Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.03.2025

ಧೈನಂದಿನ ಧ್ಯಾನ(Kannada) – 13.03.2025

 

ಬಿದಿರಿನ ಬೀಜ

 

"ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು" - ಕೀರ್ತನೆ 119:71

 

ಒಬ್ಬ ಯುವಕ ತನ್ನ ಬೋಧಕರ ಬಳಿಗೆ ಹೋಗಿ, ತನ್ನ ಜೀವನದಲ್ಲಿ ನಿರಂತರ ಕಷ್ಟಗಳು ಮತ್ತು ಯಾತನೆಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದನು. ತಕ್ಷಣ ಬೋಧಕರು, "ನಿನಗೆ ಒಂದು ವಿಷಯ ಹೇಳಬೇಕು, ಗಮನವಿಟ್ಟು ಕೇಳು" ಎಂದರು. ದೇವರು ಮೊದಲು ಸಸ್ಯಗಳು ಮತ್ತು ಮರಗಳನ್ನು ಸೃಷ್ಟಿಸಿದಾಗ, ಹುಲ್ಲು ಮತ್ತು ಬಿದಿರಿನ ಬೀಜಗಳನ್ನು ನೆಟ್ಟರು. ಆದರೆ ಒಂದು ವರ್ಷದೊಳಗೆ ಹುಲ್ಲು ಬೆಳೆದು ಹುಲುಸಾಗಿ ಬೆಳೆಯಿತು. ಬಿದಿರಿನ ಬೀಜ ಮೊಳಕೆಯೊಡೆಯಲು ಐದು ವರ್ಷಗಳು ಬೇಕಾಯಿತು. ಆದರೆ ಆರು ತಿಂಗಳೊಳಗೆ ಆಕಾಶದ ಎತ್ತರಕ್ಕೆ ಬೆಳೆಯಿತು. ಹುಲ್ಲು ಬೆಳೆಯುವುದನ್ನು ನೋಡಿದ ದೇವರು, ಬಿದಿರಿನ ಬೀಜ ಬೆಳೆಯುವವರೆಗೂ ಕಾಯುತ್ತಿದ್ದರು. ಅದು ಐದು ವರ್ಷಗಳ ಕಾಲ ಕಾದಿದ್ದು ನಂತರ ಆಳವಾಗಿ ಬೇರುಬಿಟ್ಟು, ಮೊಳಕೆಯೊಡೆದು, ಎತ್ತರವಾಗಿ ಬೆಳೆಯಿತು. ಅದೇ ರೀತಿ, ನಾವು ಎದುರಿಸುವ ಕಷ್ಟಗಳು ಮತ್ತು ಸಂಕಟಗಳು ನಮ್ಮನ್ನು ರೂಪಿಸುವುದಕ್ಕಾಗಿಯೇ. ದೇವರು ನಮ್ಮನ್ನು ಉನ್ನತ ಸ್ಥಾನದಲ್ಲಿರಿಸಿದಾಗ ಅವು ಸಹಾಯಕವಾಗುತ್ತವೆ ಎಂದು ಹೇಳಿದರು.

        

