Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 28.04.2024 (Kids Special)

ಧೈನಂದಿನ ಧ್ಯಾನ(Kannada) – 28.04.2024 (Kids Special)

 

ಪಾಪವನ್ನು ಮರೆಮಾಡಬೇಡ!

 

"ಯೆಹೋವನೇ, ನಿನ್ನ ಮರೆಹೊಕ್ಕಿದ್ದೇನೆ; ನನಗೆ ಎಂದಿಗೂ ಆಶಾಭಂಗಪಡಿಸಬೇಡ" - ಕೀರ್ತನೆ 31:1

 

ಜಾರ್ಜ್ ಯಾರ ಕಣ್ಣಿಗೂ ಬೀಳದಂತೆ ನಿಧಾನವಾಗಿ ಶಾಲೆಯಿಂದ ಹೊರಗೆ ಬಂದ. ಮನಸ್ಸು ಭಯದಿಂದ ತುಂಬಿತ್ತು. ಅವನಿಗಾಗಿ ಕಾಯುತ್ತಿದ್ದ ಹೆನ್ರಿ ಬೆಕ್ಕಿನಂತೆ ಬಂದು ಅವನ ಬೆನ್ನು ತಟ್ಟಿದನು. ಹೆನ್ರಿ ಭಯದಿಂದ ಕಿರುಚಿಬಿಟ್ಟ ಜಾರ್ಜ್‌ನ ಬಾಯನ್ನು ತನ್ನ ಕೈಯಿಂದ ಮುಚ್ಚಿದನು. ಲೋ ನೀನೂ ಕೂಡ ನನ್ ಜೊತೆ ಸರ್ಕಸ್‌ಗೆ ಬರ್ತೀಯಾ? ಎಂದ ಜಾರ್ಜ್‌ಗೆ ಅದಕ್ಕಾಗಿಯೇ ತಾನೇ ಇಷ್ಟು ಹೊತ್ತು ಕಾಯುತ್ತಿದ್ದೆ. ಬಾ ಹೋಗೋಣ ಎಂದು ಇಬ್ಬರೂ ಕ್ಲಾಸ್ ಚಕ್ಕರ್ ಹಾಕಿ ಹೊರಗೆ ಹೋದರು.

 

