Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 24.02.2024

ಧೈನಂದಿನ ಧ್ಯಾನ(Kannada) – 24.02.2024

 

ಸ್ವಲ್ಪ ಬಲವುಳ್ಳ ಬಲಶಾಲಿ 

 

"…ಹೋಗು; ಈ ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ವಿುದ್ಯಾನ್ಯರಿಂದ ಬಿಡಿಸು…" - ನ್ಯಾಯಸ್ಥಾಪಕ. 6:14

 

ಮೂವರು ಯುವಕರು ಶಿಲುಬೆಯನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಿದ್ದರು. ಒಬ್ಬನು ತನ್ನ ಶಿಲುಬೆಯು ತುಂಬಾ ಭಾರವಾಗಿದೆ ಎಂದು ಅದರ ಉದ್ದವನ್ನು ಕಡಿಮೆ ಮಾಡಿದನು. ಎರಡನೆಯವನೂ ಹಾಗೆಯೇ ಮಾಡಿದನು. ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಅಂತರವಿತ್ತು. ಮೊದಲೆರಡು ಜನರು ಆ ಅಂತರವನ್ನುದಾಟಿ ಹೋಗಲು ಏನು ಮಾಡಬೇಕೆಂದು ಗೊಂದಲಕ್ಕೊಳಗಾದರು. ಮೂರನೇ ವ್ಯಕ್ತಿ ಬಂದು ತನ್ನ ಭುಜದ ಮೇಲಿದ್ದ ಶಿಲುಬೆಯನ್ನು ಆ ಅಂತರದ ಮೇಲೆ ಇಟ್ಟರು. ಅದು ಸೇತುವೆಯಾಗಿ ಮಾರ್ಪಟ್ಟಿತು. ಸುಲಭವಾಗಿ ಅದನ್ನು ದಾಟಿ ಹೋದರು. ಇಬ್ಬರೂ ಯೋಚಿಸಿದರು. ದೇವರು ನಮಗೆ ನೇಮಿಸಿದ ಶಿಲುಬೆಯನ್ನು ಹೊರಲು ನಿರಾಕರಿಸಿದ ತಮ್ಮ ದುಷ್ಟ ಕೃತ್ಯವನ್ನು ನೆನೆಸಿ ಪಶ್ಚಾತ್ತಾಪಪಟ್ಟರು.

 

ಸತ್ಯವೇದದಲ್ಲಿ, 1 ಸಮುವೇಲ 6 ನೇ ಅಧ್ಯಾಯ 7, 8 ವಚನಗಳಲ್ಲಿ ಓದುತ್ತೇವೆ. ಯೆಹೋವನ ಮಂಜೂಷವನ್ನು ಹೊರಲು ಎಂದೂ ನೊಗಹೊರದ ಹಸು ತನ್ನ ಕರುಗಳನ್ನು ಬಿಟ್ಟು ಬಿಟ್ಟು ಮಂಜೂಷವನ್ನು ಹೊತ್ತು ಯೆಹೋಶುವನ ಹೊಲದ ಬಲಗಡೆಗೆ ಮತ್ತು ಎಡಗಡೆಗೆ ಹೋಗದೆ ನೇರವಾಗಿ ಹೋಯಿತೇ! ನಂತರ ತನ್ನನ್ನೇ ಯಜ್ಞವಾಗಿ ಅರ್ಪಿಸಿತೇ! ತನ್ನ ಕರುವಿನ ಸ್ಥಿತಿಯನ್ನು ನೆನೆಸಿ ಹಿಂತಿರುಗಿ ನೋಡಲಿಲ್ಲ. ಈ ಮಂಜೂಷವನ್ನು ಹೊರಲು ಸಾಧ್ಯವಾ? ನಮಗೆ ಅಭ್ಯಾಸವಿಲ್ಲವೇ ಎಂದು ನಿಂತ ಸ್ಥಳದಲ್ಲೇ ನಿಲ್ಲಲಿಲ್ಲ. ಐದು ತಿಳುವಳಿಕೆ ಇರುವ ಮೃಗವೇ ದೇವರ ಮಂಜೂಷವನ್ನು ಹೊರಲು ಸಾಧ್ಯ ಎಂದರೆ ಅಭಿಷೇಕವನ್ನು ಮತ್ತು ಬಲವನ್ನು ಪಡೆದುಕೊಂಡ ನಾವು ಏಕೆ ಶಿಲುಬೆಯನ್ನು ಹೊತ್ತುಕೊಂಡು ಶಿಲುಬೆಯ ಶ್ರೇಷ್ಠತೆ ಮತ್ತು ಯೇಸುವಿನ ಪ್ರೀತಿಯ ಬಗ್ಗೆ ಇತರರಿಗೆ ಹೇಳಬಾರದು?

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ! ನಿಮಗಿರುವ ಸ್ವಲ್ಪ ಶಕ್ತಿಯೇ ಸಾಕು ದೇವರು ನಿಮಗೆ ನೇಮಿಸಿರುವ ಕಾರ್ಯ ನಿಮ್ಮ ದೃಷ್ಟಿಯಲ್ಲಿ ಭಾರವಾಗಿ ಕಾಣಿಸಬಹುದು. ನಮ್ಮ ಬುದ್ಧಿವಂತಿಕೆಯಿಂದ ಅದನ್ನು ಕಡಿಮೆ ಮಾಡಿ ಲಘುವಾಗಿ ಮಾಡಿಕೊಳ್ಳೋಣ ಎಂದು ಯೋಚಿಸಬಹುದು. ಆದರೆ ದೇವರ ನೇಮಿಸಿರುವುದೇ ನಮಗೆ ಆಶೀರ್ವಾದ. ನೊಗಹೊರದ ಹಸು ತನ್ನ ಮೇಲೆ ಇಡಲ್ಪಟ್ಟ ಯೆಹೋವನ ಮಂಜೂಷವನ್ನು ಕೊನೆಯವರೆಗೂ ಹೊತ್ತುಕೊಂಡು ತನ್ನ ಕೆಲಸವನ್ನು ಮುಗಿಸುವುದಾದರೆ, ನಮ್ಮ ಆಲೋಚನೆಗಳು ಹೇಗಿರಬೇಕು ಎಂದು ಯೋಚಿಸೋಣ. ದೇವರು ನಿಮ್ಮ ಮೇಲಿಟ್ಟ ಶಿಲುಬೆಯನ್ನು ಗೊಣಗದೆ ಹೊತ್ತುಕೊಂಡು ದೇವರ ಚಿತ್ತದಂತೆ ಈ ಲೋಕದಲ್ಲಿ ಜೀವಿಸೋಣ.

- Mrs. ಭುವಿತಾ ಎಬಿನೇಜರ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ನಡೆಯುವಂತಹ ಸ್ವಸ್ಥತಾ ಕೂಟದಲ್ಲಿ ಆನ್‌ಲೈನ್ ಮತ್ತು ಆಮೆನ್ ವಿಲೇಜ್ ಟಿವಿ ಮೂಲಕ ಭಾಗವಹಿಸುವವರು ಅದ್ಬುತವಾದ ಸ್ವಸ್ಥತೆಯನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)