Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.01.2021

ಧೈನಂದಿನ ಧ್ಯಾನ(Kannada) – 07.01.2021

ಒಳ್ಳೆಯ ಆಪಲ್ ತಾನೆ?

"ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು,..." - ಕೀರ್ತನೆಗಳು 51:10

ಡ್ಯಾನಿ ತನ್ನ ತಂದೆಯೊಂದಿಗೆ ಹಣ್ಣುಗಳನ್ನು ತೆಗೆದುಕೊಂಡು ಬರಲು ಹೋದನು. ಸಾಲುಸಾಲಾಗಿ ಸುಂದರವಾಗಿ, ವಿಧವಿಧವಾಗಿ, ಹಣ್ಣುಗಳು ಜೋಡಿಸಲ್ಪಟ್ಟಿದ್ದವು. ಅಪ್ಪ ಹಣ್ಣುಗಳನ್ನು ಚೆನ್ನಾಗಿ ಮುಟ್ಟಿ ನೋಡಿ, ಒಳ್ಳೆಯ ಆಪಲ್ ಗಳಾ ಎಂದು ಶೋಧಿಸಿ ಬುಟ್ಟಿಯಲ್ಲಿ ಹಾಕಿದರು. ಮನೆಗೆ ಬಂದ ನಂತರ ಅಮ್ಮ ಚೆನ್ನಾಗಿ ಆಪಲ್ ಗಳನ್ನು ತೊಳೆದು ಕುಯ್ದು ಕೊಟ್ಟರು. ಆದರೆ ಒಳಗೆ ಹಳದಿ ಬಣ್ಣದ ದೊಡ್ಡ ಹುಳವೊಂದು ಅಸಹ್ಯವಾಗಿ ಕಾಣುತ್ತಿತ್ತು. ಹುಳವನ್ನು ನೋಡಿದ ಡ್ಯಾನಿ, ತಂದೆಯ ಬಳಿ,  "ಅಪ್ಪ ನಾವು ಒಳ್ಳೆಯ ಆಪಲ್ ಗಳನ್ನೇ ತಾನೇ ತೆಗೆದುಕೊಂಡೊ. ಹುಳ ಹೇಗೆ ಒಳಗೆ ಬಂತು?"  ಎಂದು ಕೇಳಿದನು. ಅದಕ್ಕೆ ಅಪ್ಪ, "ಆಪಲ್ ಮರದಲ್ಲಿ ಹೂವಾಗಿ ಇರುವಾಗಲೇ ಹೂವಿನೊಳಗೆ ಹುಳಗಳು ಹಲವು ವಿಧವಾದ ಮೊಟ್ಟೆ ಇಡುತ್ತವೆ. ದಿನಗಳು ಕಳೆಯುತ್ತಾ ಹೂಗಳು ಕಾಯಿಯಾಗುವಾಗ ಮೊಟ್ಟೆಗಳು ಹುಳಗಳಾಗಿ ಮಾರ್ಪಟ್ಟು ಹಣ್ಣಿನೊಳಗೆ ಜೀವಿಸುತ್ತವೆ" ಎಂದು ಹೇಳಿದರು. ಡ್ಯಾನಿಗೆ ಇದು ಬಹಳ ಆಶ್ಚರ್ಯವಾಗಿತ್ತು.

