Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.01.2021

ಧೈನಂದಿನ ಧ್ಯಾನ(Kannada) – 14.01.2021

ನಂಬಿಕೆಯ ಪರೀಕ್ಷೆ

"...ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು” - 1 ಪೇತ್ರನು 1:7

1831 ನೇ ವರ್ಷ ಮಾರ್ಚ್ 7 ನೇ ತಾರೀಖು ಜಾರ್ಜ್ ಮುಲ್ಲರ್ ಜೀವನದಲ್ಲಿ ಶೋಧನೆಯ ದಿನ! ಅಂದು ಅವರ ಆಶ್ರಮಕ್ಕೆ ಒಂದು ದೊಡ್ಡ ಮುಖ್ಯವಾದ ಅವಶ್ಯಕತೆ ಇತ್ತು. ಅವಶ್ಯಕತೆಯ ಬಗ್ಗೆ ಚಿಂತೆಯು ಅವರ ಹೃದಯವನ್ನು ತುಂಬಿಕೊಂಡಿತು. ಆ ಅಂತರದಲ್ಲಿ ನುಗ್ಗಿದ ಸೈತಾನನು ಜಾರ್ಜ್ ಮುಲ್ಲರ್ ನನ್ನು ನೋಡಿ, "ಈಗ ನೀನು ಏನು ಮಾಡುತ್ತೀಯ, ಇದು ಹೇಗೆ ಸಾಧ್ಯ?" ಎಂದು ಗೇಲಿಯಾಗಿ ಕೇಳಿದನಂತೆ. ಆಗ ಅವರು ಎಲ್ಲಾ ಚಿಂತೆಯನ್ನು ದೇವರ ಸನ್ನಿಧಿಯಲ್ಲಿ ಇಟ್ಟುಬಿಟ್ಟು ದೇವರು ನನ್ನ ಅವಶ್ಯಕತೆಯನ್ನು ಸಂಧಿಸುತ್ತಾರೆ ಎಂದು ನಂಬಿಕೆಯಿಂದ ಪ್ರಾರ್ಥನೆಯನ್ನು ಮುಗಿಸಿ ಎದ್ದೇಳಿದರು. ಮನಸ್ಸಿನಲ್ಲಿ ದೊಡ್ಡ ಸಮಾಧಾನವನ್ನು ಗ್ರಹಿಸಿದರು. ಅಂದು ಬೆಳಗಾಗುವುದಕ್ಕಿಂತ ಮುಂಚೆ ದೇವರಿಂದ ಪ್ರೇರೇಪಿಸಲ್ಪಟ್ಟ ಒಬ್ಬ ಸಾಹುಕಾರ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಬಂದು ಜಾರ್ಜ್ ಮುಲ್ಲರ್ ಗೆ ಕೊಟ್ಟರು. ಅವರ ಅವಶ್ಯಕತೆಯನ್ನು ಸಂಧಿಸಲು ಅದು ಸಾಕಾಗುವಷ್ಟಿತ್ತು. ಇದು ಹೇಗೆ ಸಾಧ್ಯ ಎಂದು ಸವಾಲು ಹಾಕಿದ ಸೈತಾನನನ್ನು ಎತ್ತಿ ಬಿಸಾಡಲು ಅವರು ಪ್ರಯೋಗಿಸಿದ ಆಯುಧ ನಂಬಿಕೆಯೇ!

ಸತ್ಯವೇದದಲ್ಲಿ ನಾವು ನೋಡುವಾಗ, ಊಚ್ ದೇಶದಲ್ಲಿ ಜೀವಿಸಿದ ಯೋಬನು-ಉತ್ತಮನು, ಸನ್ಮಾರ್ಗಿಯು, ದೇವರಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆಯುವವನು ಎಂದು ದೇವರಿಂದ ಒಳ್ಳೆಯ ಸಾಕ್ಷಿಯನ್ನು ಹೊಂದಿದವನು. ಆ ಯೋಬನ ನಂಬಿಕೆಯನ್ನು ಪರೀಕ್ಷಿಸಲು ಸೈತಾನನು ಅವನ ಮಕ್ಕಳು, ಆಸ್ತಿ, ಕುರಿ ದನಗಳು, ಕತ್ತೆಗಳು ಎಲ್ಲವನ್ನು ತೆಗೆದುಕೊಂಡನು. ಈ ಸ್ಥಿತಿಯಲ್ಲಿಯೂ ಯೋಬನು ದೇವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಬಿಡದೇ  ದೇವರೇ ಕೊಟ್ಟರು, ದೇವರೇ ತೆಗೆದುಕೊಂಡರು, ದೇವರ ನಾಮಕ್ಕೆ ಸ್ತೋತ್ರವಾಗಲಿ ಎಂದು ಹೇಳಿ ತನ್ನ ನಂಬಿಕೆಯನ್ನು ಅರಿಕೆಮಾಡಿದರು. ಇದರ ಪರಿಣಾಮವೇ ಕಳೆದುಕೊಂಡ ಎಲ್ಲವನ್ನು ಯೋಬನು ಎರಡರಷ್ಟು ಹೊಂದಿಕೊಂಡನು.

ಪ್ರಿಯರೇ! ನಮ್ಮ ಜೀವನದಲ್ಲಿಯೂ ಸೈತಾನನು ಅನೇಕ ಸಮಯಗಳಲ್ಲಿ ಹಲವು ವಿಧವಾದ ಶೋಧನೆಗಳನ್ನು ಕೊಡುವಾಗ ಆ  ಶೋಧನೆಗಳನ್ನು ನಾವು ಹೇಗೆ ಜಯಿಸುತ್ತಿದ್ದೇವೆ? ನಂಬಿಕೆಯ ಮಾತುಗಳಿಂದ ಜಯಿಸುತ್ತಿದ್ದೇವಾ? ಅಥವಾ ಸೋತು ಹೋಗುತ್ತಿದ್ದೇವಾ? ನಮ್ಮ ಸಮಸ್ಯೆ ಎಷ್ಟು ಎಂದು ದೇವರ ಬಳಿ ಹೇಳುವುದಕ್ಕಿಂತ, ನಮ್ಮ ದೇವರು ಎಷ್ಟೊಂದು ದೊಡ್ಡವರು ಎಂದು ಸಮಸ್ಯೆಯ ಬಳಿ ಹೇಳಿರಿ. ಅಬ್ರಹಾಮನ ಹಾಗೆ, ಯೋಬನ ಹಾಗೆ, ಜಾರ್ಜ್ ಮುಲ್ಲರ್ ಹಾಗೆ ನಂಬಿಕೆಯ ವೀರರಾಗಿರಿ. ನಂಬಿಕೆಯಿಂದ ಜಯ ಹೊಂದೋಣ. ಆಗ ಸಮಸ್ಯೆ ಹಿಂದಿರುಗಿ ಓಡಿ ಹೋಗುತ್ತದೆ.
-    Mrs. ಎಸ್ತರ್ ಗಾಂಧಿರಾಜನ್

ಪ್ರಾರ್ಥನಾ ಅಂಶ:-
ನಮ್ಮ ಸೇವೆಯ ಮೂಲಕ ಸಂಧಿಸಲ್ಪಟ್ಟ ಕಿರಿಯರು ಮತ್ತು ಯೌವ್ವನಸ್ಥರು ಈ ಹೊಸವರ್ಷದಲ್ಲಿ ದೇವರಿಗಾಗಿ ತೆಗೆದುಕೊಂಡ ತೀರ್ಮಾನದಲ್ಲಿ ತಮ್ಮನ್ನು ನವೀಕರಿಸಿಕೊಳ್ಳುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)