Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.01.2021

ಧೈನಂದಿನ ಧ್ಯಾನ(Kannada) – 21.01.2021

ಮೋಶೆಯ ಕೋಲು

"ಯೆಹೋವನು ಅವನನ್ನು - ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು. ಅವನು - ಇದು ಕೋಲು ಅಂದನು..." - ವಿಮೋಚನ ಕಾಂಡ 4:2

ಕರ್ತನು ಮೋಶೆಯ ಜೀವನದಲ್ಲಿ ಬಂದಾಗ ಒಂದು ಆಶ್ಚರ್ಯವಾದ ಪ್ರಶ್ನೆಯೊಂದಿಗೆ ಬಂದರು. ನಿನ್ನ ಕೈಯಲ್ಲಿರುವುದು ಏನು? ಎಂದು ಕೇಳಿದರು.

ಇದೇ ಪ್ರಶ್ನೆಯನ್ನು ಒಂದು ವ್ಯಕ್ತಿಯನ್ನು ನೋಡಿ ದೇವರು ಕೇಳಿದರು. ಅದಕ್ಕೆ ಅವರು  "ನನ್ನ ಬಳಿ ಇರುವುದು ಒಂದು ಪೆನ್ನು ಮಾತ್ರವೇ, ಅದರಲ್ಲಿ ಕಲ್ವಾರಿ ಶಿಲುಬೆಯಲ್ಲಿ ನನಗಾಗಿ ಸುರಿಸಿದ ರಕ್ತವನ್ನು ತುಂಬಿಸಿಕೊಡು. ಅದು ನಿಮ್ಮ ಮಹಿಮೆಯನ್ನು, ಕಾರುಣ್ಯವನ್ನು ಬರೆಯಲಿ. ನಿಮ್ಮ ಮನೋ ದುಃಖವನ್ನು ಬರೆಯಲಿ" ಎಂದು ಹೇಳಿದರು. ಅವರು ದೇವರ ಮೂಲಕ ನೂರಾರು ಪುಸ್ತಕಗಳನ್ನು ಬರೆದು ಲಕ್ಷಾಂತರ ಜನರಿಗೆ ಆಶೀರ್ವಾದಕರವಾಗಿ ಅದನ್ನು ಉಪಯೋಗಿಸುತ್ತಿದ್ದಾರೆ. ಇಂದು ಅವರಿಲ್ಲ. ಆದರೂ ಅವರು ಬರೆದ ಪುಸ್ತಕಗಳು ಒಬ್ಬೊಬ್ಬರನ್ನು ಉಜ್ಜೀವಿಸಿ, ತಟ್ಟಿ ಎಬ್ಬಿಸಿ, ಜೀವನದಲ್ಲಿ ಹೆಚ್ಚಿಸುವಂತದ್ದಾಗಿದೆ. ಅವರು ಯಾರು ಗೊತ್ತಾ? ಅನುದಿನ ಮನ್ನ ಸ್ಥಾಪಕರು. ಗೌರವಾನ್ವಿತ ಅಯ್ಯಾ. ಸ್ಯಾಮ್ ಜೆಬದೊರೈರವರು.

