Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.01.2021

ಧೈನಂದಿನ ಧ್ಯಾನ(Kannada) – 13.01.2021

Update ಆಗಿಬಿಟ್ಟಿದ್ದೀರಾ??

"...ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ" - ರೋಮಾ 16:19

ನಾವು ಜೀವಿಸುತ್ತಿರುವ ಈ ಕಾಲಘಟ್ಟದಲ್ಲಿ "ಟ್ರೆಂಡ್ಸ್"ಎಂಬ ಮಾತು ಬಹಳ ಟ್ರೆಂಡ್ ಆಗಿ ಬಿಟ್ಟಿದೆ. ಒಂದು ಬಾರಿ ನಾನು ಕೊಡೆಕೆನಲ್ ಗೆ  ಹೋಗಿದ್ದೆನು. ಅಲ್ಲಿ ಒಬ್ಬರು ಐಸ್ ಗಡ್ಡೆಗಳಿಂದ ತುಂಬಿದ ಐಸ್ ಬಕೆಟ್ ತೆಗೆದುಕೊಂಡು ಚಳಿಯಲ್ಲಿ ನಡುಗುತ್ತಿದ್ದರು. ಅದನ್ನು ಅವರ ಸ್ನೇಹಿತರು ಉತ್ಸಾಹ ಪಡಿಸುತ್ತಾ ವಿಡಿಯೋ ತೆಗೆಯುತ್ತಿದ್ದರು. ಏನೆಂದು ವಿಚಾರಿಸುವಾಗ ಅದು "ಐಸ್ ಬಕೆಟ್ ಚಾಲೆಂಜ್" ಎಂದೂ ಈಗ ಹೀಗೆ ಮಾಡುವುದೇ ಟ್ರೆಂಡ್ ಎಂದೂ ಹೇಳಿ ಬಿಟ್ಟು "ಇದು ಕೂಡ ಗೊತ್ತಿಲ್ಲವೇ"ಎಂಬಂತೆ ಕೇವಲವಾಗಿ ಮಾತಾಡಿದರು.

ಆದರೆ ನಿಜವೇನೆಂದರೆ Ice bucket challenge ಎಂಬುದು ಒಂದು ವಿಧವಾದ ನರಗಳ ರೋಗವನ್ನು ಕುರಿತ ಎಚ್ಚರಿಕೆಯನ್ನು ಮೂಡಿಸುವುದು, ಆ ರೋಗದಿಂದ ಬಾಧಿಸಲ್ಪಟ್ಟವರಿಗೆ ದಾನ ಮಾಡುವುದಕ್ಕೆ 6 ವರ್ಷಗಳ ಮುಂಚೆ ಮಾಡುತ್ತಿದ್ದ ಒಂದು ಕಾರ್ಯ. ಆದರೆ ಇದು ಈಗಿನ ಕಾಲದಲ್ಲಿ ಜಾಲಿಯಾದ ಒಂದು ಆಟವಾಗಿ ಟ್ರೆಂಡ್ ಆಗಿ ಬಿಟ್ಟಿದೆ. ಒಂದು ವಿಷಯವನ್ನು ಯಾಕೆ ಯಾವುದಕ್ಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಕೂಡ ಯೋಚಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ ಇಂದಿನ ಯುವಕರು. ಅವರ ದೃಷ್ಟಿಗೆ ಅವರು ಎಲ್ಲವನ್ನೂ ತಿಳಿದು updated ಆಗಿಬಿಟ್ಟಿರುವ ಜ್ಞಾನಿಗಳು. ಅದನ್ನು ತಿಳಿಯದ ಮೂಢರು. "ಇದು ಕೂಡ ಗೊತ್ತಿಲ್ಲವಾ?"ಎಂಬ ಮಾತು ನಮ್ಮನ್ನು ಬಹಳ ಸಮಯಗಳಲ್ಲಿ ನೋಯಿಸುತ್ತದೆ. ಆದರೆ ನನ್ನ ಪ್ರೀತಿಯ ಯೌವ್ವನ ತಮ್ಮ-ತಂಗಿಯರೇ, ನಾವು ಲೋಕದೊಂದಿಗೆ ಅಂಟಿಕೊಂಡು ಜೀವಿಸಲು ಕರೆಯಲ್ಪಟ್ಟಿಲ್ಲ, ಬದಲಾಗಿ ಒಳ್ಳೇದಕ್ಕೆ ಜ್ಞಾನಿಗಳು, ಕೆಟ್ಟದ್ದಕ್ಕೆ ಕಳಂಕವಿಲ್ಲದವರೂ ಆಗಿರಬೇಕೆಂದು ಸತ್ಯವೇದವು ನಮಗೆ ಆಲೋಚನೆ ಹೇಳುತ್ತಿದೆ. ಆದಾಗ್ಯೂ ದೇವರ ಮಕ್ಕಳಾದ ನೀವು ಕೆಲವು ಸಮಯಗಳಲ್ಲಿ ಅನೇಕ ಕಾರ್ಯಗಳ ಬಗ್ಗೆ ನಾವು update ಆಗಿಲ್ಲವೋ ಎಂದು ಚಿಂತಿಸಬಹುದು. ಪರಿಶುದ್ಧಾತ್ಮನ ಸಹಾಯದೊಂದಿಗೆ ಸತ್ಯವೇದವನ್ನು ಹಗಲು-ರಾತ್ರಿ ಧ್ಯಾನಿಸುವ ವ್ಯಕ್ತಿಗಳಾಗಿ ನೀವು ಇರುವುದಾದರೆ ಈ ಕಾಲದಲ್ಲಿ ಮಾತ್ರವಲ್ಲ ಜಗದುತ್ಪತ್ತಿನಿಂದ ಕೊನೆಯವರೆಗೂ ಏನು ನಡೆಯುತ್ತದೆ ಎಂದು ತಿಳಿದ ನಿಜ ಜ್ಞಾನಿಗಳು ಕೂಡಾ ನೀವೇನೆ.

