Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 26.01.2021

ಧೈನಂದಿನ ಧ್ಯಾನ(Kannada) – 26.01.2021

ನನ್ನ ದೇಶ

“ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು” - 1 ತಿಮೊಥೆಯನಿಗೆ 2:2

ಅಮೆರಿಕಾದಲ್ಲಿ ಪ್ರಖ್ಯಾತಿ ಹೊಂದಿದ  ಡಾಕ್ಟರ್ ಆಗಿರುವ ಜಾನ್ ಸ್ಕಡ್ಡರ್ ಒಂದು ದಿನ ರಾತ್ರಿ ಒಬ್ಬ ರೋಗಿಯನ್ನು ನೋಡುವುದಕ್ಕಾಗಿ ಆತನ ಮನೆಗೆ ಹೋದರು. ಆತನ ಮನೆಯಲ್ಲಿರುವ ಟೇಬಲ್ ಮೇಲೆ ಇರುವ ಚಿಕ್ಕ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದರು. 60 ಕೋಟಿ ಪ್ರಜೆಗಳ ಹಕ್ಕಿರುವ ಸ್ವರ ಎಂಬ ಅಂಶದಲ್ಲಿ ಭಾರತದಲ್ಲಿ ಹಲವು ಲಕ್ಷಾಂತರ ಜನರು ಸಾಮಾನ್ಯವಾದ ಅತ್ಯವಸರ ವಸತಿಗಳು ಕೂಡ ಇಲ್ಲದೇ ಪ್ರತಿದಿನ ಸಾಯುತ್ತಲೇ ಇದ್ದಾರೆ ಎಂಬ ಸುದ್ದಿಯು ಅದರಲ್ಲಿತ್ತು. ಇಂತಹ ಜನರಿಗಾಗಿ ಯಾರು ಹೋಗುತ್ತಾರೆ ಎಂಬ ಸುದ್ದಿಯು ಜಾನ್ ಸ್ಕಡ್ಡರ್ ನ ಹೃದಯವನ್ನು ಕದಲಿಸಿತು. ಕರ್ತನು ತನ್ನನ್ನು ಕರೆಯುತ್ತಿದ್ದಾರೆಂದು ತಿಳಿದು ಅದಕ್ಕೆ ಬೇಕಾದ ಪ್ರಯತ್ನಗಳನ್ನು  ಮಾಡಲು ಪ್ರಾರಂಭಿಸಿದರು. ಆಗ ಅವರ ತಂದೆ  " ನೀನು ಭಾರತಕ್ಕೆ ಹೋದರೆ ನನ್ನ ಮಗನಲ್ಲ, ನಿನಗೆ ನನ್ನ ಆಸ್ತಿಯಲ್ಲಿ  ಯಾವುದೇ ಭಾಗ ಸಿಗುವುದಿಲ್ಲ"ಎಂದರು. ಆದರೆ ಜಾನ್ ಸ್ಕಡ್ಡರ್ ಮಾತ್ರ ಯಾವುದನ್ನೂ ಕಂಡುಕೊಳ್ಳದೆ ತನ್ನ ಹೆಂಡತಿಯಾದ ಹೆರಿಯಟ್ ಮತ್ತು ಎರಡು ವರ್ಷದ ಮಗುವಿನೊಂದಿಗೆ ಭಾರತಕ್ಕೆ ಹೊರಟರು. ಕೆಲವು ವರ್ಷಗಳ ನಂತರ ಜನಿಸಿದ ಇಬ್ಬರು ಮಕ್ಕಳು ಕೂಡ ಸತ್ತು ಹೋದರು. ಆದರೂ ಆತನ ಪ್ರಯಾಸದೊಂದಿಗೆ ಭಾರತ ದೇಶದಲ್ಲಿ ವೈದ್ಯಕೀಯ ಸೇವೆಯನ್ನು ಮಾಡುತ್ತಾ ಬಂದರು. ಜಾನ್ ಸ್ಕಡ್ಡರ್ ಗೆ ಏಳು ಜನ ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು ಜನಿಸಿದರು. ಏಳು ಜನ ಗಂಡು ಮಕ್ಕಳನ್ನೆಲ್ಲಾ ತಕ್ಕ ವಯಸ್ಸಿನಲ್ಲಿ ಅಮೆರಿಕಾಗೆ ಕಳಹಿಸಿ ಎಲ್ಲರನ್ನೂ ಮೆಡಿಕಲ್ ಗೆ ಓದಿಸಿದರು. ವಿದ್ಯಾಭ್ಯಾಸ ಮುಗಿದ ಕೂಡಲೇ ಅವರನ್ನು ಭಾರತ ದೇಶಕ್ಕೆ ಕರೆಸಿ ಭಾರತ ದೇಶದಲ್ಲಿ ಅನೇಕ ಪ್ರಾಂತಗಳಿಗೆ ಕಳುಹಿಸಿ ವೈದ್ಯಕೀಯ ಸೇವೆಯನ್ನು ಮಾಡಿಸಿದರು. ಆರನೆಯದಾಗಿ ಜನಿಸಿದ ಮಗನೇ ವೇಲೂರಿನಲ್ಲಿ C.M.C ಹಾಸ್ಪಿಟಲ್ ಸ್ಥಾಪಿಸಿದ ಹೈಡಾ ಸ್ಕಡ್ಡರ್. ಜಾನ್ ಸ್ಕಡ್ಡರ್ ಭಾರತ ದೇಶಕ್ಕೆ ಬಂದ ಮೊಟ್ಟಮೊದಲ ಅಮೆರಿಕಾ ವೈದ್ಯ ಮಿಷನರಿಯಾದರು.

