Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 26.04.2024

ಧೈನಂದಿನ ಧ್ಯಾನ(Kannada) – 26.04.2024

 

ಇನ್ನೊಂದು ಕೆನ್ನೆಯನ್ನೂ ತೋರಿಸು

 

"ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಅಂದುಕೊಳ್ಳಬೇಡ" - ಜ್ಞಾನೋಕ್ತಿ 24:29

 

Campus crusade ಎಂಬ ಸೇವೆಯಲ್ಲಿ ಅರೆಕಾಲಿಕ ಸೇವೆ ಮಾಡಿದನು ಫುಟ್ಬಾಲ್ ಆಟಗಾರ. ಈ ಯುವಕ ಒಮ್ಮೆ ಕ್ರಿಸ್ತನ ಸುವಾರ್ತೆಯನ್ನು ವಿವರಿಸುವ ಹಸ್ತಪ್ರತಿಯನ್ನು ಹಸ್ತಾಂತರಿಸುತ್ತಿದ್ದನು. ಆತ ನೀಡಿದ ಪ್ರತಿಯನ್ನು ಪಡೆದ ಯುವಕನೊಬ್ಬ ಅದನ್ನು ಎಸೆದು ಅಸಹ್ಯವಾಗಿ ಅವನನ್ನು ನೋಡಿ ಮುಖಕ್ಕೆ ಉಗಿದನು. ನಿನ್ನ ಯೇಸುವನ್ನು ಸಹ ಇದೇ ರೀತಿಯಾಗಿ ಅಸಹ್ಯವಾಗಿ ನೋಡುತ್ತೇನೆ ಎಂದನು. ಸ್ವಾಭಾವಿಕವಾಗಿ, ಫುಟ್ಬಾಲ್ ಆಟಗಾರರ ದೇಹವು ತುಂಬಾ ಬಲವಾಗಿರುತ್ತದೆ. ಆದರೆ ಈ ಯೋಧ ಅವನಿಗೆ ತನ್ನ ಶಕ್ತಿಯನ್ನು ತೋರಿಸಲಿಲ್ಲ, ಆದರೆ ಯೇಸುವಿಗಾಗಿ ಅದನ್ನು ಸಹಿಸಿಕೊಂಡು ಅದನ್ನು ತನ್ನ ಕೈ ಬೆರಳುಗಳಿಂದ ಒರೆಸಿಕೊಂಡನು. ಇದನ್ನು ನೋಡುತ್ತಿದ್ದ ಅನೇಕ ವಿದ್ಯಾರ್ಥಿಗಳ ಹೃದಯದಲ್ಲಿ ದೇವರು ಪ್ರವೇಶಿಸಿದರು. ಮತ್ತು ಹುಡುಗನ ಮುಖದ ಮೇಲೆ ಉಗುಳಿದ ವ್ಯಕ್ತಿಯು ಒಂದು ವರ್ಷದ ನಂತರ ರಕ್ಷಣೆಹೊಂದಿ ಫುಟ್ಬಾಲ್ ಆಟಗಾರನೊಂದಿಗೆ ಸೇರಿ ಸೇವೆ ಮಾಡಿದರು.

 

ಕರ್ತನಾದ ಯೇಸು ಕ್ರಿಸ್ತನು ಭೂಮಿಯ ಮೇಲೆ ಜೀವಿಸುತ್ತಿದ್ದ ದಿನಗಳಲ್ಲಿ ಮಾಡಿದ ಪರ್ವತದ ಮೇಲಿನ ಪ್ರಸಂಗವು ಬಹಳ ಪ್ರಸಿದ್ಧವಾಗಿದೆ. ಪರ್ವತ ಪ್ರಸಂಗ ಎಂದು ಕರೆಯಬಹುದಾದ ಮತ್ತಾಯ 5, 6, 7 ಅಧ್ಯಾಯಗಳನ್ನು ಅನೇಕರು ಕಂಠಪಾಠ ಮಾಡಿ ಅದನ್ನು ಅನುಸರಿಸುತ್ತಿದ್ದಾರೆ. ಕ್ರೈಸ್ತರಲ್ಲದವರು ಸಹ ಸ್ಟೇಜ್ ಗಳಲ್ಲಿ ನಿಂತು ಮಾತನಾಡುವಾಗ ಈ ಪರ್ವತದ ಪ್ರಸಂಗವನ್ನು ಉದಾಹರಣೆಯಾಗಿ ಬಳಸುತ್ತಾರೆ. ಯೇಸು ಹೇಳಿದ್ದು ಏನೆಂದರೆ, ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು ಎಂದು!

 

ಪ್ರಿಯರೇ! ಅನೇಕರು ಕ್ರಿಸ್ತನ ನಿಮಿತ್ತ ಅನೇಕರ ಮುಂದೆ ನಮ್ಮನ್ನು ಅವಮಾನಿಸಬಹುದು. ನಮ್ಮನ್ನು ದಬ್ಬಾಳಿಕೆ ಮಾಡುವವರಿಗೆ ನಾವು ಮತ್ತೆ ಹೊಡೆಯದೆ ಇನ್ನೊಂದು ಕೆನ್ನೆಯನ್ನು ತೋರಿಸೋಣ. ವಿರೋಧಿಸುವುದಕ್ಕಿಂತ ಸಹಿಸಿಕೊಳ್ಳಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ. ದೇವರು ನಮಗೆ ಆ ಶಕ್ತಿಯನ್ನು ಕೊಡುತ್ತಾರೆ. ದೇವರನ್ನು ಸತತವಾಗಿ ಹಿಂಬಾಲಿಸುವುದರಿಂದ ನಮ್ಮನ್ನು ಯಾರು ನೋಯಿಸಿದರೂ ಇನ್ನೊಂದು ಕೆನ್ನೆಯನ್ನು ತೋರಿಸಲು ನಮ್ಮನ್ನು ಬಲಪಡಿಸು ಎಂದು ನಾವು ಕೇಳುವುದಾದರೆ, ನಾವು ಶಕ್ತಿಯನ್ನೂ ಪಡೆಯುತ್ತೇವೆ. ದೇವರನ್ನು ಹಿಂಬಾಲಿಸುವ ಶಿಷ್ಯರಾಗಿ ಮಾರ್ಪಡೋಣ! ದೇವರು ತನ್ನ ಯೋಜನೆಯ ಪ್ರಕಾರ ನಮ್ಮನ್ನು ಹೆಚ್ಚಿಸುತ್ತಾರೆ.

- Mrs. ಜಾಸ್ಮಿನ್ ಪಾಲ್.

 

ಪ್ರಾರ್ಥನಾ ಅಂಶ:

ನಮ್ಮ ಉತ್ತರ ಭಾರತೀಯ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)