು ನೋಯಿಸಿತು. ದೊಡ್ಡ ಮಳೆಯಿಂದಾಗಿ ಬೀಸಿದ ಗಾಳಿಯ ನಿಮಿತ್ತವಾಗಿ ಆ ಪಪ್ಪಾಯಿ ಮರವು ಪಲ್ಟಿ ಹೊಡೆದು ಬಿದ್ದುಹೋಯಿತು. ಆದರೆ ಆ ಚಿಕ್ಕ ಗಿಡವೋ ಎಂದಿನಂತೆ, ತನಗಿದ್ದ ಅದೇ ಬಲದೊಂದಿಗೆ ನಿಂತುಕೊಂಡಿತ್ತಂತೆ. ನಾವು ಕೂಡ ಹಲವು ಸಮಯಗಳಲ್ಲಿ ದೇವರು ನಮಗೆ ಕೊಟ್ಟಿರುವ ಆಶೀರ್ವಾದಗಳನ್ನು ತೋರಿಸಿ ಮತ್ತೊಬ್ಬರ ಬಡ ಸ್ಥಿತಿಯನ್ನು ಹೀನವಾಗಿ ನೆನೆಸಿಬಿಡುತ್ತೇವೆ. ಆದರೆ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು,  "ದೇವರು ನಮಗೆ ಕೊಡುವ ಆಶೀರ್ವಾದಗಳಿಂದಾಗಿ ಅವರ ನಾಮವು ಮಹಿಮೆ ಹೊಂದಲು, ಮತ್ತೊಬ್ಬರಿಗೆ ಪ್ರಯೋಜನಕರವಾಗಿ ಉಪಯೋಗಿಸಬೇಕೇ ಹೊರತು, ಅದರಿಂದಾಗಿ ಮತ್ತೊಬ್ಬರ ಮನಸ್ಸನ್ನು ನೋಯಿಸಿ, ಹೀನವಾಗಿ ನೆನೆಸಲೂಬಾರದು."

ಸತ್ಯವೇದದಲ್ಲಿ, ಅನೇಕ  ಮಕ್ಕಳನ್ನು ಪಡೆದು ಜೀವಿಸುತ್ತಿದ್ದ ಸ್ತ್ರೀಯು ಮಕ್ಕಳಿಲ್ಲದ ಅನ್ನಳನ್ನು ಹೀನವಾಗಿ ನೆನೆಸಿದಳು, ಅನ್ನಳ ಕಣ್ಣೀರನ್ನು ಕಂಡು ದೇವರು ಅವಳಿಗೆ ಒಂದು ಮಗುವನ್ನು ಕೊಟ್ಟು, ಆ ಮಗುವನ್ನು ಇಸ್ರಾಯೇಲಿನ ಉಜ್ಜೀವನಕ್ಕಾಗಿ ಉಪಯೋಗಿಸಿ, ಅರಸರನ್ನು ಅಭಿಷೇಕಿಸುವ ಉನ್ನತ ಸೇವೆಯನ್ನು ಕೊಟ್ಟರು. ಆದರೆ ಪೆನ್ನಿನ್ನಳ ಹೆಸರೂ ಕೂಡ ನಮಗೆ ಗೊತ್ತಿಲ್ಲ. ಹೆತ್ತವರು! ನಿಮ್ಮ ಮಕ್ಕಳ ಅಭಿವೃದ್ಧಿಗೆ, ಆಶೀರ್ವಾದಕ್ಕೆ ನೀವೇ ತಡೆಯಾಗಿರಬೇಡಿರಿ. ಪೆನಿನ್ನಳ ಹೆಮ್ಮೆಯ ಮಾತಿನಿಂದ ಅವಳ ಮಕ್ಕಳು ಉಪಯೋಗಿಸಲ್ಪಡಲಿಲ್ಲ. ಒಂದು ವೇಳೆ ನಮ್ಮ ಮಕ್ಕಳ ಪ್ರತಿಭೆಗಳು,ತಿಳುವಳಿಕೆಯೂ ದೇವರಿಗೆ, ಮತ್ತೊಬ್ಬರಿಗೆ ಉಪಯೋಗವಾಗದೇ ಇರಬಹುದು. ಅದಕ್ಕೆ ಕಾರಣ ದೇವರೋ, ಸೈತಾನನೋ ಆಗಲಿಕ್ಕೆ ಸಾಧ್ಯವೇ ಇಲ್ಲ. ನಮ್ಮ ಹೆಮ್ಮೆಯು ತಾಳ್ಮೆಯೇ ಅದಕ್ಕೆ ಕಾರಣವಾಗಿರುತ್ತದೆ.

ಪ್ರಿಯರೇ! ನಮ್ಮ ದೇವರು ಹೆಮ್ಮೆಯುಳ್ಳವರನ್ನು ಎದುರಿಸಿ ನಿಲ್ಲುವ ದೇವರು. ಅದೇ ಸಮಯದಲ್ಲಿ, ನನ್ನ ಬಳಿ ಹೇಳಿಕೊಳ್ಳುವಷ್ಟು ಮಟ್ಟಿಗೆ  ಯಾವುದೂ ಇಲ್ಲವೇ ಎಂದು ಪರಿತಪಿಸುವವರಿಗೆ ತನ್ನ ಕೃಪೆಯನ್ನು ಲೆಕ್ಕಸಲಾಗದಷ್ಟು ಅನುಗ್ರಹಿಸಿ ಅವರನ್ನು ಉಪಯೋಗಿಸಲೂ,ಆಶೀರ್ವದಿಸಲೂ ಅವರಿಂದ ಸಾಧ್ಯ. ಆದ್ದರಿಂದ ನಾವು ನಮ್ಮ ಸಂತತಿಗಳಿಗೆ ಆಶೀರ್ವಾದಕರವಾಗಿ ಇರಬೇಕಾದರೆ, ಹೆಮ್ಮೆಪಡದೇ ಇರೋಣ. ಯಾರನ್ನೂ ಹೀನವಾಗಿ ನೆನೆಸದೇ ಇರೋಣ. ನಮ್ಮ ಆಶೀರ್ವಾದವನ್ನು ಕಳೆದುಕೊಳ್ಳದೇ ಇರೋಣ. ಅದೇ ಸಮಯದಲ್ಲಿ ಹೀನವಾಗಿ ನೆನೆಸಲ್ಪಟ್ಟವರು ಮತ್ತೊಬ್ಬರ ಮಾತುಗಳಿಂದ ಕುಗ್ಗಿ ಹೋಗಿ, ದಾರಿ ತಪ್ಪಿಹೋಗದಂತೆ ದೇವರ ಸಮ್ಮುಖದಲ್ಲಿ ನಮ್ಮ ಹೃದಯವನ್ನು ಸುರಿಸೋಣ. ಅಂತರಾಳದಲ್ಲಿ ನಾವು ಸುರಿಸುವ ಕಣ್ಣೀರನ್ನು ಕಾಣುವ ಕರ್ತನು ಬಹಿರಂಗವಾಗಿ ಬಲಪಡಿಸುತ್ತಾ ರೆ.
-    S. ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
Peace centre ಸೇವೆಗಳಿಗಾಗಿ ಅಭಿಷೇಕ ಮಾಡಲ್ಪಟ್ಟ ಸೇವಕರನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)