Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 09.01.2021

ಧೈನಂದಿನ ಧ್ಯಾನ(Kannada) – 09.01.2021

ಬದಲಾಗುವ ಮನುಷ್ಯ

"ಮಾನವಮಾತ್ರದವರಲ್ಲಿ ಭರವಸವಿಟ್ಟು... ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ತನು…” - ಯೆರೆಮಿಯ  17:5

ಆರ್ಥಿಕವಾಗಿ ಬಹಳ ಕಷ್ಟಪಡುತ್ತಿದ್ದ ತಂಗಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದಳು ಅಕ್ಕ. ತಂಗಿಯ ಮಗಳಿಗೆ ವಿವಾಹ ನಿಶ್ಚಯವಾದರೆ ಒಂದು ಲಕ್ಷ ಹಣವನ್ನು ಬಡ್ಡಿ ಇಲ್ಲದೆ ಕೊಡುತ್ತೇನೆ ಮತ್ತು ಅದನ್ನು ಯಾವಾಗ ಬೇಕಾದರೂ ತಿರುಗಿಸಿ ಕೊಡು ಎಂದು ಹೇಳಿದಳು. ಅದ್ಭುತವಾಗಿ ಒಳ್ಳೆಯ ಕಡೆ ಮದುಮಗನು ದೊರೆತನು. ವಿವಾಹವೂ ನಿಶ್ಚಯ ಮಾಡಲಾಯಿತು. ಬೆಟ್ಟದಂತೆ ನಂಬಿದ್ದ ಅಕ್ಕನ ಬಳಿ ಸಹಾಯವನ್ನು ಎದುರು ನೋಡಿ ಹೋದಳು ತಂಗಿ.  "ನಾನು ಆಗಿದ್ದ ಪರಿಸ್ಥಿತಿಯಲ್ಲಿ ಹೇಳಿದೆನು. ಈಗ ಇಷ್ಟೊಂದು ಹಣ ಕೊಡುವ ಮಟ್ಟಿಗೆ ನನ್ನಲ್ಲಿ ಹಣವಿಲ್ಲ" ಎಂದು ಕೈಬಿಟ್ಟಳು. ಕಾರಣಗಳು ಹಲವು ಹೇಳಿದರೂ ತಂಗಿಯ ಮನದಲ್ಲಿ ದೊಡ್ಡ ನಿರಾಶೆ. ಕೊರೋನಾ ದಿನಗಳಾಗಿದ್ದದರಿಂದ  ಅಧಿಕವಾಗಿ ಜನ ಕೂಡದೆ ಬಹಳ ಸರಳವಾಗಿ ವಿವಾಹ ಮಾಡಿ ಮುಗಿಸಿದರು. ಹೌದು, ಮನುಷ್ಯನ ಪ್ರೀತಿ, ಮನಸ್ಸು, ಚಿಂತೆ ಕೂಡ ಒಂದು ದಿನ ಬದಲಾಗುತ್ತದೆ. ಹೀಗೆ ಸತ್ಯವೇದದಲ್ಲಿ ಒಂದು ಗಂಟೆಯೊಳಗೆ ಮಾರ್ಪಟ್ಟ ಮನುಷ್ಯರನ್ನು ಕುರಿತೂ ಬರೆಯಲ್ಪಟ್ಟಿದೆ. ಯಾರವರು ನೋಡೋಣವಾ?