ಈ ಲೋಕವು ಕೆಟ್ಟದ್ದನ್ನು ಬಹಳ ವೇಗವಾಗಿ ಹಿಂಬಾಲಿಸುತ್ತದೆ.  "ಮಾಡರ್ನ್",  "ಸ್ಟೈಲ್",  " ಟ್ರೆಂಡ್",  "ವಸ್ತ್ರ", ಮಾತು ಎಂದು ಎಲ್ಲದರಲ್ಲಿಯೂ ಹೊಸತನವನ್ನು ಸೇರಿಸಿದೆ. ಪಾಪದ ಕಾರ್ಯಗಳೆಲ್ಲಾ ಈಗ fashion ಆಗಿಬಿಟ್ಟಿತು. ನಾವು ಈ ಲೋಕದ ಕಾರ್ಯಗಳಿಂದಲ್ಲ. ಒಳ್ಳೆಯ, ದೈವ ಭಕ್ತಿಯುಳ್ಳ, ದೇವರನ್ನು ಮೆಚ್ಚಿಸುವ ಕಾರ್ಯಗಳಲ್ಲಿ ಜ್ಞಾನಿಗಳಾಗಿರೋಣ. ಈ 2021 ನೇ ವರ್ಷದಲ್ಲಿ ನಶಿಸಿಹೋಗುತ್ತಿರುವ ಲೋಕಕ್ಕಲ್ಲ ಎಂದಿಗೂ updated ಆಗದೇ ಇರುವ ಅಳಿದುಹೋಗದ ದೇವರ ಮಾತಿಗೆ ಮೊದಲ ಸ್ಥಾನ ಕೊಡೋಣ.
-    Mrs.ಜೆಸಿ ಅಲೆಕ್ಸ್

ಪ್ರಾರ್ಥನಾ ಅಂಶ:-
ಒರಿಸ್ಸಾದಲ್ಲಿ ಹೊಸದಾಗಿ ಕಟ್ಟಿರುವಂತಹ ಆಲಯದಲ್ಲಿ ಇರುವ ವಿಶ್ವಾಸಿಗಳ ಆತ್ಮೀಕ ಜೀವನಕ್ಕಾಗಿ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)