 ಮೋಶೆ ಅರಣ್ಯದಲ್ಲಿ ಕುರಿಗಳನ್ನು ಕಾಯುತ್ತಿದ್ದಾಗ ಮುಳ್ಳು ಪೊದೆಯಲ್ಲಿ ಉರಿಯುತ್ತಿದ್ದ ಬೆಂಕಿಯ ಮಧ್ಯದಲ್ಲಿ ದೇವರು ಮೋಶೆಯೊಂದಿಗೆ ನನ್ನ ಜನಾಂಗವು ಐಗುಪ್ತದಿಂದ ಬಿಡಿಸಿ ಕರೆದುಕೊಂಡು ಬಾ ಎಂದು ಹೇಳಿದಾಗ ಮೋಶೆ ಅದನ್ನು ಅಂಗೀಕರಿಸಲಿಲ್ಲ. ದೇವರೊಂದಿಗೆ ಬಹಳ ಹೊತ್ತು ಮಾತನಾಡಿದ ನಂತರವೇ  ಅಂಗೀಕರಿಸಿದನು.

ಯೌವ್ವನಸ್ಥನೇ ಇಂದು ನಿನ್ನ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ನೋಡುವಾಗ ಆಳ್ವಿಕೆಯು ಸರಿಯಿಲ್ಲ, ನಾಯಕರು ಸರಿಯಿಲ್ಲ ಎಂದು ಹೇಳುತ್ತಿದ್ದೀರಾ? ನನ್ನ ದೇಶ, ನನ್ನ ಜನರು ಎಂಬ ಆಲೋಚನೆಯು ನಿನಗೇಕೆ ಬಂದಿಲ್ಲ. ಅಮೆರಿಕಾದಲ್ಲಿ ಜನಿಸಿದ ಜಾನ್ ಸ್ಕಡ್ಡರ್ ಗೆ ಭಾರತ ದೇಶದ ಮೇಲೆ ಅಷ್ಟೊಂದು ಭಾರ ಇರುವುದಾದರೆ ಇನ್ನು ನಿಮಗೆ ಭಾರತ ದೇಶದಲ್ಲಿರುವ ಜನರು ನನ್ನ ಜನರು ಎಂಬ ಆಲೋಚನೆ ಏಕೆ ಬರಲಿಲ್ಲ. ನೀವು ನಿಮ್ಮ ದೇಶವನ್ನು ಪ್ರೀತಿಸುತ್ತಿದ್ದೀರಾ? ದೇಶಕ್ಕಾಗಿ ನೀವು ಏನು ಮಾಡಿದ್ದೀರೋ ಯೋಚಿಸಿ ನೋಡಿ. ಕನಿಷ್ಠ ದೇಶಕ್ಕಾಗಿ ಸಮಯವನ್ನು ಪ್ರತ್ಯೇಕಿಸಿ ಪ್ರಾರ್ಥಿಸುತ್ತಿದ್ದೀರಾ? ಪ್ರಾರ್ಥನೆಯಿಂದಲೇ ದೇಶದಲ್ಲಿ ಬದಲಾವಣೆಗಳು ಬರಲು ಸಾಧ್ಯ.
-    Mrs. ಅನ್ಬು ಜ್ಯೋತಿ ಸ್ಟಾಲಿನ್

ಪ್ರಾರ್ಥನಾ ಅಂಶ:-
Day care center ನ ಮೂಲಕ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡ ಕುಟುಂಬಗಳನ್ನು ಕರ್ತನು ಆಶೀರ್ವದಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)