Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 06.01.2021

ಧೈನಂದಿನ ಧ್ಯಾನ(Kannada) – 06.01.2021

ನಿಷೇಧಿಸಿದ ಕಲ್ಲು

“ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು” - ಕೀರ್ತನೆಗಳು 118:22

ಒಂದು ದಿನ ಶಾಲೆಯಿಂದ ಬಂದ ಥಾಮಸ್ ಆಲ್ವಾ ಎಡಿಸನ್, ಕೈಯಲ್ಲಿದ್ದ ಪತ್ರವನ್ನು ತನ್ನ ತಾಯಿಯ ಬಳಿ ಮಾತ್ರವೇ ಕೊಡಬೇಕು ಎಂದು ತನ್ನ ಟೀಚರ್ ಹೇಳಿದರೆಂದು ಹೇಳಿ ತನ್ನ ತಾಯಿಗೆ ಕೊಟ್ಟನು. ಆ ಪತ್ರವನ್ನು ಆ ತಾಯಿ ಕಣ್ಣೀರಿನಿಂದ ಶಬ್ಧವಾಗಿ ತನ್ನ ಮಗನು ಕೇಳಿಸಿಕೊಳ್ಳುವಂತೆ ಓದಿದಳು.  " ನಿಮ್ಮ ಮಗನ ಜ್ಞಾನ ವಿವೇಕದ ಮುಂದೆ ನಮ್ಮ ಶಾಲೆ ಬಹಳ ಚಿಕ್ಕದು, ಅವನಿಗೆ ಕಲಿಸಲು ಜ್ಞಾನವುಳ್ಳ ಟೀಚರ್ ಗಳು ನಮ್ಮ ಬಳಿ ಇಲ್ಲ. ಆದ್ದರಿಂದ ನೀವೇ ನಿಮ್ಮ ಮಗನಿಗೆ ಕಲಿಸುವುದು ಒಳ್ಳೆಯದು"  ಎಂದು ಬರೆದಿರುವುದನ್ನು ಓದಿದರು. ಮನೆಯಲ್ಲಿ ಪಾಠಗಳನ್ನು ಕಲಿಸಿಕೊಟ್ಟರು. ಹಲವು ವರ್ಷಗಳ ನಂತರ ಎಡಿಸನ್ ನ ತಾಯಿಯವರು ಮರಣ ಹೊಂದಿದರು. ಎಡಿಸನ್ ಆ ಶತಮಾನದಲ್ಲೇ ಶ್ರೇಷ್ಠವಾದ ಸಂಶೋಧನಾಕಾರರಾಗಿದ್ದರು. ಹಲವು ವರ್ಷಗಳು ಕಳೆದವು, ಹಳೆಯ ಸಾಮಾನುಗಳನ್ನೆಲ್ಲಾ ಎತ್ತಿಡುತ್ತಿರುವಾಗ ತನ್ನ ತಾಯಿಯ ಬಳಿ ಮೊದಲು ಒಂದು ಬಾರಿ ಶಾಲೆಯಿಂದ ತಂದುಕೊಟ್ಟ ಪತ್ರವು ಅವರ ಕಣ್ಣಿಗೆ ಕಂಡಿತು ಅದನ್ನು ತೆಗೆದುಕೊಂಡು ಓದಿದರು. ಅದರಲ್ಲಿ   "ಮೂಳೆ ಬೆಳವಣಿಗೆ ಕುಗ್ಗಿದ ನಿಮ್ಮ ಮಗನನ್ನು ಇನ್ನು ಮೇಲೆ ನಮ್ಮ ಶಾಲೆಗೆ ನೀವು ಕಳುಹಿಸಬೇಡಿ"  ಎಂದು ಬರೆಯಲ್ಪಟ್ಟಿತ್ತು. ಇದನ್ನು ಓದಿದ ಎಡಿಸನ್ ನ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತು. ನಂತರ ಅವರ ಡೈರಿಯಲ್ಲಿ ಮೂಳೆ ಬೆಳವಣಿಗೆ ಇಲ್ಲದ ಎಡಿಸನ್ ತನ್ನ ತಾಯಿಯಿಂದ ಮಹಾ ದೊಡ್ಡ ಸಂಶೋಧಕನಾದನು ಎಂದು ಬರೆದರು.

ಗದರೇನರ ಸೀಮೆಯಲ್ಲಿ ಅನೇಕ ದುರಾತ್ಮಗಳಿಂದ ಕಟ್ಟಲ್ಪಟ್ಟಿದ್ದ ಮನುಷ್ಯನಿದ್ದನು. ಅವನು ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟವನು, ತಳ್ಳಲ್ಪಟ್ಟವನಾಗಿಯೂ ಇದ್ದನು. ಆದರೆ, ಯೇಸು ಮಾತ್ರ ಅವನನ್ನು ತಳ್ಳದೇ ಆ ಅಪವಿತ್ರಾತ್ಮಗಳನ್ನು ಓಡಿಸಿ ಆ ಪಟ್ಟಣಕ್ಕೆ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ ಉಪಯೋಗಿಸಿದರು. ಅವನನ್ನು ಸೇವಕನಾಗಿ ಮಾರ್ಪಡಿಸಿದರು.

ಪ್ರಿಯರೇ! ನಾವು ಅನೇಕ ಸಮಯಗಳಲ್ಲಿ ಶರೀರದಲ್ಲಿ ಕೊರತೆಯುಳ್ಳವರನ್ನು, ಬುದ್ಧಿಮಾಂಧ್ಯರನ್ನು ನೋಡಿ ಪಶ್ಚಾತಾಪ ಪಟ್ಟು, ನಂತರ ಹೊರಟು ಹೋಗುತ್ತೇವೆ. ಬುದ್ಧಿಮಾಂದ್ಯನಾಗಿದ್ದ ಎಡಿಸನ್ ನನ್ನು ಶಾಲೆಯ ಟೀಚರ್ ಗಳು ನಿರಾಕರಿಸಿ ಬೇಡವೆಂದು ತಳ್ಳಿಬಿಟ್ಟರು. ಆದರೆ ಇವರೇ ಎಲ್ಲಾ ಮನೆಗಳಿಗೂ ಬೆಳಕನ್ನು ಕೊಡುವ ಬಲ್ಪ್  ನ್ನು ಕಂಡುಹಿಡಿದವರು. ಮನುಷ್ಯರಿಂದ ತಿರಸ್ಕರಿಸಲ್ಪಟ್ಟ ಆ ಮನುಷ್ಯನನ್ನೇ ಆ ಪಟ್ಟಣಕ್ಕೆ ಸುವಾರ್ತೆಯನ್ನು ಸಾರುವಂತಹ ವ್ಯಕ್ತಿಯಾಗಿ ಮಾರ್ಪಡಿಸಿದರು. ನಮ್ಮ ದೇವರು ಸಾಮಾನ್ಯರನ್ನು, ತಳ್ಳಲ್ಪಟ್ಟವರನ್ನು ಆರಿಸಿ ಉಜ್ಜೀವನಕ್ಕಾಗಿ ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಬಲಹೀನರನ್ನು ಬಲಪಡಿಸೋಣ. ಅವರು ದೇವರಿಂದ ಉಪಯೋಗಿಸಲ್ಪಡುವ ಪಾತ್ರೆಗಳಾಗಲಿ. ಆಮೆನ್!
-    S. ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
ದೈನಂದಿನ ಧ್ಯಾನ ಪತ್ರಿಕೆ ಸಿದ್ಧತೆಯ ಕೆಲಸಗಳಲ್ಲಿ ಕೈಜೋಡಿಸುವ ಮಕ್ಕಳನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)