ಪೌಲನ ಹಡುಗು ಪ್ರಯಾಣದಲ್ಲಿ, ಸಂಭವಿಸಿದ ಅಸಾಧಾರಣವಾದ ಪರಿಸ್ಥಿತಿಯಿಂದ, ಅನೇಕ ರಾತ್ರಿಗಳು ನಿದ್ದೆ ಮಾಡದೆ, ಹಸಿವಿನಿಂದ ಬಳಲಿ ಹೋಗಿ ಹಡಗಿನಲ್ಲಿದ್ದ ಎಲ್ಲರೂ ಮಿಲೇತ ದ್ವೀಪಕ್ಕೆ ಬಂದರು. ಹಿಂದೆ ಮುಂದೆ ತಿಳಿಯದ ಆ ದ್ವೀಪದ ಜನರು ಅವರಿಗೆ ತೋರಿಸಿದ ಪ್ರೀತಿ ಅಷ್ಟಿಷ್ಟಲ್ಲ. ಆ ಸಮಯದಲ್ಲಿ ಸುರಿದ ಮಳೆ, ಚಳಿಯ ನಿಮಿತ್ತವಾಗಿ ಅವರು ಬೆಂಕಿ ಹಚ್ಚಿ ಎಲ್ಲರನ್ನೂ ಹತ್ತಿರ ಸೇರಿಸಿಕೊಂಡರು. ಪೌಲನು ಮತ್ತು ಸೀಲ ಸೌದೆಗಳನ್ನು ಬಾಚಿಕೊಂಡು ಬೆಂಕಿಯಲ್ಲಿ ಹಾಕಿದಾಗ ಒಂದು ದೊಡ್ಡ ಹಾವು ಬೆಂಕಿಯಿಂದ ಹೊರಬಂದು ಅವನ ಕೈಯನ್ನು ಕಚ್ಚಿತು. ಕೂಡಲೇ ಆ ಜನರು ಇವನು ಕೊಲೆಪಾತಕನು, ಇದಕ್ಕೆ ಸಂದೇಹವೇ ಇಲ್ಲ. ಸಮುದ್ರದಿಂದ ತಪ್ಪಿಸಿಕೊಂಡು ಬಂದರು ವಿಧಿ ಬಿಡಲಿಲ್ಲ ಎಂದರು. ಆದರೆ ಪೌಲನಿಗೆ ಯಾವುದೇ ಹಾನಿ ಸಂಭವಿಸದೇ ಇರುವುದನ್ನು ಕಂಡಾಗ ಇವನು ದೇವರೆಂದು ಹೇಳಿಕೊಂಡರು. ನೋಡಿರಿ ಇದುವೇ ಮನುಷ್ಯನ ನೈಸರ್ಗಿಕ ಸ್ವಭಾವ. ತಲೆ ಮೇಲೆ ಇಟ್ಟುಕೊಂಡು ನಮ್ಮನ್ನು ಹೊಗಳುವ ಜನರೇ, ಕಾಲಿನ ಕೆಳಗೆ ಹಾಕಿ ತುಳಿದರೂ ಆಶ್ಚರ್ಯವೇನಿಲ್ಲ.

ಪ್ರಿಯರೇ! ಮನುಷ್ಯನು ಮನಸ್ಸನ್ನು ಬದಲಾಯಿಸುತ್ತಾನೆ. ಆದ್ದರಿಂದ ಮನುಷ್ಯನನ್ನು ನಂಬಿ ಎಂದಿಗೂ ದೇವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಬಿಡಬೇಡಿರಿ. ಮನುಷ್ಯನು ನಮ್ಮನ್ನು ಉಪಯೋಗಿಸಿಕೊಂಡು ನಂತರ ಹೊಡೆದುಹಾಕುತ್ತಾನೆ. ಆದರೆ ದೇವರು ನಮ್ಮನ್ನು ಹೊಡೆದು ಹಾಕಿ ನಂತರ ಉಪಯೋಗಿಸುತ್ತಾರೆ. ಮನುಷ್ಯರು ತನಗೆ ಏನಾದರೂ ಲಾಭವಿದೆಯಾ  ಎಂದು ಯೋಚಿಸಿ ನಮ್ಮೊಂದಿಗೆ ಸ್ನೇಹ ಬೆಳೆಸುತ್ತಾರೆ. ಆದರೆ ದೇವರು ನಮಗೆ ಉಪಕಾರ ಮಾಡುವುದಕ್ಕಾಗಿಯೇ ನಮ್ಮನ್ನು ಹುಡುಕಿ ಬರುತ್ತಾರೆ. ಅರ್ಹತೆಯುಳ್ಳವನನ್ನು ಮನುಷ್ಯನು ಹುಡುಕಿ ಹೋಗುತ್ತಾನೆ. ಆದರೆ ದೇವರು ಅರ್ಹತೆ ಇಲ್ಲದವರನ್ನು ಹುಡುಕಿ ಹೋಗಿ, ತಮ್ಮ ಕೃಪೆ ತೋರಿಸಿ ಅವನನ್ನು ಅರ್ಹತೆಯುಳ್ಳವನಾಗಿ ಮಾರ್ಪಡಿಸುತ್ತಾರೆ. ಪರಿಸ್ಥಿತಿಗಳು ಬದಲಾಗುವಾಗ ಮನುಷ್ಯನೂ ಬದಲಾಗುತ್ತಾನೆ. ಆದರೆ ದೇವರು ಎಂದಿಗೂ ಬದಲಾಗುವುದಿಲ್ಲ. ನೀವು ಯಾರನ್ನು ನಂಬಿ ಹೋಗುತ್ತೀರ? ಬದಲಾಗುವ ಮನುಷ್ಯರನ್ನೋ? ಅಥವಾ ಬದಲಾಗದ ದೇವರನ್ನೋ?
-    Bro. ಅರುಣ್ ಹೇಬೆಲ್

ಪ್ರಾರ್ಥನಾ ಅಂಶ:-
ಬೈಬಲ್ ಕಾಲೇಜಿನಲ್ಲಿ ಪಾಠಗಳನ್ನು ಕಲಿಸಿಕೊಡುವ ಟೀಚರ್ ಗಳನ್ನು ದೇವರು ತಮ್ಮ ವಿಶೇಷವಾದ ಪವಿತ್ರಾತ್ಮನಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)