Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.01.2021

ಧೈನಂದಿನ ಧ್ಯಾನ(Kannada) – 25.01.2021

ನೂಲು ಗುಂಡು

"...ಇಗೋ, ನಾನು ನನ್ನ ಜನರಾದ ಇಸ್ರಾಯೇಲ್ಯರ ಮಧ್ಯದಲ್ಲಿ ನೂಲು ಗುಂಡನ್ನು ಇಡುತ್ತೇನೆ;..." - ಆಮೋಸ 7:8

ಕಟ್ಟಡದ ಕೆಲಸವನ್ನು ಮಾಡುವ ಒಂದು ಕೆಲಸಗಾರನು, ಒಂದು ಗೋಡೆಯನ್ನು ಕಟ್ಟುವಾಗ,  ಆ ಗೋಡೆ ನೇರವಾಗಿಯೂ ಸರಿಯಾಗಿಯು ಇದೆಯಾ ಎಂದು ಸರಿ ನೋಡಲು ಉಪಯೋಗಿಸುವ ಚಿಕ್ಕ ಉಪಕರಣವೇ ನೂಲು ಗುಂಡು. 3 ಅಥವಾ 4 ಇಟ್ಟಿಗೆಗಳನ್ನು ಒಂದರ ಮೇಲೆ ಒಂದು ಇಟ್ಟು ಕಟ್ಟಿದಾಗ, ಈ ನೂಲು ಗುಂಡು ಹಿಡಿದು ಅದನ್ನು ಅದರ ಸಾಲುಗಳನ್ನು ಸರಿಯಾಗಿದೆಯಾ? ಎಂಬುದನ್ನು ಸರಿ ನೋಡುತ್ತಾರೆ. ಅದು ಸರಿಯಾಗಿಲ್ಲದಿದ್ದರೆ, ಸೊಟ್ಟಗಿರುವ ಸ್ಥಳಗಳಲ್ಲಿ ಇಟ್ಟಿಗೆಗಳನ್ನು ತಟ್ಟಿ ನೇರವಾಗಿಟ್ಟು, ಗೋಡೆಯನ್ನು ಸರಿಯಾಗಿ ಇರುವುದನ್ನು ಧೃಡಪಡಿಸುತ್ತಾರೆ.