ಅದೇ ರೀತಿ, ಬೈಬಲ್‌ನಲ್ಲಿ, ಯೋಸೇಫನನ್ನು ಅವನ ಸಹೋದರರು ದ್ವೇಷಿಸುತ್ತಿದ್ದರು. ಅವರು ಯೋಸೇಫನ ಬಟ್ಟೆಗಳನ್ನು ಬಿಚ್ಚಿ ಇಷ್ಮಾಯೇಲ್ಯರಿಗೆ ಮಾರಿಬಿಟ್ಟರು. ಇಷ್ಮಾಯೇಲ್ಯರು ಐಗುಪ್ತದಲ್ಲಿ ಪೋಟೀಫರನಿಗೆ ಮಾರಿಬಿಟ್ಟರು. ಯೋಸೇಫನು ಪೋಟೀಫರನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಮನೆಯ ಯಜಮಾನನು ಯೋಸೇಫನನ್ನು ಸೇವಕರ ಮೇಲ್ವಿಚಾರಕನನ್ನಾಗಿ ಹೆಚ್ಚಿಸಿದರು. ಪೋಟೀಫರನ ವಿಶ್ವಾಸವನ್ನೂ ಗಳಿಸಿದರು. ನಂತರ ಪೋಟೀಫರನ ಹೆಂಡತಿ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಸೆರೆಮನೆಗೆ ಕಳುಹಿಸಿದಳು. ಅಲ್ಲಿಯೂ ಸಹ, ಅವರಿಗೆ ಕೈದಿಗಳನ್ನು ವಿಚಾರಣೆ ಮಾಡುವ ಜವಾಬ್ದಾರಿಯನ್ನು ನೀಡಲಾಯಿತು. ಅದರ ನಂತರವೇ ರಾಜನ ಕನಸನ್ನು ಅರ್ಥೈಸುವ ಅವಕಾಶವನ್ನು ಪಡೆದುಕೊಂಡರು. ಅದರ ಮೂಲಕ, ರಾಜನಿಗೆ ನಂತರದ ಸ್ಥಾನಕ್ಕೆ ಹೆಚ್ಚಿಸಲ್ಪಟ್ಟರು. ಯೋಸೇಫನ ಜೀವನದಲ್ಲಿನ ಘಟನೆಗಳು ಮತ್ತು ಪೋಟೀಫರನ ಮನೆಯಲ್ಲಿನ ಅನುಭವಗಳು ಅವರ ಆಳ್ವಿಕೆಯ ಗುಣಮಟ್ಟವನ್ನು ಹೆಚ್ಚಿಸಿತು. ಅವರು ಉನ್ನತ ಸ್ಥಾನಕ್ಕೆ ಏರಿದಾಗ, ತನ್ನ ಸಹೋದರರನ್ನು ಅಂಗೀಕರಿಸಿ ಅವರನ್ನು ನೋಡಿಕೊಳ್ಳುತ್ತಾರೆ. ತಂದೆ ಸತ್ತ ನಂತರ ಯೋಸೇಫನು ಸೇಡು ತೀರಿಸಿಕೊಳ್ಳುತ್ತಾನೆಂದು ಹೆದರಿ, ಸಹೋದರರು ಸಾಷ್ಟಾಂಗವಾಗಿ ಬಿದ್ದು, "ನಾವು ನಿನಗೆ ಗುಲಾಮರು" ಎಂದು ಹೇಳಿದರು. ಯೋಸೇಫನು, "ನೀವು ನನಗೆ ಹಾನಿ ಮಾಡಲು ಉದ್ದೇಶಿಸಿದಿರಿ. ಆದರೆ ದೇವರು ಅದನ್ನು ಒಳ್ಳೆಯ ರೀತಿಯಲ್ಲಿ ಮುಗಿಯುವಂತೆ ಮಾಡಿದರು" ಎಂದು ಹೇಳಿದರು.                   

 

ಪ್ರಿಯರೇ ! ನೀವು ಕಷ್ಟಪಡುತ್ತಿದ್ದೇನೆ ಮತ್ತು ಉಪದ್ರವಪಡುತ್ತಿದ್ದೇನೆ ಎಂದು ಭಾವಿಸುತ್ತಿದ್ದೀರಾ? ಉಪದ್ರವಗಳು ನಿಮ್ಮನ್ನು ರೂಪಿಸುವುದಕ್ಕಾಗಿಯೇ, ಅವು ಅನೇಕರಿಗೆ ನೀವು ಆಶೀರ್ವಾದವಾಗಲು ಸಹಾಯ ಮಾಡುತ್ತದೆ ಎಂಬುದನ್ನು ಮರೆಯಬೇಡಿ. ಬಿದಿರಿನ ಬೀಜ ಮೊಳಕೆಯೊಡೆಯಲು ಅಥವಾ ಯೋಸೇಫನ ಕನಸು ನನಸಾಗಲು ಇನ್ನಷ್ಟು ವರ್ಷಗಳು ಬೇಕಾಗಿರಬಹುದು. ಆದರೆ ಅದು ವ್ಯರ್ಥ ಸಮಯವಲ್ಲ, ಅದು ರೂಪಿಸುವ ಸಮಯ! ಹಾಗಾಗಿ, ನಿಮ್ಮ ಜೀವನದಲ್ಲಿ ಬರುವ ಆಲಸ್ಯವೋ, ಕಷ್ಟಕರ ಸಂದರ್ಭಗಳೋ ಎಲ್ಲವೂ ಒಳ್ಳೆಯದೇ!

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್‌ನಲ್ಲಿ ಓದುತ್ತಿರುವ ಮಕ್ಕಳು ದೇವರ ಜ್ಞಾನದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)