Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 23.01.2021

ಧೈನಂದಿನ ಧ್ಯಾನ(Kannada) – 23.01.2021

ಹುಳಗಳನ್ನು ಸಾಯಿಸೋಣ

"...ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ" - 1 ಕೊರಿಂಥ 10:12

ನಾನು ಎಷ್ಟು ದೊಡ್ಡ ಮರ. ಹಲವು ವರ್ಷಗಳಿಂದ ಸಮೃದ್ಧಿಯಾಗಿ ಹಚ್ಚಹಸುರಾಗಿ ಇದ್ದೆನು. ನಾನೇ ಪಕ್ಷಿಗಳ ಗೂಡು, ಚಿಕ್ಕ ಮಕ್ಕಳು ಆಟವಾಡುವ ಮೈದಾನ, ದಾರಿಯಲ್ಲಿ ಹೋಗುವವರು ನನ್ನ ನೆರಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳವಾಗಿಯೂ ಇದ್ದೆನು. ಗಾಳಿಯೋ, ಮಳೆಯೋ, ಬಿಸಿಲೋ, ಬಿರುಗಾಳಿಯೋ ಯಾವುದೇ ಕಾಲಗಳ ಪರಿಸ್ಥಿತಿ ಗಳಲ್ಲಿಯೂ ಬಿಗಿಯಾಗಿ ನಿಂತಿದ್ದೆನು. ನಾನು ಎಲ್ಲರಿಗೂ ಸಂತೋಷ ಕೊಡುವ ಮರವಾಗಿದ್ದೆನು. ಸ್ವಲ್ಪ ದಿನಗಳು ಕಳೆಯಿತು, ನನ್ನ ಸಾಮರ್ಥ್ಯವನ್ನು ನಾನು ಕಳೆದುಕೊಂಡ ಹಾಗೆ ನನಗೆ ಅನಿಸಿತು. ಆರಂಭದಲ್ಲಿ ನಾನು ಅದನ್ನು ದೊಡ್ಡದಾಗಿ ತೆಗೆದುಕೊಳ್ಳಲಿಲ್ಲ. ಸ್ವಲ್ಪ-ಸ್ವಲ್ಪವಾಗಿ ನ್ನನ್ನ ಸಾಮರ್ಥ್ಯವನ್ನು ಕಳೆದುಕೊಂಡು ಕೆಲವು ದಿನಗಳಲ್ಲೇ ಕೆಳಗೆ ಬಿದ್ದು ಹೋದೆನು. ನಾನು ಹೇಗೆ ಬಿದ್ದೆನೆಂದು ಯೋಚಿಸಿದೆನು. ನಂತರವೇ ಅರ್ಥವಾಯಿತು ಎಲ್ಲಾ ದೊಡ್ಡ ಪರಿಸ್ಥಿತಿಗಳನ್ನೂ ಎದುರಿಸಿದ ನಾನು ಚಿಕ್ಕ ಹುಳಗಳಿಂದ ಬಿದ್ದು ಹೋದೆನೆಂದು! ನಿಮಗೂ ಆಶ್ಚರ್ಯವಾಗುತ್ತಿದೆಯಾ? ಹೌದು, ಕೆಲವು ಚಿಕ್ಕ ಚಿಕ್ಕ ಹುಳಗಳೇ ನನ್ನನ್ನು ಸವೆದುಹೋಗಿ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡಿದವು.

ಹೌದು, ಇದು ಚಿಕ್ಕ ಕಾರ್ಯವೇ ತಾನೇ ಎಂದು ನಾವು ಬಿಟ್ಟುಬಿಡುವ ಕೆಲವು ಕಾರ್ಯಗಳು ನಮ್ಮ ಆತ್ಮೀಯ ಜೀವನದ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಸತ್ಯವೇದದಲ್ಲಿ ಕೂಡ ಇಸ್ಕರಿಯೋತ ಯೂದನ ಬಗ್ಗೆ ತಿಳಿದಿದ್ದೇವೆ. ಅವನ ಪತನವು ಒಂದೇ ದಿನದಲ್ಲಿ ಉಂಟಾದದ್ದಲ್ಲ. ಹಣದಾಸೆ ಎಂಬ ಹುಳ ಅವನನ್ನು ಸ್ವಲ್ಪ-ಸ್ವಲ್ಪವಾಗಿ ಕೆಳಗೆ ಬೀಳುವಂತೆ ತಳ್ಳಿಬಿಟ್ಟಿತು. ಕೊನೆಯಲ್ಲಿ ಸೈತಾನನು ಅವನನ್ನು ಸಂಪೂರ್ಣವಾಗಿ ಆವರಿಸಿ ಬಿಟ್ಟನು. ಕಾರಣ, ಆರಂಭದಲ್ಲಿ ಸರಿಪಡಿಸಿಕೊಳ್ಳದ ಕಾರ್ಯವೇ! ಕೊನೆಯಲ್ಲಿ ದೋಷವಿಲ್ಲದ ರಕ್ತವನ್ನು ತೋರಿಸಿಕೊಟ್ಟೆನೇ ಎಂದು ಅವನ ಮನಸ್ಸಾಕ್ಷಿ ಅವನ ಮೇಲೆ ಅಪರಾಧ ಹೊರಿಸಿ ಕೊಂದು ಹಾಕಿತು.

ಹೌದು, ಪ್ರಿಯರೇ! ಆ ಮರವು ಹುಳಗಳು ಕಚ್ಚುತ್ತಿರುವುದನ್ನು ತಡೆಯಲಾಗದೆ ಇದ್ದಿರಬಹುದು. ಆದರೆ ನಾವು ದೇವರನ್ನು ಅರಿತಿರುವವರು, ವಾಕ್ಯವು ಕೊಡುವ ಬಿಡುಗಡೆಯನ್ನು ತಿಳಿದಿರುವವರು. ಆದಾಗ್ಯೂ ಇದು ನನ್ನ ಚಿಕ್ಕ ಬಲಹೀನತೆ ತಾನೇ ಆದ್ದರಿಂದ ದೇವರು ಇದರ ಬಗ್ಗೆ  ಏನೂ ಹೇಳುವುದಿಲ್ಲ ಎಂದು ನೆಪ ಹೇಳುವವರಾಗಿ ಇರಬಾರದು. ನಾವು ಅಲಕ್ಷ್ಯ ಮಾಡುವ ಚಿಕ್ಕ ಕಾರ್ಯಗಳೇ ದೊಡ್ಡ ಆತ್ಮೀಯ ನಾಶನವನ್ನು ತರುತ್ತದೆ. ನಮ್ಮನ್ನು ಬೀಳಿಸಲು ನೆನೆಸುವ ಆ ಚಿಕ್ಕ ಹುಳಗಳನ್ನು ಸಾಯಿಸೋಣ. ದೇವರ ಬಲದೊಂದಿಗೆ ಅವರಲ್ಲಿ ನೆಲೆಗೊಳ್ಳೋಣ, ಸಾಕ್ಷಿಯಾಗಿ ಜೀವಿಸೋಣ.
-    Bro. ಪಾಲ್ ಜೆಬಸ್ಟಿನ್

ಪ್ರಾರ್ಥನಾ ಅಂಶ:-
ಮೀಡಿಯಾ ಸೇವೆಗಳಿಗೆ ಇನ್ನೂ ಅನೇಕ equipments ಅಗತ್ಯವಾಗಿವೆ. ಸಹಾಯ ಮಾಡುವ ಹೃದಯಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)