Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 23.04.2024

ಧೈನಂದಿನ ಧ್ಯಾನ(Kannada) – 23.04.2024

 

ಇಸ್ಕರಿಯೋತ ಯೂದನಾ? ಪೇತ್ರನಾ?

 

"…ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ…" - ಅಪೊಸ್ತಲ 1:8

 

ನಾವು ಬರೆಯಲು ನಮ್ಮ ಕೈಯಲ್ಲಿ ಪೆನ್ನು ತೆಗೆದುಕೊಂಡಾಗ ಅದು ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಕೊಡದಿದ್ದರೆ ಏನಾಗುತ್ತದೆ? ನಾನು ಪೆನ್ನು, ನನಗೆ ಎಲ್ಲವೂ ಗೊತ್ತು, ಯಾರ ಸಹಾಯವೂ ಬೇಕಾಗಿಲ್ಲ ಎಂದು ಹೇಳಿದರೆ ನಮಗೆ ನಗು ಬರುವುದು ಖಂಡಿತ. ಹಾಗೆಯೇ ನಾವು ಎಲ್ಲಾ ನನ್ನಿಂದ ಸಾಧ್ಯ. ಚೆನ್ನಾಗಿ ಉಪದೇಶ ಮಾಡುತ್ತೇನೆ, ಹಾಡುತ್ತೇನೆ ಎಂದು ಹೇಳಿದರೆ ಅದು ದೇವರಿಗೆ ನಗು ತರಿಸುತ್ತದೆ. ಪವಿತ್ರಾತ್ಮನ ಸಹಾಯವಿಲ್ಲದೆ ನಾವು ಮಾಡುವ ಪ್ರತಿಯೊಂದೂ ಯಾವುದೇ ಪ್ರಯೋಜನವನ್ನು ಅಥವಾ ಉತ್ತಮ ಪರಿಣಾಮವನ್ನೂ ಬೀರುವುದಿಲ್ಲ. ಅದನ್ನು ಇಬ್ಬರ ಜೀವನದಲ್ಲಿ ನೋಡೋಣ.

 

ಯೇಸುಕ್ರಿಸ್ತನು ಈ ಲೋಕದಲ್ಲಿ ಜೀವಿಸುತ್ತಿದ್ದಾಗ ಜೊತೆಗಿದ್ದ ಇಬ್ಬರು ಶಿಷ್ಯರು. ಒಬ್ಬರು ಪೇತ್ರ ಮತ್ತು ಇನ್ನೊಬ್ಬರು ಇಸ್ಕರಿಯೋತ ಯೂದ. ಶಿಲುಬೆಗೆ ಹೋಗುವ ದಾರಿಯಲ್ಲಿ ಯೇಸುವನ್ನು ಭಾವನಾತ್ಮಕವಾಗಿ ನೋಯಿಸಿದವರು ಇಬ್ಬರೂ. ಇಸ್ಕರಿಯೋತ ಯೂದ ಮೂವತ್ತು ಬೆಳ್ಳಿಯ ನಾಣ್ಯಗಳಿಗಾಗಿ ದ್ರೋಹ ಮಾಡಿದನು. ಪೇತ್ರನು ಯೇಸುವನ್ನು ಚಿತ್ರಹಿಂಸೆಮಾಡುವಾಗ ಮೂರು ಬಾರಿ ನಿರಾಕರಿಸಿದನು. ಹೇಗೆ ಗೊತ್ತಾ? ನಾನು ಯೇಸುವನ್ನು ಅರಿಯೆನು ಎಂದು ಹೇಳಿ ಅವರನ್ನು ಶಪಿಸಿ ಆಣೆ ಇಟ್ಟನು. 

 

ಈ ಇಬ್ಬರು ಶಿಷ್ಯರಲ್ಲಿ ಯಾರು ದೊಡ್ಡ ತಪ್ಪು ಮಾಡಿದ್ದಾರೆಂದು ತೋರುತ್ತದೆ? ಇಸ್ಕರಿಯೋತ ಯೂದ ಮಾಡಿದಂತೆ ಪೇತ್ರನು ತನ್ನ ಜೀವನದ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ ಬಹು ವ್ಯಥೆಪಟ್ಟು ಅತ್ತು ಒಪ್ಪಿಸಿಕೊಟ್ಟರು. (ಲೂಕ 22:62) ಪೇತ್ರನು ಯೇಸುವನ್ನು ಯಾವ ಜನರ ಮುಂದೆ ನಿರಾಕರಿಸಿದರೋ ಅದೇ ಜನರ ಮಧ್ಯದಲ್ಲಿ ಪ್ರಸಿದ್ಧ ಪಡಿಸಿ ಸಾಕ್ಷಿಯಾಗಿ ನಿಂತರು. ಅವರು ತನ್ನ ಸ್ವಂತ ಬಲದಿಂದ ಇದೆಲ್ಲವನ್ನೂ ಮಾಡಿದರೇ? ಇಲ್ಲವಲ್ಲಾ, ಇನ್ನು ಮುಂದೆ ತನ್ನ ಸ್ವಂತ ಬಲದಿಂದ ಮತ್ತು ವೈರಾಗ್ಯದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅರಿತು, ಅವರು ಪವಿತ್ರಾತ್ಮನ ಆಳ್ವಿಕೆಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ದೇವರ ಬಲದೊಂದಿಗೆ ದೇವರಿಗೆ ಸಾಕ್ಷಿಯಾಗಿ ನಿಂತರು.

 

ನನ್ನ ಪ್ರೀತಿಯ ಸಹೋದರ ಸಹೋದರಿಯರೇ! ನಮ್ಮ ಕೈಯಲ್ಲಿರುವ ಲೇಖನಿಯು ತನ್ನನ್ನು ತಾನೇ ಸಂಪೂರ್ಣವಾಗಿ ಒಪ್ಪಿಸಿ ನಮಗೆ ಮತ್ತು ಇತರರಿಗೆ ಉಪಯುಕ್ತವಾಗುವಂತೆ, ನಾವು ಪವಿತ್ರಾತ್ಮನ ಸಹಾಯದಿಂದ ನಮ್ಮ ಜೀವನವನ್ನು ದೇವರಿಗೆ ಒಪ್ಪಿಸಿ ಕೊಟ್ಟು ಬಲಹೊಂದಿ ಯೇಸುಕ್ರಿಸ್ತನ ಹೆಸರನ್ನು ಎಲ್ಲೆಡೆ ಸಾರುತ್ತಾ ಆತನಿಗೆ ಸಾಕ್ಷಿಯಾಗಿ ಬದುಕೋಣ.

- Mrs. ಜೆಸಿಲ್ಡಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಎಲ್ಲಾ ಸೇವಾ ಕ್ಷೇತ್ರಗಳಲ್ಲಿ 24-ಗಂಟೆಗಳ ಸತತ ಸರಪಳಿ ಪ್ರಾರ್ಥನೆ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)