ನಮಗೆ ನಮ್ಮ ಆತ್ಮೀಯ ಜೀವನವನ್ನು ಸತ್ಯವೇದದಲ್ಲಿ ಒಂದು ಕಟ್ಟಡಕ್ಕೆ ಹೋಲಿಸಲಾಗಿದೆ (ಎಫೆಸ.2:19-12) ಈ ಕಟ್ಟಡವು ಸರಿಯಾಗಿ ಕಟ್ಟಲ್ಪಡಲು ಒಂದು ನೂಲು ಗುಂಡು ಅಗತ್ಯ. ದೇವರು ನಮಗೆ ಕೊಟ್ಟ ಸತ್ಯವೇದವೇ ಆ ನೂಲು ಗುಂಡು. ಮನುಷ್ಯನಾಗಿ ಬರೀ ಕಣ್ಣಿನಿಂದ ಗೋಡೆಯನ್ನು ಕಾಣುವಾಗ ಅದು ನಮಗೆ ಸರಿಯಾಗಿಯೇ ಇರುತ್ತದೆ, ಆದರೆ ನೂಲು ಗುಂಡು ಅದರ ಕೊರತೆಯನ್ನು ತೋರಿಸುತ್ತದೆ. ಅದರಂತೆಯೇ ನಾವು ಮಾಡುವ ಕಾರ್ಯಗಳು, ಯೋಜನೆ ಹಾಕುವ ಕಾರ್ಯಗಳು ನಮಗೆ ಸರಿಯಾಗಿ ಕಂಡರೂ, ದೇವರ ವಾಕ್ಯದೊಂದಿಗೆ ಹೋಲಿಸಿ ನೋಡುವಾಗಲೇ ನಮ್ಮ ಕೊರತೆಗಳನ್ನು ಕಂಡುಕೊಳ್ಳಲು ಸಾಧ್ಯ.ಆದ್ದರಿಂದ ಈ ಇಸ್ರಾಯೇಲ್ ಜನರ ಜೀವನವನ್ನು ಕರ್ತನು ನೂಲು ಗುಂಡಿನಿಂದ ಶೋಧಿಸಿ ನೋಡುತ್ತಾರೆ. ಏಕೆಂದರೆ ಈ ನೂಲು ಗುಂಡು ಸುಳ್ಳು ಹೇಳುವುದಿಲ್ಲ. ಇಸ್ರಾಯೇಲ್ ಜನರು, ತಪ್ಪಿಹೋದ ಚಿಕ್ಕ ಚಿಕ್ಕ ಕಾರ್ಯಗಳನ್ನು ತೋರಿಸಿಕೊಟ್ಟಿತು. ಅವರ ತಪ್ಪುಗಳು ಕರ್ತನ ನೋಟಕ್ಕೆ ವಿರೋಧವಾಗಿ ದುಷ್ಟತನದಿಂದ ತುಂಬಿ, ಅವರ ಆಜ್ಞೆಗಳಿಗೂ ಧರ್ಮಶಾಸ್ತ್ರಕ್ಕೂ ವಿರೋಧವಾಗಿತ್ತು. ಆದ್ದರಿಂದ, ಕರ್ತನು ಇಸ್ರಾಯೇಲ್ ಜನರನ್ನು ಸೆರೆಹಿಡಿದುಕೊಂಡು ಹೋಗಲು ಒಪ್ಪಿಸಿ ಕೊಡುವುದನ್ನು ನಾವು ಇಂದಿನ ಸತ್ಯವೇದ ಭಾಗದಲ್ಲಿ ಓದುತ್ತೇವೆ.

ಪ್ರಿಯರೇ! ನೂಲು ಗುಂಡಾದ ಸತ್ಯವೇದವನ್ನು ಪ್ರತಿದಿನವೂ ಓದೋಣ. ಸರಿ ಮಾಡಿಕೊಳ್ಳಬೇಕಾದ ಕಾರ್ಯಗಳನ್ನು ಸರಿಮಾಡಿಕೊಂಡರೇನೆ ನಿಮ್ಮ ಜೀವನ ಎಂಬ ಕಟ್ಟಡವು ಸರಿಯಾಗಿ ಕರ್ತನಿಗೆ ಮೆಚ್ಚಿಕೆ ಯಾಗಿರುತ್ತದೆ. ಸರಿ ಮಾಡಿಕೊಳ್ಳದಿದ್ದರೆ ನಿಮ್ಮ ಜೀವನ ದೇವರ ದೃಷ್ಟಿಯಲ್ಲಿ ಸೊಟ್ಟಗೆ ಇರುತ್ತದೆ. ದೇವರ ದಂಡನೆಗೆ ಗುರಿಯಾಗುತ್ತೇವೆ. ನೂಲು ಗುಂಡಿನಿಂದ ಶೋಧಿಸಿ ನೋಡುವಾಗ ನಿನ್ನ ಜೀವನದ ಪರಿಸ್ಥಿತಿ ಏನು? ಯೋಚಿಸಿ ನೋಡೋಣ! ಸರಿಪಡಿಸಿಕೊಳ್ಳೋಣ.
-    Mrs. ಎಸ್ತರ್ ಗಾಂಧಿರಾಜನ್

ಪ್ರಾರ್ಥನಾ ಅಂಶ:-
ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ, ಕಾಣಿಕೆ ಗಳಿಂದಲೂ ಬೆಂಬಲಿಸುತ್ತಿರುವ ಪಾಲುದಾರರನ್ನು ಅವರ ಕುಟುಂಬಗಳನ್ನು ದೇವರು ಅಪರಿಮಿತವಾಗಿ ಆಶೀರ್ವದಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)