Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 31.12.2020

ಧೈನಂದಿನ ಧ್ಯಾನ(Kannada) – 31.12.2020

ಗುಣುಗುಟ್ಟುವುದು ಬೇಡ

“ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ” - 1 ಕೊರಿಂಥ 10:10

ಕಳೆದು ಬಂದ 2020 ನೇ ವರ್ಷವನ್ನು ಸ್ವಲ್ಪ ಹಿಂತಿರುಗಿ ನೋಡೋಣ. ಸೀಸನ್ ಬದಲಾಗುವ ಹಾಗೆ ಎಷ್ಟೆಷ್ಟೋ ಬದಲಾವಣೆಗಳು! ವಿದ್ಯಾಭ್ಯಾಸದಲ್ಲಿ, ಕಲಿತುಕೊಳ್ಳುವ ವಿಧಾನದಲ್ಲಿ, ಕುಟುಂಬದ ಆರ್ಥಿಕತೆಯಲ್ಲಿ, ಸೇವೆಯಲ್ಲಿ, ಕೆಲಸದಲ್ಲಿ, ವ್ಯಾಪಾರದಲ್ಲಿ, ಜೀವನಶೈಲಿಯಲ್ಲಿ ಎಂದು ವಿಧವಿಧವಾದ ಬದಲಾವಣೆಗಳಿಂದ ತುಂಬಿದೆಯಲ್ಲವೆ? ಜೀವನಕ್ಕೆ ಅತ್ಯವಸರವಾದ ನೀರು, ಆಹಾರ, ಗಾಳಿ ಇವುಗಳ ಸಾಲಿನಲ್ಲಿ ಮಾಸ್ಕ್-ನ್ನು ಸೇರಿಸಿಕೊಳ್ಳಬೇಕಾದದ್ದು ಕಡ್ಡಾಯ! ಅಬ್ಬಬ್ಬಾ - ಮದುವೆ, ಸಂಬಂಧಿಕರ ಮನೆ, ಶಾಲೆ, ಕಾಲೇಜಿಗೆ ಹೋಗದೆ ಒಂದು ವರ್ಷವನ್ನು ಮುಗಿಸಿಬಿಟ್ಟೋ.

ಹಾಗಾದರೆ ಸಂತೋಷವಾದ ಕಾರ್ಯಗಳು, ನೆನೆಸಿದವುಗಳೆಲ್ಲಾ ನೆರವೇರಿದ ಕಾಲಗಳು ಕರ್ತನ ಬಳಿಯಿಂದ ಬಂದವೆಂದು, ನಾವು ಬಯಸದ ಈ ಕಾಲಘಟ್ಟಗಳು ಸೈತಾನನ ಕೆಲಸ ಎಂದು ನಾವು ಹೇಳಲು ಸಾಧ್ಯವಿಲ್ಲ. ದೇವರಿಂದಲ್ಲದೆ ಯಾವ ಅಣುಗಳು ಕದಲುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳೋಣ. ಆದ್ದರಿಂದ ವಿಧವಿಧವಾದ ಪರಿಸ್ಥಿತಿಗಳ ಮೂಲಕ ದೇವರು ತಮ್ಮ ಮಕ್ಕಳನ್ನು ನಡೆಸುತ್ತಿದ್ದಾರೆ. ಒಂದು ವೇಳೆ ನಾವು ನೆನೆಸಬಹುದು,  "ಈ ಕೊರೋನಾ ಸೋಂಕು ಹರಡದೇ ಇದ್ದಿದ್ದರೆ ಈ ವರ್ಷ ಎಷ್ಟೊಂದು ನೆಮ್ಮದಿಯಾಗಿ ಇರುತ್ತಿತ್ತು. ನನ್ನ ಮಕ್ಕಳ ವಿವಾಹ ಚೆನ್ನಾಗಿ ನಡೆಯುತ್ತಿತ್ತು. ನನ್ನ ಮಗನು 10th exam ಬರೆದು ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದನು" ಎಂದು. ಎಲ್ಲವೂ ಸರಿಯೇ. ಆದರೆ ಒಂದನ್ನು ಮರೆತು ಬಿಡಬಾರದು. ನಮ್ಮ ಆಲೋಚನೆಗಳು ದೇವರ ಆಲೋಚನೆಗಳಲ್ಲ. ಆದ್ದರಿಂದ ಸುಖವೋ - ದುಃಖವೋ ಯಾವುದಾದರೂ ದೇವರು ನಮ್ಮನ್ನು ನಡೆಸುವ ಹಾದಿಯಲ್ಲಿ ತಾಳ್ಮೆಯಿಂದ ನಡೆಯೋಣ. ಎಲ್ಲಾ ಪರಿಸ್ಥಿತಿಯಲ್ಲಿಯೂ ಮನ ರಮ್ಯವಾಗಿರಲು ಕಲಿತುಕೊಳ್ಳೋಣ.