ಫರೋಹನ ಅರಮನೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ಮೋಶೆಯ ಕೈಯಲ್ಲಿ, ಈಗ ಎಲ್ಲಾ ಕುರುಬರ ಕೈಗಳಲ್ಲಿ ಇರುವಂತಹ ಸಾಧಾರಣ ಕೋಲು ಇತ್ತು. ದೇವರು ಅದರ ಬಗ್ಗೆಯೇ ಪ್ರಶ್ನೆ ಎಬ್ಬಿಸಿದರು. ದೇವರಿಗೆ  ಮೋಶೆಯ ಕೈಯಲ್ಲಿ ಏನಿದೆ ಎಂಬುದು ಗೊತ್ತಿಲ್ಲವಾ! ಹಾಗೆಯೇ ಒಂದು ದಿನ ಕರ್ತನು,  "ಆದಾಮನೇ, ನೀನು ಎಲ್ಲಿದ್ದೀಯ? ಎಂದು ಕೇಳಿದರು. ಆದಾಮನು ಮರದ ಹಿಂದೆ ಬಚ್ಚಿಟ್ಟುಕೊಂಡಿರುವುದು ದೇವರಿಗೆ ಗೊತ್ತಿಲ್ಲವ ಏನು? ಕರ್ತನು ಪ್ರಶ್ನೆಗಳನ್ನು ಕೇಳುವಾಗೆಲ್ಲ ನಮ್ಮನ್ನು ಯೋಚಿಸುವಂತೆ ತಟ್ಟಿ  ಎಬ್ಬಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಮೋಶೆಯ ಕೈಯಲ್ಲಿ ಕೋಲು ಇತ್ತು, ದಾವೀದನ ಕೈಯಲ್ಲಿ ವೀಣೆ ಮತ್ತು ಕಲ್ಲುಗಳುಇತ್ತು. ಗಿದ್ಯೋನನ ಕೈಯಲ್ಲಿ ಮಡಿಕೆ ಮತ್ತು ಕಹಳೆ ಇತ್ತು. ಸಂಸೋನನ ಕೈಯಲ್ಲಿ ಕತ್ತೆಯ ದವಡೆಯ ಎಲುಬುಗಳು ಇದ್ದವು. ಯೇಸುವಿನ ಪ್ರಸಂಗಗಳನ್ನು ಕೇಳಲು ಬಂದ ಚಿಕ್ಕ ಹುಡುಗನ ಕೈಯಲ್ಲಿ 5 ರೊಟ್ಟಿ 2 ಮೀನುಗಳು ಇದ್ದವು, ಬಡ ವಿಧವೆಯ ಕೈಯಲ್ಲಿ ಎರಡು ಕಾಸು ಇತ್ತು, ಅವರ ಕೈಗಳಲ್ಲಿದ್ದದ್ದು ಚಿಕ್ಕ ಕಾರ್ಯವೇ ಆದರೂ ಕರ್ತನಿಗಾಗಿ ಸಮರ್ಪಿಸಿದರು ಕರ್ತನು ಅದರಿಂದ ಬಲವಾದ ಅದ್ಭುತಗಳನ್ನು ಮಾಡಿದರು. ಒಂದು ವೇಳೆ ನಿನ್ನ ಬಳಿ ಚೆನ್ನಾಗಿ ಹಾಡು ಹಾಡುವ ಪ್ರತಿಭೆ ಇರಬಹುದು, ಚೆನ್ನಾಗಿ ಬರೆಯುವ ಪ್ರತಿಭೆ ಇರಬಹುದು, ನಂಬಿಗಸ್ಥನಾಗಿ ಕಠಿಣವಾಗಿ ದುಡಿಯುವಂತಹ ಪ್ರತಿಭೆ ಇರಬಹುದು. ಇವುಗಳನ್ನೆಲ್ಲಾ ನೀವು ದೇವರಿಗಾಗಿ ಸಮರ್ಪಿಸಿಕೊಳ್ಳುತ್ತೀರ ಅದನ್ನು ದೇವರು ಆಶೀರ್ವದಿಸಿ ಸಾವಿರಾರು, ಲಕ್ಷಾಂತರ ಜನರಿಗಾಗಿ ಉಪಯೋಗಿಸುತ್ತಾರೆ. ನಿಮ್ಮ ಕೈಯಲ್ಲಿರುವುದನ್ನು ಅವರಿಗೆ ಕೊಟ್ಟರೇನೆ ಸಾಕು!
-    S.P. ಸಂದನ ಪಾಂಡಿ

ಪ್ರಾರ್ಥನಾ ಅಂಶ:-
ಆಂಧ್ರ ಫೀಲ್ಡ್ ನಲ್ಲಿ ರೇಗಾ  ಪುಣ್ಯಗಿರಿ ಬೆಟ್ಟ ಗ್ರಾಮದಲ್ಲಿ ಕಟ್ಟುತ್ತಿರುವ ದೇವರ ಆಲಯವನ್ನು ಬೇಗನೆ ಕಟ್ಟಿ ಮುಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)