ಇದರಂತೆಯೇ, ನಾವು ನಮ್ಮ ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕಿಂತ ಮುಂಚೆಯೇ ಪಾಪದಲ್ಲಿ ಗರ್ಭಧರಿಸಲ್ಪಡುತ್ತೇವೆ. ಅವುಗಳು ನಮ್ಮ ಹೃದಯವನ್ನು ಆವರಿಸಿಕೊಳ್ಳುತ್ತವೆ. ಅವುಗಳೇ ಜನ್ಮ ಸ್ವಭಾವಗಳು. ಲೋಕದಲ್ಲಿ ಹುಟ್ಟಿದ ಮೊದಲ ಮಕ್ಕಳು ಕಾಯಿನ, ಹೇಬೆಲ! ಪಾಪದ ಕಾರ್ಯಗಳನ್ನು ಕಲಿಸಿಕೊಡಲು ಲೋಕದಲ್ಲಿ ಬೇರೆ ಯಾರೂ ಇಲ್ಲ. ಆದರೆ ಯಾರೂ ಕಲಿಸಿ ಕೊಡದೇ ಕಾಯಿನನ ಅಂತರಂಗದೊಳಗೆ ಕೋಪ, ಹೊಟ್ಟೆಕಿಚ್ಚು, ದ್ವೇಷವಿತ್ತು, ಸೇಡು ತೀರಿಸಿಕೊಳ್ಳುವ ಆಲೋಚನೆ ಇತ್ತು. ಕೊಲೆ ಮಾಡುವಷ್ಟು ಉಗ್ರತೆ ಇತ್ತು. ನೋಡಿದಿರಾ? ಇವೆಲ್ಲ ಎಲ್ಲಿಂದ ಬಂತು. ಹೌದು, ಸತ್ಯವೇದವು ಹೇಳುವಂತೆ ನಾವು ಪಾಪ ಸ್ವಭಾವದಿಂದಲೇ ಹುಟ್ಟುತ್ತೇವೆ. ಇದರ ಹೊರ ನೋಟವೇ ಮಾಂಸದ ಕ್ರಿಯೆಗಳಾಗಿ ಹೊರಬರುತ್ತವೆ.

ಪ್ರಿಯರೇ! ನಮ್ಮೊಳಗಿರುವ ಜನ್ಮ ಸ್ವಭಾವಗಳನ್ನು ಜಯಿಸಿ ಆತ್ಮನುಸಾರವಾಗಿ ಜೀವಿಸುವುದೇ ಕ್ರೈಸ್ತ ಜೀವನ! ಹೌದು ತಾನೆ! ಪರಿಶುದ್ಧಾತ್ಮನ ಬಲದೊಂದಿಗೆ ಒಂದೊಂದು ದಿನವನ್ನು, ಒಂದೊಂದು ಪರಿಸ್ಥಿತಿಯನ್ನು, ಒಂದೊಂದು ಸಮಸ್ಯೆಯನ್ನು ಎದುರಿಸುವುದಾದರೆ ಖಂಡಿತ ಸಾಧ್ಯ. ಅಪೊಸ್ತಲನಾದ ಪೌಲನ ಹಾಗೆ ನಮ್ಮ ಹಳೆಯ ಮನುಷ್ಯನನ್ನು ಶಿಲುಬೆಯಲ್ಲಿ ಜಡಿದು ಬಿಟ್ಟು, ಯೇಸುವೊಂದಿಗೆ ಪುನರುತ್ಥಾನರಾದರೆ ನಾವಲ್ಲ, ಯೇಸುವೆ ನಮ್ಮೊಳಗೆ ಜೀವಿಸುತ್ತಾರೆ. ಅವರೇ ನಮಗೆ ಜಯಕರವಾದ ಕ್ರೈಸ್ತ ಜೀವನವನ್ನು ಜೀವಿಸುವುದಕ್ಕೆ ಕೃಪೆ ತೋರಿಸುತ್ತಾರೆ. ಹಲ್ಲೇಲೂಯ!
-    Mrs. ಜಾಸ್ಮಿನ್ ಸಾಮುವೇಲ್

ಪ್ರಾರ್ಥನಾ ಅಂಶ:-
ನಾವು ಹೊರ ಬಿಟ್ಟಿರುವ  "ಯೇಸುವೊಂದಿಗೆ ಇಂದು" ಎಂಬ ಒಂದು ವರ್ಷದ ಧ್ಯಾನ ಪತ್ರಿಕೆಯನ್ನು ಅನೇಕರು ತೆಗೆದುಕೊಂಡು ಓದಿ ದೇವರಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)