ಪ್ರಿಯರೇ! ಅಂದು ಇಸ್ರಾಯೇಲ್ ಜನರು ದೇವರನ್ನು ಅವರ ಪ್ರೀತಿಯನ್ನು ಅರ್ಥಮಾಡಿಕೊಳ್ಳದೆ ಮುಟ್ಟಿದ್ದಕ್ಕೆಲ್ಲಾ ಗುಣುಗುಟ್ಟಿ ದೇವರ ಮನಸ್ಸನ್ನು ಗಾಯ ಪಡಿಸಿದರು. ಇಂದು ನಾವು ಹೇಗಿದ್ದೇವೆ? ದೇವರು ನಮ್ಮನ್ನು ನಡೆಸುವ ಹಾದಿಯೆಲ್ಲಾ ಒಳ್ಳೆಯದೇ ಎಂದು ಗ್ರಹಿಸಿ ತಾಳ್ಮೆಯಿಂದ ಇದ್ದೇವಾ? ಅಥವಾ ಈ ವರ್ಷ ಮುಗಿದು ಬಿಟ್ಟಿತೇ, ವಿದ್ಯಾಭ್ಯಾಸ ಹೀಗೆ ಕೆಟ್ಟು ಹೋಯಿತೇ, ಒಳ್ಳೆಯದು-ಕೆಟ್ಟದು ಎಂದು ಯಾವ ಕಾರ್ಯಕ್ಕೂ ಹೋಗಲು ಸಾಧ್ಯವಾಗಲಿಲ್ಲವೇ ಎಂದು ಗುಣುಗುಟ್ಟುತ್ತಲೇ ಇದ್ದೇವಾ? ನೀವು ನೆನೆಸುವ ಹಾಗೆ ಈ ವರ್ಷ ಸ್ವಲ್ಪ ಕಠಿಣವಾಗಿದ್ದರೂ ಇನ್ನು ಜೀವಂತವಾಗಿಯೇ ತಾನೇ ಇದ್ದೇವೆ. ಇಂದಿನವರೆಗೂ ತಿನ್ನಲು ಆಹಾರ, ಉಡಲು ವಸ್ತ್ರ, ಒರಗಲು ಸ್ಥಳ ಕೊಟ್ಟರೇ! ಮುಂಚೆಗಿಂತ ಅಧಿಕವಾಗಿ ಸತ್ಯವೇದವನ್ನು ಓದುತ್ತಿದ್ದೇವೆ. ಹಲವು ದೇಶಗಳಿಗಾಗಿ ಪ್ರಾರ್ಥಿಸಿದ್ದೇವೆ! ಆದ್ದರಿಂದ ನಾವು ಒಂದು ಬಾರಿಯೂ ದೇವರನ್ನು ಗುಣುಗುಟ್ಟಬಾರದು. ಗುಣುಗುಟ್ಟುವಂತೆ ಪ್ರೇರೇಪಿಸುವ ಸೈತಾನನ ಯೋಚನೆಗಳನ್ನು ತೊಲಗಿಸೋಣ. ಬರಲಿರುವ ಹೊಸವರ್ಷದಲ್ಲಿ ದಾಟಿಬಂದ ಹಾದಿಗಳನ್ನು ತಿರುಗಿ ನೋಡುತ್ತಾ ಕೃತಜ್ಞತೆಯ ಹೃದಯದೊಂದಿಗೆ ದೇವರನ್ನು ಸ್ತುತಿಸುತ್ತಲೇ ಇರೋಣ.
-    Mrs. ಜೆಬಾ ಡೇವಿಡ್ ಗಣೇಶನ್

ಪ್ರಾರ್ಥನಾ ಅಂಶ:-
ದೇವರು ಈ ಸೇವೆಯ ಮುಖಾಂತರ ಮಾಡಲು ಬಯಸಿದ ಕಾರ್ಯಗಳನ್ನು ಮಾಡಿ ಮುಗಿಸುವಂತೆ ಅರ್ಹತೆಯುಳ್ಳವರಾಗಿ ಸೇವಕರು ಕಾಣಲ್ಪಡುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)