ಧೈನಂದಿನ ಧ್ಯಾನ(Kannada) – 19.01.2025
ಧೈನಂದಿನ ಧ್ಯಾನ(Kannada) – 19.01.2025
ಮೊದಲ ಸ್ಥಾನ ಯೇಸುವಿಗೇ
"ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ" - ಕೀರ್ತ. 105:4
ನನ್ನ ಪ್ರೀತಿಯ ಪುಟ್ಟ ಮಕ್ಕಳೇ! ನೀವು ಹೆಚ್ಚಾಗಿ ಯೇಸುವನ್ನು ಪ್ರೀತಿಸುತ್ತೀರೋ ಅಥವಾ ಈ ಲೋಕವನ್ನು ಪ್ರೀತಿಸುತ್ತೀರೋ? ಅದನ್ನು ಹೇಗೆ ಕಂಡುಹಿಡಿಯುವುದು ಎಂದು ನಿಮಗೆ ಗೊತ್ತಾ? ಓಹ್.... ಗೊತ್ತಿಲ್ವಾ. ಸರಿ..ಸರಿ.. ಬನ್ನಿ ಕಥೆಯ ಮೂಲಕ ತಿಳಿದುಕೊಳ್ಳೋಣ.
ಚೀನಾಕ್ಕೆ ಮಿಷನರಿಯಾಗಿ ಹೋದ ಯುವಕ ಎರಿಕ್ ಲಿಡ್ಲ್, ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆಗಳಲ್ಲಿ ಯಶಸ್ಸಿನ ಮೇಲೆ ಯಶಸ್ಸನ್ನು ಸಾಧಿಸಿದವರು. ಇದಕ್ಕೆ ಕಾರಣವೇನು ಗೊತ್ತಾ? ಅವರು ತನ್ನ ಬಾಲ್ಯದಿಂದಲೇ ಕರ್ತನಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದೇ. ಅಂಥದ್ದು ಏನು ಮಾಡಿಬಿಟ್ರು ಅವರು, ಅಂಥ ತಾನೇ ಯೋಚನೆ ಮಾಡ್ತಾ ಇದೀರ. ಭಾನುವಾರ ಶಾಲೆಯಲ್ಲಿ ಯಾವುದೇ ಕ್ರೀಡಾ ಸ್ಪರ್ಧೆ ಅಥವಾ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದರೂ, ಅವರು ಮೊದಲ ಸ್ಥಾನ ಯೇಸಪ್ಪನಿಗೆ ಕೊಟ್ಟು ಆಲಯಕ್ಕೇ ಹೋಗುತ್ತಿದ್ದರು. ಹೀಗೆ ಲೌಕಿಕ ಕೆಲಸಕ್ಕಿಂತ ಯೇಸಪ್ಪನನ್ನು ಸಂತೋಷಪಡಿಸುವುದರ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿದ್ದರು ಎರಿಕ್ ಅಣ್ಣ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ 1924 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ ಓಡುವ ಅವಕಾಶಕ್ಕಾಗಿ ಎರಿಕ್ ಕಾತುರದಿಂದ ಕಾಯುತ್ತಿದ್ದರು. ಆದರೆ ಒಂದು ದೊಡ್ಡ ನಿರಾಶೆ ಕಾದಿತ್ತು. ಆ ಪಂದ್ಯ ಆಲಯಕ್ಕೆ ಹೋಗಬೇಕಾದ ಭಾನುವಾರದಂದು ಇತ್ತು. ವಿಶ್ವ ಖ್ಯಾತಿಯಾ? ದೇವರಿಗೆ ಮೊದಲ ಸ್ಥಾನ ಕೊಟ್ಟು ಆತನಿಗೆ ವಿಧೇಯನಾಗುವುದಾ? ಮನಸ್ಸಿನಲ್ಲಿ ಒಂದೇ ಹೋರಾಟ. ನೀವಾಗಿದ್ದರೆ ಏನು ಮಾಡ್ತಾ ಇದ್ರಿ ಪುಟಾಣಿಗಳೇ? ಎರಿಕ್ ಏನು ಮಾಡಿದ್ರು ಗೊತ್ತಾ? ಅವರು ತನ್ನ ಸ್ವಂತ ಸಂತೋಷಕ್ಕಿಂತ ಹೆಚ್ಚಾಗಿ ದೇವರನ್ನು ಮೆಚ್ಚಿಸಲು ಬಯಸಿದರು. ಅವರು ಭಾನುವಾರ ಆರಾಧನೆಗೆ ಹೋಗಿ ಓಟವನ್ನು ಬಿಟ್ಟುಬಿಟ್ಟರು. ಎಲ್ಲರೂ ಅವನನ್ನು ಗೇಲಿ ಮಾಡಿದರು, ಮತ್ತು ಕೆಲವರು ಅವನು ಒಳ್ಳೆಯ ಅವಕಾಶವನ್ನು ಕಳೆದುಕೊಂಡಿದ್ದಾನೆಂದು ಸಲಹೆ ನೀಡಿದರು. ಎರಿಕ್ ಯಾವುದರ ಬಗ್ಗೆಯೂ ಚಿಂತಿಸದೆ ತನ್ನ ನಿರ್ಧಾರದಲ್ಲಿ ದೃಢವಾಗಿದ್ದರು. ಕರ್ತನು ಸುಮ್ಮನೇ ಇರುತ್ತಾರಾ ಎರಿಕ್ ಅಣ್ಣನಿಗೆ ಒಂದು ಹೊಸ ಮಾರ್ಗವನ್ನು ಉಂಟುಮಾಡಿದರು. ಇನ್ನೊಂದು ದಿನ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ಮತ್ತು ವಿಶ್ವ ದಾಖಲೆ ನಿರ್ಮಿಸಲು ದೇವರು ಸಹಾಯ ಮಾಡಿದರು. ಕರ್ತನಿಗೆ ಮೊದಲ ಸ್ಥಾನವನ್ನು ಕೊಟ್ಟದ್ದರಿಂದಲೇ ಎರಿಕ್ ಜೀವನದಲ್ಲಿ ಇಷ್ಟು ದೊಡ್ಡ ಆಶೀರ್ವಾದಗಳು ಎಂದು ಇತರ ಎಲ್ಲಾ ಜನರು ಅರಿತುಕೊಂಡರು.
ನಂತರದ ದಿನಗಳಲ್ಲಿ, ಪೂರ್ಣ ಸಮಯದ ಮಿಷನರಿಯಾಗಿ ದೇವರ ಸೇವೆ ಮಾಡುತ್ತಿದ್ದಾಗ, ಯೇಸು ಕ್ರಿಸ್ತನ ಮೇಲಿನ ತನ್ನ ಪ್ರೀತಿಯನ್ನು ಮತ್ತು ಆತನ ಆಜ್ಞೆಗಳನ್ನು ಪಾಲಿಸುವ ಮೂಲಕ ತಾನು ಗಳಿಸಿದ ವಿಜಯವನ್ನು ಜನರಿಗೆ ತಿಳಿಸಿದರು ಮತ್ತು ಅನೇಕರು ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು.
ಪ್ರಿಯರೇ! ಎರಿಕ್ ಅಣ್ಣ ಯೇಸಪ್ಪನಿಗೆ ಮೊದಲ ಸ್ಥಾನವನ್ನು ಕೊಟ್ಟದ್ದರಿಂದ, ಅವರು ಮಾತ್ರವಲ್ಲದೆ ಅನೇಕ ಜನರು ಅವರ ಮೂಲಕ ಆಶೀರ್ವದಿಸಲ್ಪಟ್ಟರು. ನೀವು ಸಹ "ನನ್ನ ಮೊದಲ ಆದ್ಯತೆ ಯೇಸುವಿಗೆ ಮಾತ್ರ" ಎಂದು ತೀರ್ಮಾನ ಮಾಡಿ ನೋಡಿ. ಅತ್ಯುತ್ತಮ ಆಶೀರ್ವಾದಗಳು ನಿಮ್ಮನ್ನು ಹುಡುಕಿ ಬರುತ್ತವೆ. ಏನು ಪುಟಾಣಿಗಳೇ ready-ನಾ?
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482