School ಗೆ ಚಕ್ಕರ್ ಹಾಕಿ ಊರು ಸುತ್ತೋದು ಎಷ್ಟು ದೊಡ್ಡ ತಪ್ಪು ಪುಟಾಣಿಗಳೇ. ನೀವು ಹಾಗೆಲ್ಲಾ ಮಾಡೋದಿಲ್ಲ ತಾನೇ! ಕರಡಿಯ ಬಾಯಲ್ಲಿ ಮಂತ್ರ ಹೇಳುವುದು, ಆನೆಯನ್ನು ಬಾರಿಸುವುದು, ಸರ್ಕಸ್ ಕೋಡಂಗಿಗಳು ನಟಿಸುವುದು ತುಂಬಾ ಜಾಲಿಯಾಗಿರುತ್ತದೆ. ಅದರೊಂದಿಗೆ ಪಾಪ್ ಕಾರ್ನ್ ತೆಗೆದುಕೊಂಡು ತಿನ್ನೋದು ಇನ್ನೂ ಚೆನ್ನಾಗಿರುತ್ತದೆ ಎಂದು ಹೆನ್ರಿ ಮಾತನಾಡುತ್ತಲೇ ಬಂದ. ಜಾರ್ಜ್‌ನ ಹೃದಯದಲ್ಲಿ ಭಯ, ಅಮ್ಮನಿಗೆ ತಿಳಿಯದೆ ತನ್ನ ಪರ್ಸ್‌ನಿಂದ ಇನ್ನೂರು ರೂಪಾಯಿಯನ್ನು ತೆಗೆದುಕೊಂಡು ಬಂದುಬಿಟ್ಟೆನಲ್ಲಾ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಸಂಜೆ ಮನೆಗೆ ಬಂದಾಗ ಅಮ್ಮ ಹೇಳುದ್ರು ತಂಗಿಗೆ ಜ್ವರ ಜಾಸ್ತಿ ಆಗಿದ್ದರಿಂದ ಜನ್ನಿ ಬಂದುಬಿಡ್ತು. ನಾನು ಆಸ್ಪತ್ರೆಗೆ ಹೋಗಲು ಹಣ ಹುಡುಕಿದೆ ನಾನು ನನ್ನ ಪರ್ಸ್ ಅನ್ನು ಎಲ್ಲಿ ಹಾಕಿದ್ದೇನೋ ಗೊತ್ತಿಲ್ಲ. ಆಗ ನಾನು ಹಣವಿಲ್ಲದೇ ಏನು ಮಾಡಬೇಕೋ ಗೊತ್ತಾಗ್ತಿಲ್ಲ ಎಂದು ಅಳುತ್ತಿದ್ದಾಗ, ನಮ್ಮ ಚರ್ಚ್ ನ ಪಾಸ್ಟ್ರಮ್ಮ ಬಂದು ನಮಗೆ ಸಹಾಯ ಮಾಡಿದರು. ಅವರು ಈಗಷ್ಟೇ ಹೋದರು ಎಂದು ಹೇಳಿದಾಗ ಜಾರ್ಜ್ ಬಿಕ್ಕಿ ಬಿಕ್ಕಿ ಅತ್ತನು. ಅಮ್ಮಾ, ನಾನು ತಪ್ಪು ಮಾಡಿಬಿಟ್ಟೆ. ನನ್ನನು ಕ್ಷಮಿಸಿಬಿಡಿ. ಪರ್ಸ್ ನಿಂದ ಇನ್ನೂರು ರೂಪಾಯಿ ತೆಗೆದುಕೊಂಡು ಸರ್ಕಸ್ ಗೆ ಹೋಗಿಬಂದೆ ಎಂದು ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದನು. ಪಾಸ್ಟ್ರಮ್ಮ ಬರದೇ ಇದ್ದಿದ್ದರೆ ತಂಗಿಯ ಪ್ರಾಣಕ್ಕೇ ಅಪಾಯವಾಗುತ್ತಿತ್ತಲ್ಲ ಎಂದನು. ಸರಿ ತಮ್ಮ ಮತ್ತೆ ಈ ತಪ್ಪು ಮಾಡಬೇಡ! ಯೇಸಪ್ಪನಿಗೆ ಹೇಳಿಬಿಟ್ಟು ಕ್ಷಮೆ ಕೇಳು. ಇನ್ನು ಮುಂದೆ ಇಂತಹ ತಪ್ಪು ಮಾಡದಂತೆ ಯೇಸಪ್ಪ ನಿನಗೆ ಸಹಾಯ ಮಾಡುತ್ತಾರೆ ಎಂದು ಅಮ್ಮ ಹೇಳಿದ್ದನ್ನು ಕೇಳಿ ಯೇಸಪ್ಪನ ಬಳಿ ಕ್ಷಮೆ ಕೇಳಿದನು. ಅವನ ಹೃದಯದಲ್ಲಿದ್ದ ಭಯವೆಲ್ಲ ಹತ್ತಿಯ ಹಾಗೆ ಹಾರಿಹೋಯಿತು. ತಂಗಿ ಕೂಡ ಗುಣಮುಖಳಾಗಿ ಶಾಲೆಗೆ ಹೋಗತೊಡಗಿದಳು. ತಾಯಿಯ ಸಂತೋಷಕ್ಕೆ ಮಿತಿಯೇ ಇಲ್ಲ.

 

ಮುದ್ದು ಪುಟಾಣಿಗಳೇ, ಜಾರ್ಜ್ ತನ್ನ ತಪ್ಪನ್ನು ಅರಿತು, ಕ್ಷಮೆಯನ್ನು ಕೇಳಿ, ಆ ಪಾಪವನ್ನು ಮಾಡದಿರುವಂತೆ ಯೇಸುವಿನ ಸಹಾಯವನ್ನು ಕೋರಿದಂತೆಯೇ, ನೀವು ಸಹ ನಿಮ್ಮ ಪಾಪವನ್ನು ಮರೆಮಾಡದೆ ಯೇಸಪ್ಪನ ಬಳಿ ಕ್ಷಮಾಪಣೆ ಪಡೆಯಲು ಸಿದ್ಧರಾಗಿರಬೇಕು. ಮಾಡುತ್ತೀರಲ್ಲಾ ಪುಟಾಣಿಗಳೇ.

- Mrs. ಗ್ರೇಸ್ ಜೀವಮಣಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)